/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿ(South Africa Vs India)ಯಲ್ಲಿ ವೈಟ್ ವಾಶ್ ಆಗಿರುವ ಟೀಂ ಇಂಡಿಯಾ ಭಾರೀ ಮುಖಭಂಗ ಅನುಭವಿಸಿದೆ. ತಂಡದ ಮಧ್ಯಮ ಕ್ರಮಾಂಕವೇ ಹೀನಾಯ ಸೋಲಿಗೆ ಪ್ರಮುಖ ಕಾರಣವೆಂದು ನಾಯಕ ಕೆ.ಎಲ್.ರಾಹುಲ್(KL Rahul) ಹೇಳಿದ್ದಾರೆ. ಕೇಪ್‌ಟೌನ್‌ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಅರ್ಧಶತಕ ಬಾರಿಸಿದರೂ ರಿಷಭ್ ಪಂತ್ ಬ್ಯಾಟಿಂಗ್ ನಲ್ಲಿ ಸಂಪೂರ್ಣವಾಗಿ ವಿಫಲರಾದರು.

ಆರಂಭಿಕ ಬ್ಯಾಟ್ಸ್ ಮನ್ ಗಳು ಔಟಾದರೂ ಬಳಿಕ ಕ್ರೀಸ್ ನಲ್ಲಿ ನಿಂತು ಆಡುವ ಆಟಗಾರರು ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. 2 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಭಾರತ ತಂಡ 3ನೇ ಏಕದಿನ ಪಂದ್ಯ(South Africa vs India 3rd ODI)ದಲ್ಲಿ ಗೆಲ್ಲುತ್ತೆ ಅಂತಾ ಅಭಿಮಾನಿಗಳು ಭಾವಿಸಿದ್ದರು. ಆದರೆ ಟೀಂ ಇಂಡಿಯಾ ಕೇವಲ 4 ರನ್ ಗಳ ರೋಚಕ ಸೋಲಿನ ಮೂಲಕ ವೈಟ್ ವಾಶ್ ಆಯಿತು. ಭಾರತದ ಮಧ್ಯಮ ಕ್ರಮಾಂಕ ವಿಫಲವಾಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಗಲು ಕಾರಣವಾಯಿತು. ನಾಯಕ ಕೆ.ಎಲ್.ರಾಹುಲ್ ಔಟಾದ ಬಳಿಕ ವಿರಾಟ್ ಕೊಹ್ಲಿ ಶಿಖರ್ ಧವನ್ ಜೊತೆಗೂಡಿ 2ನೇ ವಿಕೆಟ್ ಗೆ 92 ರನ್ ಗಳ ಜೊತೆಯಾಟ ನೀಡಿದರು. ಆದರೆ ನಂತರ ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡಿದ್ದರಿಂದ ಟೀಂ ಇಂಡಿಯಾಗೆ ಸಂಕಷ್ಟ ಎದುರಾಯಿತು.

ಇದನ್ನೂ ಓದಿ: Virat Kohli:ರಾಷ್ಟ್ರಗೀತೆಗೆ ಅಗೌರವ ತೋರಿದ್ದಕ್ಕಾಗಿ ಟ್ರೋಲ್ ಆದ ವಿರಾಟ್​ ಕೊಹ್ಲಿ

ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಬೇಕಿದ್ದ ರಿಷಭ್ ಪಂತ್ (Rishabh Pant) ಗೋಲ್ಡನ್ ಡಕ್ ಆಗಿದ್ದು ಟೀಂ ಇಂಡಿಯಾಗೆ ದೊಡ್ಡ ಹೊಡೆತ ಬಿದ್ದಂತಾಯಿತು. 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಪಂತ್ 85 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. 3ನೇ ಪಂದ್ಯದಲ್ಲಿಯೂ ಅವರು ಭರ್ಜರಿ ಬ್ಯಾಟಿಂಗ್ ಮಾಡುತ್ತಾರೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಪಂತ್ ಸೊನ್ನೆ ಸುತ್ತುವ ಮೂಲಕ ಬಹುದೊಡ್ಡ ನಿರಾಸೆ ಮೂಡಿಸಿದರು.

