Venkatesh Iyer: ಎಂಗೇಜ್‌ ಆದ ಟೀಂ ಇಂಡಿಯಾದ ಸ್ಟಾರ್​ ಪ್ಲೇಯರ್...! ಹುಡುಗಿ ಯಾರು ಗೊತ್ತಾ?

Venkatesh Iyer Engagement: ಟೀಂ ಇಂಡಿಯಾದ ಯುವ ಕ್ರಿಕೆಟಿಗ "ನನ್ನ ಜೀವನದ ಮುಂದಿನ ಅಧ್ಯಾಯ" ಎಂದು ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.. ಶೀಘ್ರದಲ್ಲೇ ವೈವಾಹಿಕ ಜೀವನಕ್ಕೂ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.. 

Written by - Savita M B | Last Updated : Nov 22, 2023, 11:13 AM IST
  • ಟೀಂ ಇಂಡಿಯಾದ ಯುವ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಸದ್ಯ ಶ್ರುತಿ ರಘುನಾಥನ್ ಅವರೊಂದಿಗೆ ಎಂಗೇಜ್‌ ಆಗಿದ್ದಾರೆ
  • ಇವರ ನಿಶ್ಚಿತಾರ್ಥವು ಅವರ ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು
  • ಶ್ರುತಿ ರಘುನಾಥನ್ ಫ್ಯಾಷನ್ ಡಿಸೈನರ್ ಮತ್ತು ಉತ್ತಮ ಸಿಂಗರ್‌ ಎಂದು ವರದಿಯಾಗಿದೆ.
Venkatesh Iyer: ಎಂಗೇಜ್‌ ಆದ ಟೀಂ ಇಂಡಿಯಾದ ಸ್ಟಾರ್​ ಪ್ಲೇಯರ್...! ಹುಡುಗಿ ಯಾರು ಗೊತ್ತಾ?  title=

Venkatesh Iyer: ಟೀಂ ಇಂಡಿಯಾದ ಯುವ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಸದ್ಯ ಶ್ರುತಿ ರಘುನಾಥನ್ ಅವರೊಂದಿಗೆ ಎಂಗೇಜ್‌ ಆಗಿದ್ದಾರೆ.. ಇವರ ನಿಶ್ಚಿತಾರ್ಥವು ಅವರ ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಟೀಂ ಇಂಡಿಯಾ ಆಟಗಾರರಾದ ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮನದೀಪ್ ಸಿಂಗ್, ಶ್ರೇಯಸ್ ಅಯ್ಯರ್, ನಮನ್, ಯುಜ್ವೇಂದ್ರ ಚಹಾಲ್ ಈ ನವ ಜೋಡಿಯನ್ನು ಅಭಿನಂದಿಸಿದ್ದಾರೆ. 

ಇನ್ನು ಶ್ರುತಿ ರಘುನಾಥನ್ ಫ್ಯಾಷನ್ ಡಿಸೈನರ್ ಮತ್ತು ಉತ್ತಮ ಸಿಂಗರ್‌ ಎಂದು ವರದಿಯಾಗಿದೆ. ಸದ್ಯ ಸ್ಟಾರ್‌ ಪ್ಲೇಯರ್‌ ವೆಂಕಟೇಶ್ ಅಯ್ಯರ್ ಅವರು ತಮ್ಮ ಇನ್ಸ್ಟಾಗ್ರಾಮ್ ಮೂಲಕ ನಿಶ್ಚಿತಾರ್ಥದ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. "ನನ್ನ ಜೀವನದ ಮುಂದಿನ ಅಧ್ಯಾಯ" ಎಂದು ಪೋಟೋಗಳ ಕೆಳಗೆ ಕ್ಯಾಪ್ಷನ್‌ ನೀಡಿದ್ದಾರೆ.. 

ಇದನ್ನೂ ಓದಿ-ವಿಶ್ವಕಪ್ ಸೋಲಿನ ಬಳಿಕ ಪ್ರೊ ಕಬ್ಬಡ್ಡಿ ಲೀಗ್ ನಲ್ಲಿ ಆಡುತ್ತಾರೆಯಂತೆ ಈ ಫಾಸ್ಟ್ ಬೌಲರ್ !

ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ ಈ ಟೀಂ ಇಂಡಿಯಾದ ಯುವ ಕ್ರಿಕೆಟಿಗ ಭಾರತಕ್ಕಾಗಿ ಎರಡು ODI ಮತ್ತು 9 T20I ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 24 ರನ್ ಗಳಿಸಿದ.. ಇವರು ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ 133 ರನ್ ಗಳಿಸಿದ್ದರು.

ವೆಂಕಟೇಶ್ ಅಯ್ಯರ್ ಐಪಿಎಲ್ 2023 ರಲ್ಲಿ ಕೆಕೆಆರ್ ಪರ ಆಡುವಾಗ ವಾಂಖೆಡೆ ಸ್ಟೇಡಿಯಂನಲ್ಲಿ ಶತಕ ಬಾರಿಸಿದ ಇವರು ಐಪಿಎಲ್‌ನಲ್ಲಿ 36 ಪಂದ್ಯಗಳನ್ನು ಆಡಿದ್ದಾರೆ ಮತ್ತು 956 ರನ್ ಗಳಿಸಿದ್ದಾರೆ.

ಇದನ್ನೂ ಓದಿ-IND vs AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮಾರಣಾಂತಿಕ ಬ್ಯಾಟ್ಸ್‌ಮನ್ ಎಂಟ್ರಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News