ವಿರಾಟ್ ಕೊಹ್ಲಿ, ಮೀರಾಬಾಯಿ ಚಾನುಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು  ಮಹಿಳಾ ವೇಟ್ ಲಿಫ್ಟಿಂಗ್ ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮಿರಾಬಾಯ್ ಚಾನು ಅವರಿಗೆ 2018  ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆತಿದೆ. 

Last Updated : Sep 20, 2018, 06:02 PM IST
ವಿರಾಟ್ ಕೊಹ್ಲಿ, ಮೀರಾಬಾಯಿ ಚಾನುಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ title=
Photo:twitter

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು  ಮಹಿಳಾ ವೇಟ್ ಲಿಫ್ಟಿಂಗ್ ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮಿರಾಬಾಯ್ ಚಾನು ಅವರಿಗೆ 2018  ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆತಿದೆ. 

2016 ರಲ್ಲಿ ಈ ಪ್ರಶಸ್ತಿ ಪಡೆಯಲು ವಿಫಲವಾಗಿದ್ದ ಕೊಹ್ಲಿಗೆ ಈ ಬಾರಿ ಅದೃಷ್ಟ ಕುಲಾಹಿಸಿದೆ. ಆ ಮೂಲಕ ವಿರಾಟ್ ಕೊಹ್ಲಿ ಅವರು  ಸಚಿನ್ ತೆಂಡುಲ್ಕರ್ (1997) ಮತ್ತು ಮಹೇಂದ್ರ ಸಿಂಗ್ ಧೋನಿ (2007) ನಂತರ ಖೇಲ್ ಪಡೆದ ಮೂರನೇ ಕ್ರಿಕೆಟಿಗ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ.

ಇನ್ನೊಂದೆಡೆ 48 ಕೆಜಿ ವಿಭಾಗದಲ್ಲಿ ವಿಶ್ವಚಾಂಪಿಯನ್ ಆಗಿದ್ದ 24 ವರ್ಷ ವಯಸ್ಸಿನ ಚಾನು ಅವರು ಮಹಿಳಾ ವೇಟ್ ಲಿಫ್ಟಿಂಗ್ ನಲ್ಲಿ ನೀಡಿದ ಅಮೋಘ ಪ್ರದರ್ಶನದಿಂದಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಇತ್ತೀಚಿಗಷ್ಟೇ ಗಾಯಗೊಂಡು ಏಷ್ಯನ್ ಕ್ರೀಡಾಕೂಟ ತಪ್ಪಿಸಿಕೊಂಡಿದ್ದ ಮೀರಾಬಾಯಿ ಚಾನುಗೆ ಈ ಪ್ರಶಸ್ತಿ ಈಗ ಹೊಸ ಹುಮ್ಮಸ್ಸು ನೀಡಿದೆ.

Trending News