1 ಶತಕ, 10 ದಾಖಲೆಗಳು ಉಡೀಸ್..! ವಿರಾಟ್ ಅಬ್ಬರಕ್ಕೆ ಪುಡಿಪುಡಿಯಾದ ದಾಖಲೆಗಳು ಯಾವ್ಯಾವು ಗೊತ್ತಾ? ಇಲ್ಲಿದೆ ವಿವರ

Virat Kohli Top 10 Asia Cup Records: ಕಳೆದ ದಿನ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಅಬ್ಬರದ ಅಜೇಯ ಇನ್ನಿಂಗ್ಸ್ ಆಡಿ, ಶತಕ ಬಾರಿಸಿದ್ದರು. ಅದೊಂದು ಶತಕಕ್ಕೆ ಕ್ರಿಕೆಟ್ ಲೋಕದ ಸುಮಾರು 10 ದಾಖಲೆಗಳು ಬ್ರೇಕ್ ಆಗಿವೆ.

Written by - Bhavishya Shetty | Last Updated : Sep 12, 2023, 11:02 AM IST
    • ವಿರಾಟ್ ಕೊಹ್ಲಿ, ಕ್ರಿಕೆಟ್ ಕಂಡ ಮತ್ತು ಕಾಣುತ್ತಿರುವ ಅಪ್ರತಿಮ ಆಟಗಾರ
    • ಏಕದಿನ, ಟೆಸ್ಟ್, ಟಿ20 ಯಾವ ಪಂದ್ಯವೇ ಆಗಿರಲಿ, ಅಲ್ಲಿ ವಿರಾಟ್ ದಾಖಲೆ ಬರೆಯದೇ ಇರರು
    • ವಿರಾಟ್ ಕೊಹ್ಲಿ ಶತಕಕ್ಕೆ ಕ್ರಿಕೆಟ್ ಲೋಕದ ಸುಮಾರು 10 ದಾಖಲೆಗಳು ಬ್ರೇಕ್ ಆಗಿವೆ.
1 ಶತಕ, 10 ದಾಖಲೆಗಳು ಉಡೀಸ್..! ವಿರಾಟ್ ಅಬ್ಬರಕ್ಕೆ ಪುಡಿಪುಡಿಯಾದ ದಾಖಲೆಗಳು ಯಾವ್ಯಾವು ಗೊತ್ತಾ? ಇಲ್ಲಿದೆ ವಿವರ title=
virat kohli

Virat Kohli Top 10 Asia Cup Records: ವಿರಾಟ್ ಕೊಹ್ಲಿ, ಕ್ರಿಕೆಟ್ ಕಂಡ ಮತ್ತು ಕಾಣುತ್ತಿರುವ ಅಪ್ರತಿಮ ಆಟಗಾರ. ಈತ ಮೈದಾನದಲ್ಲಿದ್ದರೆ ಅಭಿಮಾನಿಗಳ ಮನದಲ್ಲಿ ಏನೋ ಖುಷಿ, ಹುಮ್ಮಸ್ಸು. ಆದರೆ ಎದುರಾಳಿಗಳ ಎದೆಯಲ್ಲಿ ಮಾತ್ರ ನಡುಕ ಸೃಷ್ಟಿಯಾಗುತ್ತದೆ. ಇನ್ನು ಏಕದಿನ, ಟೆಸ್ಟ್, ಟಿ20 ಯಾವ ಪಂದ್ಯವೇ ಆಗಿರಲಿ, ಅಲ್ಲಿ ವಿರಾಟ್ ದಾಖಲೆ ಬರೆಯದೇ ಇರರು.

ಇದನ್ನೂ ಓದಿ: ಏಷ್ಯಾಕಪ್ ಫೈನಲ್ ಎಂಟ್ರಿಯಾಗ್ಬೇಕು ಅಂದ್ರೆ ಇನ್ನೆಷ್ಟು ಪಂದ್ಯ ಗೆಲ್ಲಬೇಕು ಭಾರತ?

