Team India: ಈ 3 ಆಟಗಾರರ ಬೆನ್ನುಬಿದ್ದ ಆಯ್ಕೆಗಾರರು, ಈಗ ನಿವೃತ್ತಿಯೇ ಕೊನೆಯ ದಾರಿ!

ಟೀಂ ಇಂಡಿಯಾದಲ್ಲಿ ಯುವ ಆಟಗಾರರ ಪ್ರಾಬಲ್ಯ ನಿರಂತರವಾಗಿ ಕಂಡುಬರುತ್ತಿದೆ. ಯುವ ಆಟಗಾರರ ಉತ್ತಮ ಪ್ರದರ್ಶನದಿಂದಾಗಿ ಮೂವರು ದೊಡ್ಡ ಆಟಗಾರರಿಗೆ ತಂಡದಲ್ಲಿ ಬಹಳ ದಿನಗಳಿಂದ ಅವಕಾಶವೇ ಸಿಗುತ್ತಿಲ್ಲ.

Written by - Puttaraj K Alur | Last Updated : Jul 19, 2022, 03:45 PM IST
  • ಅಜಿಂಕ್ಯ ರಹಾನೆ ಕಳಪೆ ಫಾರ್ಮ ಮತ್ತು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ
  • ರಿಷಭ್ ಪಂತ್ ಅತ್ಯುತ್ತಮ ಪ್ರದರ್ಶನದಿಂದ ವೃದ್ಧಿಮಾನ್ ಸಹಾಗೆ ಸ್ಥಾನ ಸಿಗುವುದು ಕಷ್ಟವಾಗಿದೆ
  • 100ಕ್ಕೂ ಹೆಚ್ಚು ಟೆಸ್ಟ್‌ ಆಡಿದ ವೇಗಿ ಇಶಾಂತ್ ಶರ್ಮಾಗೂ ತಂಡದಲ್ಲಿ ಸ್ಥಾನ ದೊರೆತಿಲ್ಲ
Team India: ಈ 3 ಆಟಗಾರರ ಬೆನ್ನುಬಿದ್ದ ಆಯ್ಕೆಗಾರರು, ಈಗ ನಿವೃತ್ತಿಯೇ ಕೊನೆಯ ದಾರಿ! title=
ಈ ಆಟಗಾರರಿಗೆ ನಿವೃತ್ತಿಯೇ ಕೊನೆ ಆಯ್ಕೆ

ನವದೆಹಲಿ: ಕಳೆದೊಂದು ವರ್ಷದಲ್ಲಿ ಟೀಂ ಇಂಡಿಯಾ ನಾಯಕನಿಂದ ಕೋಚ್ ತನಕ ಎಲ್ಲವೂ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಭವಿಷ್ಯವನ್ನು ಪರಿಗಣಿಸಿ ತಂಡದ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ನಿರಂತರವಾಗಿ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ಪಡೆಯುತ್ತಿದ್ದ 3 ಅನುಭವಿ ಆಟಗಾರರಿದ್ದರು. ಆದರೆ ಈಗ ಈ ಆಟಗಾರರು ತಂಡದಲ್ಲಿ ಭಾಗವಾಗಲು ಸಾಧ್ಯವಾಗುತ್ತಿಲ್ಲ. ಈ ಆಟಗಾರರ ವೃತ್ತಿಜೀವನ ಬಹುತೇಕ ಮುಗಿದಂತಾಗಿದೆ.  