ಪಂತ್ ಡಕ್ ಔಟ್ ಆಗಿದ್ದಕ್ಕೆ ವಿರಾಟ್ ಕೊಹ್ಲಿ(Virat Kohli) ಮಾತ್ರವಲ್ಲ ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಮೈದಾನಕ್ಕೆ ಬಂದ ಬೆನ್ನಲ್ಲೇ ನಿಂತು ಆಡುವ ತಾಳ್ಮೆ ತೋರದ ಪಂತ್ ಕೆಟ್ಟ ಹೊಡೆತಕ್ಕೆ ಮುಂದಾಗಿ ಔಟಾಗುತ್ತಿದ್ದಾರೆ. ಅನಗತ್ಯ ಹೊಡೆತಕ್ಕೆ ಮುಂದಾಗಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಪಂತ್ ನೋಡಿ ನಾನ್ ಸ್ಟ್ರೈಕ್ ನಲ್ಲಿದ್ದ ವಿರಾಟ್ ಕೊಹ್ಲಿ ಕೋಪಗೊಂಡಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪಂತ್ ಔಟಾದ ಕೂಡಲೇ ಕೊಹ್ಲಿ ಅವರತ್ತ ದಿಟ್ಟಿಸಿ ನೋಡಿ ಕೋಪ ವ್ಯಕ್ತಪಡಿಸಿದ್ದಾರೆ.   

ಇದನ್ನೂ ಓದಿ: South Africa vs India: ಕೆ.ಎಲ್.ರಾಹುಲ್ ನಾಯಕತ್ವವನ್ನು ಬೆಂಬಲಿಸಿದ ಕೋಚ್ ರಾಹುಲ್ ದ್ರಾವಿಡ್

ದೀಪಕ್ ಚಹರ್(Deepak Chahar) ಅವರ ಅರ್ಧಶತಕದ ಹೋರಾಟದ ಮಧ್ಯೆಯೂ ಟೀಂ ಇಂಡಿಯಾ(Team India)ದಕ್ಷಿಣ ಆಫ್ರಿಕಾ ವಿರುದ್ಧ 4 ರನ್ ಗಳ ವಿರೋಚಿತ ಸೋಲು ಕಾಣಬೇಕಾಯಿತು. 3 ಪಂದ್ಯಗಳನ್ನು ಗೆದ್ದ ಆಫ್ರಿಕಾ ತಂಡ ಭಾರತವನ್ನು ವೈಟ್ ವಾಶ್ ಮಾಡಿತು. 3 ಪಂದ್ಯಗಳಲ್ಲಿ ಒಂದೂ ಗೆಲುವು ದಾಖಲಿಸದ ರಾಹುಲ್ ಪಡೆ ದೊಡ್ಡ ಮುಖಭಂಗ ಅನುಭವಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Virat Kohli showed anger at Rishabh Pant's innocence: 'Heropanti' did not work
News Source: 
Home Title: 

Virat Kohli: ರಿಷಭ್ ಪಂತ್ ‘ಗೋಲ್ಡನ್ ಡಕ್’ಗೆ ಔಟಾದಾಗ ಕೊಹ್ಲಿ ಮಾಡಿದ್ದೇನು ನೋಡಿ!

Virat Kohli: ರಿಷಭ್ ಪಂತ್ ‘ಗೋಲ್ಡನ್ ಡಕ್’ಗೆ ಔಟಾದಾಗ ಕೊಹ್ಲಿ ಮಾಡಿದ್ದೇನು ನೋಡಿ!
Caption: 
ರಿಷಭ್ ಪಂತ್ ದಿಟ್ಟಿಸಿ ನೋಡಿ ಕೋಪಿಸಿಕೊಂಡ ಕೊಹ್ಲಿ
Yes
Is Blog?: 
No
Tags: 
Facebook Instant Article: 
Yes
Highlights: 

ಕೇಪ್ ಟೌನ್‌ ಮೈದಾನದಲ್ಲಿ ಹೀರೋ ಆಗಲು ಹೋಗಿ ಜೀರೋ ಆದ ರಿಷಭ್ ಪಂತ್

ರಿಷಭ್ ಪಂತ್ ‘ಗೋಲ್ಡನ್ ಡಕ್’ಗೆ ಕೋಪ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಸೋಲಿಗೆ ಮಧ್ಯಮ ಕ್ರಮಾಂಕವೇ ಕಾರಣವೆಂದ ಕೆ.ಎಲ್.ರಾಹುಲ್

Mobile Title: 
Virat Kohli: ರಿಷಭ್ ಪಂತ್ ‘ಗೋಲ್ಡನ್ ಡಕ್’ಗೆ ಔಟಾದಾಗ ಕೊಹ್ಲಿ ಮಾಡಿದ್ದೇನು ನೋಡಿ!
Puttaraj K Alur
Publish Later: 
No
Publish At: 
Monday, January 24, 2022 - 16:10
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
2
Is Breaking News: 
No