ಇದೀಗ ಕಳೆದ ದಿನ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಅಬ್ಬರದ ಅಜೇಯ ಇನ್ನಿಂಗ್ಸ್ ಆಡಿ, ಶತಕ ಬಾರಿಸಿದ್ದರು. ಅದೊಂದು ಶತಕಕ್ಕೆ ಕ್ರಿಕೆಟ್ ಲೋಕದ ಸುಮಾರು 10 ದಾಖಲೆಗಳು ಬ್ರೇಕ್ ಆಗಿವೆ. ಆ ದಾಖಲೆಗಳು ಯಾವುವು ಎಂದು ತಿಳಿಯೋಣ,

ವಿರಾಟ್ ಕೊಹ್ಲಿ ಕೇವಲ 267 ಇನ್ನಿಂಗ್ಸ್‌’ಗಳಲ್ಲಿ 13,000 ODI ರನ್‌’ಗಳ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಕುಮಾರ್ ಸಂಗಕ್ಕಾರ ಮತ್ತು ಸನತ್ ಜಯಸೂರ್ಯ ಅವರಂತಹ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.

ಆರ್ ಪ್ರೇಮದಾಸ ಮತ್ತು ಶೇರ್ ಬಾಂಗ್ಲಾ ಎರಡೂ ಮೈದಾನಗಳಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ/

ಕೊಲಂಬೊದಲ್ಲಿ ಸತತ ನಾಲ್ಕು ODI ಶತಕಗಳನ್ನು ಗಳಿಸಿರುವ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.

ಇನ್ನು 8000, 9000, 10000, 11000 ಮತ್ತು 12000 ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ನಾಲ್ಕು ಶತಕಗಳೊಂದಿಗೆ ಏಷ್ಯಾಕಪ್ (ODI) ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಕೊಹ್ಲಿ ಹೆಸರಿಗೆ ಸೇರ್ಪಡೆಗೊಂಡಿದೆ. ಇದೀಗ ಕ್ರಿಕೆಟ್ ದಂತಕಥೆ ಸನತ್ ಜಯಸೂರ್ಯ ಅವರ ಸರಿಸಮವಾಗಿ ಕೊಹ್ಲಿ ನಿಂತಿದ್ದಾರೆ.

ಏಕದಿನ ಕ್ರಿಕೆಟ್​’ನ 47ನೇ ಶತಕವನ್ನು ವಿರಾಟ್​ ಪೂರೈಸಿದ್ದಾರೆ. ಪಾಕ್ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್​ ಅಜೇಯ 122 ರನ್​ ಇನ್ನಿಂಗ್ಸ್​ ಆಡಿದ್ದರು.

ಏಷ್ಯಾಕಪ್‌’ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 77 ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ ಕೀರ್ತಿ ವಿರಾಟ್ ಕೊಹ್ಲಿ ಅವರದ್ದು.

ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು 50+ ಸ್ಕೋರ್‌’ಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಬಹುರಾಷ್ಟ್ರಗಳ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಬ್ಯಾಟ್ಸ್‌ಮನ್‌ ಓರ್ವ ಕಲೆಹಾಕಿದ, ಅತಿ ಹೆಚ್ಚು ಶತಕಗಳಲ್ಲಿ ಪಟ್ಟಿಯಲ್ಲಿ ಕೊಹ್ಲಿ ಹೆಸರು ಸೇರ್ಪಡೆಗೊಂಡಿದೆ.

ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಜೊತೆಯಾಗಿ 233 ರನ್‌’ಗಳ ಅಜೇಯ ಜೊತೆಯಾಟವಾಡಿದ್ದರು. ಇದು ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ಗರಿಷ್ಠವಾದ ಜೊತೆಯಾಟವಾಗಿದೆ.

ಇನ್ನೊಂದೆಡೆ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯ ಇತಿಹಾಸಲ್ಲಿ ಮೂರನೇ ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾದ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ: “ಪಾಕ್ ಹೀನಾಯ ಸೋಲಿಗೆ ಇವರೇ ಕಾರಣ”: ಸಾರ್ವಜನಿಕವಾಗಿ ಹೆಸರನ್ನೆತ್ತಿ ದೂಷಿಸಿದ ನಾಯಕ ಬಾಬರ್ ಅಜಂ

ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ ಭರ್ಜರಿ 122 ರನ್‌ ಕಲೆ ಹಾಕಿದ್ದರು. ಇದು ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಭಾರತೀಯ ಬ್ಯಾಟರ್‌ ದಾಖಲಿಸಿದ ಎರಡನೇ ಗರಿಷ್ಠ ಸ್ಕೋರ್ ಆಗಿದೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News