ಅನ್ಯಾಯಕ್ಕೆ ಬಲಿಯಾಗುತ್ತಿರುವ ಈ ಭಾರತೀಯ ಆಟಗಾರ ಪದಾರ್ಪಣೆ ಮಾಡದೇ ನಿವೃತ್ತಿ!

ಭಾರತ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿ ಆಡಿದೆ. ಈ ವೇಳೆ ಪ್ಲೇಯಿಂಗ್-11ರ ಭಾಗವಾಗಲು ಸಾಧ್ಯವಾಗದ ಆಟಗಾರನೊಬ್ಬ ತಂಡದಲ್ಲಿದ್ದ. ಅಷ್ಟೇ ಅಲ್ಲ ಇದುವರೆಗೆ ಕೇವಲ 2 ಫಾರ್ಮೆಟ್‌ಗಳಲ್ಲಿ ಆಟ ಆಡಿರುವ ಈ ಆಟಗಾರ ಟೆಸ್ಟ್‌ಗೆ ಪದಾರ್ಪಣೆ ಮಾಡಲೂ ಸಾಧ್ಯವಾಗಲಿಲ್ಲ. ಈ ಆಟಗಾರ ಅನ್ಯಾಯಕ್ಕೆ ಬಲಿಯಾಗುತ್ತಿದ್ದಾರಾ? ಅನ್ನೋ ಪ್ರಶ್ನೆ ಎದ್ದಿದೆ.

Written by - Puttaraj K Alur | Last Updated : Mar 26, 2023, 08:11 PM IST
  • ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಭಾರತವನ್ನು ODI ಮತ್ತು T20ಗಳಲ್ಲಿ ಪ್ರತಿನಿಧಿಸಿದ್ದಾರೆ
  • 32 ವರ್ಷದ ಚಹಾಲ್ ಇದುವರೆಗೆ 72 ಏಕದಿನ & 75 ಟಿ-20 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ
  • ಟೆಸ್ಟ್ ಪಂದ್ಯಗಳಲ್ಲಿ ಯುಜ್ವೇಂದ್ರ ಚಹಾಲ್‍ಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ
ಅನ್ಯಾಯಕ್ಕೆ ಬಲಿಯಾಗುತ್ತಿರುವ ಈ ಭಾರತೀಯ ಆಟಗಾರ ಪದಾರ್ಪಣೆ ಮಾಡದೇ ನಿವೃತ್ತಿ!  title=
ಟೆಸ್ಟ್ನಲ್ಲಿ ಈ ಆಟಗಾರನಿಗೆ ಅವಕಾಶ ಸಿಗುತ್ತಿಲ್ಲ!

ನವದೆಹಲಿ: ಭಾರತ ತಂಡವು ವಿಶ್ವ ಕ್ರಿಕೆಟ್‌ಗೆ ಹಲವಾರು ಸೂಪರ್‌ಸ್ಟಾರ್ ಕ್ರಿಕೆಟಿಗರನ್ನು ನೀಡಿದೆ. ಈ ಪೈಕಿ ಕೆಲವರು ಇತಿಹಾಸ ಸೃಷ್ಟಿಸಿದ್ದು, ದಾಖಲೆ ನಿರ್ಮಿಸಿದ ಹಲವು ದಿಗ್ಗಜರು ಇಂದೂ ಸಹ ತಂಡದಲ್ಲಿದ್ದಾರೆ. ಕೆಲವು ಆಟಗಾರರು ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ, ಆದರೆ ಅವರಿಗೆ ರಾಷ್ಟ್ರೀಯ ತಂಡದ ಭಾಗವಾಗಲು ಸಾಧ್ಯವಾಗಲಿಲ್ಲ. ಕೆಲವರು ಟೀಂ ಇಂಡಿಯಾವನ್ನು ಒಂದು ಅಥವಾ ಎರಡು ಸ್ವರೂಪಗಳಲ್ಲಿ ಮಾತ್ರ ಪ್ರತಿನಿಧಿಸಿದರು. ಇಂತಹ ಒಬ್ಬ ಕ್ರಿಕೆಟಿಗ ಟೀಂ ಇಂಡಿಯಾದಲ್ಲಿಯೂ ಇದ್ದು, ಅವರಿಗೆ ಅವಕಾಶಗಳು ತುಂಬಾ ಕಡಿಮೆಯಾಗಿದೆ. ಈ ಆಟಗಾರನ ನಿವೃತ್ತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಊಹಾಪೋಹಗಳು ಸಹ ಹರಿದಾಡುತ್ತಿವೆ.

ಸಾಕಷ್ಟು ಅವಕಾಶ ಸಿಕ್ಕಿಲ್ಲ!

