ಶ್ರೇಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ: ಟಿ20 ಇತಿಹಾಸದಲ್ಲಿ ಯಾವೊಬ್ಬ ಭಾರತೀಯನೂ ಮಾಡಿರದ ವಿಶೇಷ ರೆಕಾರ್ಡ್ ಅದು…!

Virat Kohli 12000 Runs: ವಿರಾಟ್ ಕೇವಲ 6 ರನ್ ಗಳಿಸುತ್ತಿದ್ದಂತೆ, T20 ಸ್ವರೂಪದಲ್ಲಿ 12,000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ ಆರನೇ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. ಈ ಸ್ವರೂಪದಲ್ಲಿ ಅತಿ ಹೆಚ್ಚು ರನ್‌ ಯೂನಿವರ್ಸ್ ಬಾಸ್ ಎಂದು ಕರೆಯಲ್ಪಡುವ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. (14,562 ರನ್‌)

Written by - Bhavishya Shetty | Last Updated : Mar 22, 2024, 09:51 PM IST
    • ವಿರಾಟ್ ಕೇವಲ 6 ರನ್ ಗಳಿಸುತ್ತಿದ್ದಂತೆ, T20 ಸ್ವರೂಪದಲ್ಲಿ 12,000 ರನ್ ಪೂರೈಸಿದ್ದಾರೆ
    • ಮೊದಲ ಭಾರತೀಯ ಮತ್ತು ವಿಶ್ವದ ಆರನೇ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ
    • ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ 377ನೇ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ
ಶ್ರೇಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ: ಟಿ20 ಇತಿಹಾಸದಲ್ಲಿ ಯಾವೊಬ್ಬ ಭಾರತೀಯನೂ ಮಾಡಿರದ ವಿಶೇಷ ರೆಕಾರ್ಡ್ ಅದು…! title=
Virat Kohli

Virat Kohli 12000 Runs: ಐಪಿಎಲ್‌’ನಲ್ಲಿ ಸತತ 17ನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಲು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದಿದ್ದಾರೆ. ಅಂದಹಾಗೆ ಸರಣಿಯ ಮೊದಲ ಪಂದ್ಯದಲ್ಲೇ ತಮ್ಮ ವೃತ್ತಿಜೀವನದ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.  

ಇದನ್ನೂ ಓದಿ: IPL 2024: ಐಪಿಎಲ್ ಟ್ರೋಫಿ ನೋಡುತ್ತಿದ್ದಂತೆ ಕೈಮುಗಿದ RCB ನಾಯಕ… ಫಾಫ್ ನಡೆಗೆ ಮೆಚ್ಚುಗೆಯ ಮಹಾಪೂರ

ವಿರಾಟ್ ಕೇವಲ 6 ರನ್ ಗಳಿಸುತ್ತಿದ್ದಂತೆ, T20 ಸ್ವರೂಪದಲ್ಲಿ 12,000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ ಆರನೇ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. ಈ ಸ್ವರೂಪದಲ್ಲಿ ಅತಿ ಹೆಚ್ಚು ರನ್‌ ಯೂನಿವರ್ಸ್ ಬಾಸ್ ಎಂದು ಕರೆಯಲ್ಪಡುವ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. (14,562 ರನ್‌)

ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ 377ನೇ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. 12000 ರನ್’ಗಳಲ್ಲಿ 8 ಶತಕ ಮತ್ತು 91 ಅರ್ಧ ಶತಕಗಳೂ ಸೇರಿವೆ. ಜೊತೆಗೆ 1074 ಬೌಂಡರಿ ಮತ್ತು 371 ಸಿಕ್ಸರ್‌ ಕೂಡ ಇದೆ.

  • ಕ್ರಿಸ್ ಗೇಲ್ (WI) - 463 ಪಂದ್ಯಗಳು - 14562 ರನ್
  • ಶೋಯೆಬ್ ಮಲಿಕ್ (PAK)-542 ಪಂದ್ಯಗಳು- 13360 ರನ್
  • ಕೀರಾನ್ ಪೊಲಾರ್ಡ್ (WI)- 660 ಪಂದ್ಯಗಳು- 12900 ರನ್
  • ಅಲೆಕ್ಸ್ ಹೇಲ್ಸ್ (ENG)- 449 ಪಂದ್ಯಗಳು- 12319 ರನ್
  • ಡೇವಿಡ್ ವಾರ್ನರ್ (AUS)- 370 ಪಂದ್ಯಗಳು- 12319 ರನ್
  • ವಿರಾಟ್ ಕೊಹ್ಲಿ (IND)- 376 ಪಂದ್ಯಗಳು- 12000* ರನ್

ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನ ಎಬಿ ಡಿವಿಲಿಯರ್ಸ್ ಕರೆಯೋದು ಹೀಗೆ… ಎಷ್ಟೊಂದು ಮುದ್ದಾಗಿದೆ ನೋಡಿ ಈ ಅಡ್ಡಹೆಸರು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News