Viral Video: ಮೈದಾನದೊಳಗೆ ಅಭಿಮಾನಿ ನುಗ್ಗಿದ್ದಕ್ಕೆ ಬೆಚ್ಚಿಬಿದ್ದ ರೋಹಿತ್‌ ಶರ್ಮಾ!

Wankhede Stadium: 36 ವರ್ಷ ವಯಸ್ಸಿನ ರೋಹಿತ್ ಶರ್ಮಾಗೆ ಅಭಿಮಾನಿಯ ದಿಢೀರ್‌ ಎಂಟ್ರಿಯಿಂದ ಶಾಕ್‌ ಆಗಿದೆ. ಅಭಿಮಾನಿ ತಬ್ಬಿಕೊಳ್ಳಲು ಓಡಿ ಬಂದಾಗ ರೋಹಿತ್ ನಿರಾಕರಿಸಿದರು. ಈ ವೇಳೆ ಅಭಿಮಾನಿ ಕೀಪಿಂಗ್‌ ಮಾಡುತ್ತಿದ್ದ ಇಶಾನ್ ಕಿಶನ್ ಅವರಿಗೆ ಕೈಕೊಟ್ಟು ಅಪ್ಪಿಕೊಂಡಿದ್ದಾನೆ.

Written by - Puttaraj K Alur | Last Updated : Apr 2, 2024, 05:02 PM IST
  • ಮುಂಬೈ ಇಂಡಿಯನ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ಪಂದ್ಯದ ವೇಳೆ ಭದ್ರತಾ ಲೋಪ
  • ಪಂದ್ಯ ನಡೆಯುವ ವೇಳೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ ಅಭಿಮಾನಿ
  • ಅಭಿಮಾನಿಯ ದಿಢೀರ್‌ ಎಂಟ್ರಿ ಕಂಡು ಬೆಚ್ಚಿಬಿದ್ದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ
Viral Video: ಮೈದಾನದೊಳಗೆ ಅಭಿಮಾನಿ ನುಗ್ಗಿದ್ದಕ್ಕೆ ಬೆಚ್ಚಿಬಿದ್ದ ರೋಹಿತ್‌ ಶರ್ಮಾ! title=
ಪಂದ್ಯದ ವೇಳೆ ಭದ್ರತಾ ಲೋಪ!

ನವದೆಹಲಿ: ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಅಹಿತಕ ಘಟನೆಯೊಂದು ನಡೆದಿದೆ. ಪಂದ್ಯ ನಡೆಯುತ್ತಿದ್ದ ವೇಳೆಯೇ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್‌ ಶರ್ಮಾ ಬಳಿ ಓಡಿ ಹೋದಿದ್ದಾನೆ. ಮೈದಾನದಲ್ಲಿ ಅಭಿಮಾನಿಯ ದಿಢೀರ್‌ ಎಂಟ್ರಿಯಿಂದ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಪಂದ್ಯದ ವೇಳೆ ಭದ್ರತಾ ನಿಯಮವನ್ನು ಉಲ್ಲಂಘಿಸಿ ಮೈದಾನದೊಳಗೆ ನುಗ್ಗಿದ ಅಭಿಮಾನಿ ರೋಹಿತ್ ಶರ್ಮಾರನ್ನು ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಸ್ಪಿಪ್‌ನಲ್ಲಿ ರೋಹಿತ್‌ ಫೀಲ್ಡಿಂಗ್‌ ಮಾಡುತ್ತಿದ್ದರು. ದಿಢೀರ್‌ ಆಗಿ ಅಭಿಮಾನಿ ಮೈದಾನದೊಳಕ್ಕೆ ಆಗಮಿಸಿ ರೋಹಿತ್‌ ಬಳಿ ಓಡಿ ಬಂದಿದ್ದಾನೆ. ಆತ ಹಿಂದಿನಿಂದ ಬಂದ ಕಾರಣ ರೋಹಿತ್‌ಗೆ ಯಾವುದೇ ಅರಿವಿರಲಿಲ್ಲ. ಹೀಗಾಗಿ ಆತ ಹತ್ತಿರ ಬರುತ್ತಿದ್ದಂತೆಯೇ ರೋಹಿತ್ ಬಿಚ್ಚಿಬಿದಿದ್ದಾರೆ. 