ಈಗ ನಾವು ಹೇಳುತ್ತಿರುವುದು ಆಕ್ರಮಣಕಾರಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಬಗ್ಗೆ.  ಹೌದು, ಚಹಾಲ್ ಇದುವರೆಗೆ ಭಾರತವನ್ನು ODI ಮತ್ತು T20 ಗಳಲ್ಲಿ ಪ್ರತಿನಿಧಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ಅವರು ಕೊನೆಯ ಬಾರಿಗೆ ಭಾರತೀಯ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಅವರು ಲಕ್ನೋದಲ್ಲಿ ನ್ಯೂಜಿಲೆಂಡ್ ವಿರುದ್ಧ T20 ಸರಣಿಯ 2ನೇ ಪಂದ್ಯ ಆಡಿ, 1 ವಿಕೆಟ್ ಪಡೆದಿದ್ದರು. ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಪಂದ್ಯವನ್ನು ಆಡಿದ್ದರು. ಅದೇ ಸಮಯದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ 1 ಪಂದ್ಯದಲ್ಲಿ ಮಾತ್ರ ಅವರು ಅವಕಾಶ ಪಡೆದಿದ್ದರು.

ಇದನ್ನೂ ಓದಿ: ಈ ಬಾರಿಯ IPLನಲ್ಲಿ Virat Kohli ಮಾಡಲಿದ್ದಾರೆ ಹಲವು ದಾಖಲೆಗಳು! ಈ ಅಂಕಿಅಂಶ ನೋಡಿ ಗೊತ್ತಾಗುತ್ತೆ

ಇನ್ನೂ ಟೆಸ್ಟ್ ಪದಾರ್ಪಣೆ ಮಾಡಿಲ್ಲ

32 ವರ್ಷದ ಚಹಾಲ್ ಇದುವರೆಗೆ 72 ODI ಮತ್ತು 75 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರಿಗೆ ಟೆಸ್ಟ್ ಮಾದರಿಯಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಚಹಲ್ ಏಕದಿನದಲ್ಲಿ 121 ಮತ್ತು ಟಿ-20ಯಲ್ಲಿ 91 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚಾಹಲ್ 33 ಪಂದ್ಯಗಳಲ್ಲಿ 87 ವಿಕೆಟ್ ಪಡೆದಿದ್ದಾರೆ.

ಆಸ್ಟ್ರೇಲಿಯಾ ಸರಣಿಯಲ್ಲಿ ಅವಕಾಶ ಸಿಗಲಿಲ್ಲ!

ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡಿತು. ನಂತರ 3 ಪಂದ್ಯಗಳ ಏಕದಿನ ಸರಣಿ ಆಡಿತು. ಚಹಾಲ್ ಸಹ ಏಕದಿನ ಸರಣಿಯಲ್ಲಿ ತಂಡದ ಭಾಗವಾಗಿದ್ದರು. ಆದರೆ ರೋಹಿತ್ ಅಥವಾ ಹಾರ್ದಿಕ್ ಪಾಂಡ್ಯ ಅವರನ್ನು ಪ್ಲೇಯಿಂಗ್-11ರಲ್ಲಿ ಸೇರಿಸಿಕೊಳ್ಳಲಿಲ್ಲ.  ಹೀಗಾಗಿ ಇಷ್ಟು ಎಷ್ಟು ದಿನ ಚಹಾಲ್ ಬೆಂಚ್ ಕಾಯಬೇಕು ಅಂತಾ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸುತ್ತಿದ್ದಾರೆ.   

ಇದನ್ನೂ ಓದಿ: World Boxing Championship ನಲ್ಲಿ ಮತ್ತೆ ಭಾರತೀಯ ವನಿತೆಗೆ ಒಲಿದ ವಿಶ್ವ ಚಾಂಪಿಯನ್ ಪಟ್ಟ

ನಿವೃತ್ತಿ ಆಗ್ತಾರಾ ಚಹಾಲ್?

ಭಾರತ ಈಗ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಬೇಕಾಗಿದೆ. ಈ ಪಂದ್ಯ ಜೂನ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಚಹಾಲ್‍ಗೆ ತಂಡದ ಪ್ಲೇಯಿಂಗ್-11ರಲ್ಲಿ ಅವಕಾಶ ಸಿಗದಿರುವ ಸಾಧ್ಯತೆಗಳಿವೆ. ವಾಸ್ತವವಾಗಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿರುವುದರಿಂದ ಮತ್ತು ಅತ್ಯುತ್ತಮ ಫಾರ್ಮ್‌ನಿಂದಾಗಿ 3ನೇ ಸ್ಪಿನ್ನರ್‌ಗೆ ಸ್ಥಾನ ಸಿಗುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಚೊಚ್ಚಲ ಟೆಸ್ಟ್ ಆಡದೇ ಚಹಾಲ್ ನಿವೃತ್ತಿಯಾಗಬೇಕಾದ ಸಾಧ್ಯತೆ ಇದೆ. ಒಂದು ವೇಳೆ ಮುಂದೆ ಅವಕಾಶ ಸಿಗದೆ ಇದ್ದರೆ ಚಹಾಲ್ ವಿಧಿಯಿಲ್ಲದೆ ನಿವೃತ್ತಿ ಘೋಷಿಸಬೇಕಾಗುತ್ತದೆ ಅಂತಾ ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News