RCB ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದ ಹೇಳಿದ ವಿರಾಟ್ ಕೊಹ್ಲಿ: ಹೀಗೊಂದು ಭಾವನಾತ್ಮಕ ಪೋಸ್ಟ್ ಶೇರ್

Virat Kohli: ಸೋಲಿನ ಬಳಿಕ ಆರ್‌’ಸಿಬಿ ಪಾಳಯದಲ್ಲಿ ನಿರಾಸೆ ಮೂಡಿತ್ತು. ತಂಡದ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ನೋವು ಅನುಭವಿಸಿರುವುದು ಕಂಡುಬಂದಿತ್ತು. ಇದೀಗ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಅನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

Written by - Bhavishya Shetty | Last Updated : May 24, 2024, 09:48 PM IST
    • ಸೋಲಿನ ಬಳಿಕ ಆರ್‌’ಸಿಬಿ ಪಾಳಯದಲ್ಲಿ ನಿರಾಸೆ ಮೂಡಿತ್ತು
    • ಈ ಋತುವಿನಲ್ಲಿ ವಿರಾಟ್ ಕೊಹ್ಲಿ ಫಾರ್ಮ್‌’ನಲ್ಲಿ ಕಾಣಿಸಿಕೊಂಡಿದ್ದಾರೆ.
    • ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದಗಳು ಎಂದ ಕೊಹ್ಲಿ
RCB ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದ ಹೇಳಿದ ವಿರಾಟ್ ಕೊಹ್ಲಿ: ಹೀಗೊಂದು ಭಾವನಾತ್ಮಕ ಪೋಸ್ಟ್ ಶೇರ್ title=
Virat Kohli

Virat Kohli: ಮೇ 22 ರಂದು ಅಹಮದಾಬಾದ್‌’ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿತು. ಮೊದಲು ಬ್ಯಾಟ್ ಮಾಡಿದ ಆರ್‌’ಸಿಬಿ 172 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ರಾಜಸ್ಥಾನ 19ನೇ ಓವರ್‌’ನಲ್ಲಿ 176 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಆರೋಗ್ಯ ನಿಧಿ ನುಗ್ಗೆ ಸೊಪ್ಪು: ಇದರ ನೀರು ಕುಡಿದರೆ ಈ 5 ಕಾಯಿಲೆಗಳಿಂದ ಶಾಶ್ವತ ಪರಿಹಾರ ಸಿಗುತ್ತೆ

ಸೋಲಿನ ಬಳಿಕ ಆರ್‌’ಸಿಬಿ ಪಾಳಯದಲ್ಲಿ ನಿರಾಸೆ ಮೂಡಿತ್ತು. ತಂಡದ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ನೋವು ಅನುಭವಿಸಿರುವುದು ಕಂಡುಬಂದಿತ್ತು. ಇದೀಗ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಅನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

“ಯಾವಾಗಲೂ RCB ಯನ್ನು ಪ್ರೀತಿಸಿ, ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದಗಳು” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Virat Kohli (@virat.kohli)

 

ಇದನ್ನೂ ಓದಿ: ‘ಮಿಥಾಲಿ ರಾಜ್ ಜೊತೆ ನನ್ನ ಮದುವೆ’- 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!

ಈ ಋತುವಿನಲ್ಲಿ ವಿರಾಟ್ ಕೊಹ್ಲಿ ಫಾರ್ಮ್‌’ನಲ್ಲಿ ಕಾಣಿಸಿಕೊಂಡಿದ್ದಾರೆ. 14 ಇನ್ನಿಂಗ್ಸ್‌’ಗಳಲ್ಲಿ 61.75 ಸರಾಸರಿ ಮತ್ತು 154.69 ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಕೊಹ್ಲಿ 24 ಎಸೆತಗಳಲ್ಲಿ 33 ರನ್‌’ಗಳ ಇನಿಂಗ್ಸ್‌ ಆಡಿದ್ದರು. ಆದರೆ ಕೊಹ್ಲಿಯ ಅದ್ಭುತ ಇನ್ನಿಂಗ್ಸ್ ಅನ್ನು ಯುಜ್ವೇಂದ್ರ ಚಹಾಲ್ ಅಂತ್ಯಗೊಳಿಸಿದರು. ಚಹಲ್ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News