IND vs ENG Test: ರಾಂಚಿ ಟೆಸ್ಟ್ ಗೆದ್ದರೆ ಈ ಶ್ರೇಷ್ಠ ದಾಖಲೆ ಬರೆಯಲಿದೆ ಟೀಂ ಇಂಡಿಯಾ! ಯಾವುದದು?

India vs England 4th Test: ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆದ್ದರೆ, ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಳ್ಳುವುದರ ಜೊತೆಗೆ 3-1 ಮುನ್ನಡೆ ಸಾಧಿಸಲಿದೆ. ಇದಷ್ಟೇ ಅಲ್ಲದೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲ್ಲುವಲ್ಲಿ ಭಾರತ ಯಶಸ್ವಿಯಾದರೆ, ತವರಿನಲ್ಲಿ ಭಾರತಕ್ಕೆ ಸತತ 17ನೇ ಟೆಸ್ಟ್ ಸರಣಿ ಜಯವಾಗಲಿದೆ.

Written by - Bhavishya Shetty | Last Updated : Feb 22, 2024, 11:32 AM IST
    • ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ
    • ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸದ್ಯ ಭಾರತ 2-1 ಮುನ್ನಡೆ
    • 12 ವರ್ಷಗಳಿಂದ ತವರಿನಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಸೋತಿಲ್ಲ ಭಾರತ
IND vs ENG Test: ರಾಂಚಿ ಟೆಸ್ಟ್ ಗೆದ್ದರೆ ಈ ಶ್ರೇಷ್ಠ ದಾಖಲೆ ಬರೆಯಲಿದೆ ಟೀಂ ಇಂಡಿಯಾ! ಯಾವುದದು? title=
India vs England Test Series

India vs England 4th Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ನಾಳೆ ಅಂದರೆ ಫೆಬ್ರವರಿ 23 ರಿಂದ ರಾಂಚಿಯ JSCA ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸದ್ಯ ಭಾರತ 2-1 ಮುನ್ನಡೆ ಸಾಧಿಸಿದೆ.

ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆದ್ದರೆ, ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಳ್ಳುವುದರ ಜೊತೆಗೆ 3-1 ಮುನ್ನಡೆ ಸಾಧಿಸಲಿದೆ. ಇದಷ್ಟೇ ಅಲ್ಲದೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲ್ಲುವಲ್ಲಿ ಭಾರತ ಯಶಸ್ವಿಯಾದರೆ, ತವರಿನಲ್ಲಿ ಭಾರತಕ್ಕೆ ಸತತ 17ನೇ ಟೆಸ್ಟ್ ಸರಣಿ ಜಯವಾಗಲಿದೆ.

ಇದನ್ನೂ ಓದಿ: “ಟ್ರೋಫಿ ಗೆದ್ದರೆ 1 ಕೋಟಿ ನಗದು ಜೊತೆ ಬಿಎಂಡಬ್ಲ್ಯು ಕಾರು”- ಕ್ರಿಕೆಟಿಗರಿಗೆ ವಿಶೇಷ ಘೋಷಣೆ

ಭಾರತ ತಂಡ 12 ವರ್ಷಗಳಿಂದ ತವರಿನಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಸೋತಿಲ್ಲ. ನವೆಂಬರ್ 2012ರ ಸೋಲು ಕೊನೆಯದ್ದಾಗಿದೆ. ಇದರ ನಂತರ ಭಾರತ ತಂಡವು ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಸೋತಿಲ್ಲ. ತವರಿನಲ್ಲಿ ಕಳೆದ 49 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕೇವಲ 4 ಪಂದ್ಯಗಳಲ್ಲಿ ಮಾತ್ರ ಸೋತಿದ್ದು, 2012 ರಿಂದ 38 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಈ ಅವಧಿಯಲ್ಲಿ 7 ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.

ಟೀಂ ಇಂಡಿಯಾಗೆ ಇಡೀ ಭಾರತವೇ ಅಭೇದ್ಯ ಕೋಟೆ. ತವರಿನಲ್ಲಿ ಸತತ ಅತಿ ಹೆಚ್ಚು ಟೆಸ್ಟ್ ಸರಣಿಗಳನ್ನು ಗೆದ್ದಿರುವ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ಭಾರತ ಟೆಸ್ಟ್ ತಂಡದ ನಂತರ ಆಸ್ಟ್ರೇಲಿಯಾ ಇದೆ. ಆಸ್ಟ್ರೇಲಿಯಾ ತವರಿನಲ್ಲಿ ಸತತ 10 ಟೆಸ್ಟ್ ಸರಣಿಗಳನ್ನು ಎರಡು ಬಾರಿ ಗೆದ್ದು ದಾಖಲೆ ಬರೆದಿತ್ತು.

ಭಾರತದ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ದಾಖಲೆ (2013 ರಿಂದ)

1. ಆಸ್ಟ್ರೇಲಿಯಾ vs ಭಾರತ – 4-0 (4) (2013) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

2. ವೆಸ್ಟ್ ಇಂಡೀಸ್ vs ಭಾರತ –2-0 (2) (2013) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

3. ದಕ್ಷಿಣ ಆಫ್ರಿಕಾ vs ಭಾರತ –3-0 (4) (2015) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

4. ನ್ಯೂಜಿಲೆಂಡ್ vs ಭಾರತ –3-0 (3) (2016) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

5. ಇಂಗ್ಲೆಂಡ್ vs ಭಾರತ –4-0 (5) (2016) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

6. ಬಾಂಗ್ಲಾದೇಶ vs ಭಾರತ –1-0 (1) (2017) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

7. ಆಸ್ಟ್ರೇಲಿಯಾ vs ಭಾರತ –2-1 (4) (2017) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

8. ಶ್ರೀಲಂಕಾ vs ಭಾರತ –1-0 (3) (2017) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

9. ಅಫ್ಘಾನಿಸ್ತಾನ vs ಭಾರತ –1-0 (1) (2018) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

10. ವೆಸ್ಟ್ ಇಂಡೀಸ್ vs ಭಾರತ –2-0 (2) (2018) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

11. ದಕ್ಷಿಣ ಆಫ್ರಿಕಾ vs ಭಾರತ –3-0 (3) (2019) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

12. ಬಾಂಗ್ಲಾದೇಶ vs ಭಾರತ –2-0 (2) (2019) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

13. ಇಂಗ್ಲೆಂಡ್ vs ಭಾರತ - 3-1 (4) (2021) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

14. ನ್ಯೂಜಿಲೆಂಡ್ vs ಭಾರತ –1-0 (2) (2021) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

15. ಶ್ರೀಲಂಕಾ vs ಭಾರತ –2-0 (2) (2022) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

16. ಆಸ್ಟ್ರೇಲಿಯಾ vs ಭಾರತ –2-1 (4) (2023) ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

17. ಇಂಗ್ಲೆಂಡ್ vs ಭಾರತ - 2-1 (5) ಮುನ್ನಡೆ (2024)

ಇದನ್ನೂ ಓದಿ: Dina Bhavishya: ಇಂದು ಸೌಭಾಗ್ಯ ಯೋಗ: ಈ ರಾಶಿಯವರ ಬಹುಕಾಲದ ಕನಸು ನನಸಾಗುವುದು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News