ಕಳಪೆ ಫಾರ್ಮ್ & ಗಾಯದ ಸಮಸ್ಯೆ

ವಿದೇಶಿ ಪಿಚ್‌ಗಳಲ್ಲಿ ಅಜಿಂಕ್ಯ ರಹಾನೆ ಭಾರತಕ್ಕೆ ಉತ್ತಮ ಯಶಸ್ಸು ತಂದುಕೊಟ್ಟಿದ್ದಾರೆ. ಆದರೆ ಈಗ ಅವರು ಅತ್ಯಂತ ಕಳಪೆ ಫಾರ್ಮ್ ಮತ್ತು ಗಾಯದ ಸಮಸ್ಯೆಯಿಂದ  ಹೋರಾಡುತ್ತಿದ್ದಾರೆ. ದೀರ್ಘಕಾಲದವರೆಗೆ ಅವರ ಬ್ಯಾಟ್‌ನಿಂದ ರನ್‌ಗಳು ಸಹ ಬಂದಿಲ್ಲ. ಐಪಿಎಲ್ 2022ರಲ್ಲಿ ರಹಾನೆ ಕೂಡ ವಿಫಲರಾಗಿದ್ದರು, ನಂತರ ಅವರು ತಂಡಕ್ಕೆ ಮರಳುವುದು ಹೆಚ್ಚು ಕಷ್ಟಕರವಾಗಿದೆ. ಅಜಿಂಕ್ಯ ರಹಾನೆ ಭಾರತ ತಂಡದ ಪರ 82 ಟೆಸ್ಟ್ ಪಂದ್ಯಗಳಲ್ಲಿ 12 ಶತಕ ಸೇರಿದಂತೆ 4,931 ರನ್ ಗಳಿಸಿದ್ದಾರೆ. ರಹಾನೆ ಟೆಸ್ಟ್ ತಂಡದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿಯನ್ನು ಸೇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಭಾರತ-ಇಂಗ್ಲೆಂಡ್‌ ಪಂದ್ಯ: ನಾಲ್ವರು ಆಲ್‌ರೌಂಡರ್‌ಗಳಲ್ಲಿ ಯಾರಾಗ್ತಾರೆ ಮ್ಯಾಚ್‌ ವಿನ್ನರ್‌?

ವೃದ್ಧಿಮಾನ್ ಸಹಾಗೆ ಸ್ಥಾನ ಸಿಗುವುದು ಕಷ್ಟಕಷ್ಟ

ಸದ್ಯ ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿಯೂ ಟೀಂ ಇಂಡಿಯಾದ ಮೊದಲ ಆಯ್ಕೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ತಂಡದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ. ಅವರು 2010ರಲ್ಲಿ ಟೆಸ್ಟ್‍ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಅವರು ಭಾರತ ತಂಡದಲ್ಲಿ ಶಾಶ್ವತ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಪರ 40 ಟೆಸ್ಟ್ ಪಂದ್ಯಗಳಲ್ಲಿ 29.41ರ ಸರಾಸರಿಯಲ್ಲಿ 1,353 ರನ್ ಗಳಿಸಿದ್ದಾರೆ. ಇದೀಗ ವೃದ್ಧಿಮಾನ್ ಸಹಾ ಬದಲಿಗೆ ಯುವ ವಿಕೆಟ್ ಕೀಪರ್ ಕೆ.ಎಸ್.ಭರತ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

100ಕ್ಕೂ ಹೆಚ್ಚು ಟೆಸ್ಟ್‌ ಆಡಿದ ಆಟಗಾರನಿಗೂ ಗೇಟ್‍ಪಾಸ್!  

ಭಾರತ ಪರ 105 ಟೆಸ್ಟ್ ಪಂದ್ಯಗಳನ್ನು ಆಡಿರುವ ಅನುಭವಿ ವೇಗಿ ಇಶಾಂತ್ ಶರ್ಮಾ ಬಹಳ ದಿನಗಳಿಂದ ತಂಡದ ಭಾಗವಾಗಿಲ್ಲ. ಅವರು ನವೆಂಬರ್ 2021ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಕಳಪೆ ಫಾರ್ಮ್ ಮತ್ತು ಫಿಟ್ನೆಸ್ ಕಾರಣದಿಂದ ಇಶಾಂತ್ ಶರ್ಮಾ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿತ್ತು. ಇಶಾಂತ್ ಶರ್ಮಾ ಭಾರತ ಪರ ಟೆಸ್ಟ್ ನಲ್ಲಿ 311 ವಿಕೆಟ್ ಪಡೆದಿದ್ದಾರೆ. ಈಗ ಇಶಾಂತ್ ಶರ್ಮಾ ತಂಡಕ್ಕೆ ಮರಳುವುದು ಕಷ್ಟ ಎನಿಸುತ್ತಿದೆ. ಅವರ ಜಾಗದಲ್ಲಿ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಮತ್ತು ಕೃಷ್ಣ ತಂಡದಲ್ಲಿ ಅವಕಾಶ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Ind vs Eng : 3ನೇ ಪಂದ್ಯದಲ್ಲಿ ಈ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ರೋಹಿತ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News