ಜಯ್‌ ಶಾ ಐಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಈ ನಗರದಲ್ಲಿ ಬ್ಯಾನ್‌ ಆಯ್ತು ಕ್ರಿಕೆಟ್‌! ಬ್ಯಾಟ್‌ ಹಿಡಿದ್ರೆ ಬೀಳುತ್ತೆ ಫೈನ್!!

BBC ಯ ವರದಿಯ ಪ್ರಕಾರ, ಮಾನ್ಫಾಲ್ಕೋನ್ ಪಟ್ಟಣವು ಅಧಿಕೃತವಾಗಿ ಕ್ರಿಕೆಟ್‌ ಅನ್ನು ನಿಷೇಧಿಸಿದ್ದು, ಅದರ ಮಿತಿಯಲ್ಲಿ ಕ್ರಿಕೆಟ್ ಆಡುತ್ತಿರುವವರಿಗೆ € 100 ವರೆಗೆ ದಂಡವನ್ನು ವಿಧಿಸಿದೆ. ಇದೀಗ ಈ ನಿಷೇಧವು ಇಟಲಿಯ ಆಡ್ರಿಯಾಟಿಕ್ ಕರಾವಳಿಯ ಸಮೀಪದಲ್ಲಿರುವ ಮೊನ್ಫಾಲ್ಕೋನ್‌ʼನಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ.

Written by - Bhavishya Shetty | Last Updated : Sep 8, 2024, 01:40 PM IST
    • ನಾರ್ತ್ ಇಟಲಿಯ ಪಟ್ಟಣವೊಂದರಲ್ಲಿ ಕ್ರಿಕೆಟ್ ಆಟವನ್ನು ನಿಷೇಧಿಸಲಾಗಿದೆ.
    • ಅದರ ಮಿತಿಯಲ್ಲಿ ಕ್ರಿಕೆಟ್ ಆಡುತ್ತಿರುವವರಿಗೆ € 100 ವರೆಗೆ ದಂಡವನ್ನು ವಿಧಿಸಿದೆ.
    • ಸುಮಾರು 30,000 ಜನಸಂಖ್ಯೆಯನ್ನು ಹೊಂದಿರುವ ಪಟ್ಟಣ ಮಾನ್ಫಾಲ್ಕೋನ್
ಜಯ್‌ ಶಾ ಐಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಈ ನಗರದಲ್ಲಿ ಬ್ಯಾನ್‌ ಆಯ್ತು ಕ್ರಿಕೆಟ್‌! ಬ್ಯಾಟ್‌ ಹಿಡಿದ್ರೆ ಬೀಳುತ್ತೆ ಫೈನ್!! title=
File Photo

cricket ban: ನಾರ್ತ್ ಇಟಲಿಯ ಪಟ್ಟಣವೊಂದರಲ್ಲಿ ಕ್ರಿಕೆಟ್ ಆಟವನ್ನು ನಿಷೇಧಿಸಲಾಗಿದೆ. ಈ ನಿರ್ಧಾರವನ್ನು ಅಲ್ಲಿನ ಮೇಯರ್ ತೆಗೆದುಕೊಂಡಿದ್ದು, ಕ್ರಿಕೆಟ್‌ ಮತ್ತು ಅದನ್ನು ಆಡುವ ವಲಸಿಗರು ಅಲ್ಲಿನ ಸಂಸ್ಕೃತಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಪರಿಗಣಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಒಬ್ರಲ್ಲ, ಇಬ್ರಲ್ಲ... ಈ ನಾಲ್ವರು ಸುರಸುಂದರಿಯರ ಜೊತೆ ಶುಭ್ಮನ್‌ ಗಿಲ್‌ ಡೇಟಿಂಗ್!!

BBC ಯ ವರದಿಯ ಪ್ರಕಾರ, ಮಾನ್ಫಾಲ್ಕೋನ್ ಪಟ್ಟಣವು ಅಧಿಕೃತವಾಗಿ ಕ್ರಿಕೆಟ್‌ ಅನ್ನು ನಿಷೇಧಿಸಿದ್ದು, ಅದರ ಮಿತಿಯಲ್ಲಿ ಕ್ರಿಕೆಟ್ ಆಡುತ್ತಿರುವವರಿಗೆ € 100 ವರೆಗೆ ದಂಡವನ್ನು ವಿಧಿಸಿದೆ. ಇದೀಗ ಈ ನಿಷೇಧವು ಇಟಲಿಯ ಆಡ್ರಿಯಾಟಿಕ್ ಕರಾವಳಿಯ ಸಮೀಪದಲ್ಲಿರುವ ಮೊನ್ಫಾಲ್ಕೋನ್‌ʼನಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ.

ಸುಮಾರು 30,000 ಜನಸಂಖ್ಯೆಯನ್ನು ಹೊಂದಿರುವ ಪಟ್ಟಣ ಇದಾಗಿದ್ದು,  ಇಲ್ಲಿ ನೆಲೆಸಿರುವವರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಿದೇಶಿಯರಿದ್ದಾರೆ. ಮುಖ್ಯವಾಗಿ ಬಾಂಗ್ಲಾದೇಶಿ ಮುಸ್ಲಿಮರು ಇಲ್ಲಿ ನೆಲೆಸಿದ್ದು 1990 ರ ದಶಕದ ಉತ್ತರಾರ್ಧದಲ್ಲಿ ಪ್ರಮುಖ ಹಡಗುಕಟ್ಟೆಯಲ್ಲಿ ಕೆಲಸ ಮಾಡಲು ಬಂದವರಾಗಿದ್ದಾರೆ.

ಇದನ್ನೂ ಓದಿ: ಹೋದ ಕೆಲಸದಲ್ಲೆಲ್ಲಾ ಜಯ ಸಿಗಬೇಕೆಂದರೆ ಮನೆಯ ಈ ದಿಕ್ಕಿನಿಂದ ವಾಹನ ಸ್ಟಾರ್ಟ್‌ ಮಾಡಿ!

ಮೊನ್‌ಫಾಲ್ಕೋನ್‌ʼನ ಸ್ಥಳೀಯ ಉದ್ಯಾನವನದಲ್ಲಿ ಕ್ರಿಕೆಟ್‌ ಆಡುತ್ತಿದ್ದಾಗ, ಭದ್ರತಾ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಯಾಗಿತ್ತು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಬಾಂಗ್ಲಾದ ಕೆಲ ಯುವಕರಿಗೆ ದಂಡ ವಿಧಿಸಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News