ನವದೆಹಲಿ: Paralympic 2020 - ಟೋಕಿಯೊ ಪ್ಯಾರಾಲಿಂಪಿಕ್ ಗೇಮ್ಸ್ 2020 ರಲ್ಲಿ ಭಾರತ ಉತ್ತಮ ಪ್ರದರ್ಶನ ಮುಂದುವರೆದಿದೆ. ಭಾರತದ ಮನೀಶ್ ನರ್ವಾಲ್ (Manish Narwal) ಮಿಶ್ರ 50 ಮೀಟರ್ ಎಸ್‌ಎಚ್ 1 ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಈ ವರ್ಷ ಭಾರತದ ಒಟ್ಟು 15 ನೇ ಮತ್ತು ಮೂರನೇ ಚಿನ್ನದ ಪದಕವಾಗಿದೆ. ವಿಶೇಷವೆಂದರೆ ಈ ವರ್ಗದ ಬೆಳ್ಳಿ ಪದಕವೂ ಭಾರತದ ಹೆಸರಿನಲ್ಲಿ ಉಳಿದಿದೆ. ಭಾರತದ ಸಿಂಹರಾಜ್ ಕೂಡ ಅದೇ ವಿಭಾಗದಲ್ಲಿ ಬೆಳ್ಳಿ ಪದದಕ ಮೇಲೆ ತಮ್ಮ ಮುದ್ರೆಯನ್ನು ಒತ್ತಿದ್ದಾರೆ.
#TokyoParalympics, Shooting P4 Mixed 50m Pistol SH1: Manish Narwal wins gold, Singhraj bags silver. pic.twitter.com/nUTf8cpRUR
— ANI (@ANI) September 4, 2021
ಇದನ್ನೂ ಓದಿ-Tokyo Paralympics: ಅರ್ಚರಿಯಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಹರ್ವಿಂದರ್ ಸಿಂಗ್
ಒಂದೇ ಕೆಟಗರಿಯಲ್ಲಿ ಭಾರತಕ್ಕೆ ಎರಡು ಪದಕ
ಭಾರತದ ಮನೀಶ್ ನರ್ವಾಲ್ ಮತ್ತು ಸಿಂಹರಾಜ್ ಅವರು ಮಿಶ್ರ 50 ಮೀಟರ್ ಎಸ್‌ಎಚ್ 1 (Shooting P4 Mixed 50m Pistol SH1) ಶೂಟಿಂಗ್ ವಿಭಾಗದಲ್ಲಿ ಕ್ರಮೇಣ ಚಿನ್ನ ಮತ್ತು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮನೀಶ್ ನರ್ವಾಲ್ 218.2 ಸ್ಕೋರ್‌ನೊಂದಿಗೆ ಚಿನ್ನವನ್ನುತನ್ನದಾಗಿಸಿಕೊಂಡರೆ, ಸಿಂಹರಾಜ್ (Singhraj) 216.7 ಅಂಕಗಳೊಂದಿಗೆ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಭಾರತದ ಒಟ್ಟು ಪದಕಗಳ ಸಂಖ್ಯೆ ಇದೀಗ 15ಕ್ಕೆ ಏರಿಕೆಯಾದಂತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.