ಇದನ್ನೂ ಓದಿ: ಐಪಿಎಲ್‌ನ ಎರಡು ಪಂದ್ಯಗಳ ವೇಳಾಪಟ್ಟಿ ಬದಲಾವಣೆ: BCCI ನಿರ್ಧಾರದ ಹಿಂದಿನ ಕಾರಣ ಇದೇ

36 ವರ್ಷ ವಯಸ್ಸಿನ ರೋಹಿತ್ ಶರ್ಮಾಗೆ ಅಭಿಮಾನಿಯ ದಿಢೀರ್‌ ಎಂಟ್ರಿಯಿಂದ ಶಾಕ್‌ ಆಗಿದೆ. ಅಭಿಮಾನಿ ತಬ್ಬಿಕೊಳ್ಳಲು ಓಡಿ ಬಂದಾಗ ರೋಹಿತ್ ನಿರಾಕರಿಸಿದರು. ಈ ವೇಳೆ ಅಭಿಮಾನಿ ಕೀಪಿಂಗ್‌ ಮಾಡುತ್ತಿದ್ದ ಇಶಾನ್ ಕಿಶನ್ ಅವರಿಗೆ ಕೈಕೊಟ್ಟು ಅಪ್ಪಿಕೊಂಡಿದ್ದಾನೆ. ಅಷ್ಟೊತ್ತಿಗೆ ಭದ್ರತಾ ಅಧಿಕಾರಿಗಳು ಬಂದು ಅಭಿಮಾನಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮೈದಾನದಿಂದ ಹೊರಕರೆದುಕೊಂಡು ಹೋಗಿದ್ದಾರೆ.

ಪಂದ್ಯ ನಡುವೆಯುವ ವೇಳೆ ತಮ್ಮ ನೆಚ್ಚಿನ ಆಟಗಾರರನ್ನು ಭೇಟಿ ಮಾಡಲು ಅಭಿಮಾನಿಗಳು ಇನ್ನಿಲ್ಲದ ಹರಸಾಹಸ ಮಾಡುತ್ತಾರೆ. ನಿಯಮಗಳನ್ನು ಉಲ್ಲಂಘಿಸಿ, ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಬ್ಯಾರಿಕೇಡ್ ಹಾರಿ ಮೈದಾನಕ್ಕೆ ನುಗ್ಗುವ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಕಾಲು ಮುಗಿಯುವುದು, ಕೈಕುಲುಕುವುದು, ಸೆಲ್ಫಿ ತೆಗೆಸಿಕೊಳ್ಳುವುದು ಮಾಡುತ್ತಾರೆ. ಮೊನ್ನೆಯಷ್ಟೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೈದಾನಕ್ಕೆ ನುಗಿದ್ದ ಅಭಿಮಾನಿಯೊಬ್ಬ ವಿರಾಟ್‌ ಕೊಹ್ಲಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದ. ಆತನನ್ನು ಬಳಿಕ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ತಪ್ಪು ಮಾಹಿತಿ ನೀಡಿದ ಕಾರಣ ಆತನ ವಿರುದ್ಧ ಪ್ರಕರಣ ಕೂಡ ದಾಖಲಿಸಿಕೊಂಡಿದ್ದರು.  

ಇದನ್ನೂ ಓದಿ: ವಿಶೇಷ ದಾಖಲೆಯ ಹೊಸ್ತಿಲಲ್ಲಿ ವಿರಾಟ್: ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್’ಮನ್ ಆಗ್ತಾರಾ ಕಿಂಗ್ ಕೊಹ್ಲಿ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News