ಭಾರತದ ಸ್ಟಾರ್ ಕ್ರಿಕೆಟಿಗ ಎಂ.ಎಸ್. ಧೋನಿ ಅಕ್ಕ ಯಾರು ಗೊತ್ತಾ? ಪ್ರತಿ ಹಂತದಲ್ಲೂ ಮಾಹಿಗೆ ಸಪೋರ್ಟ್‌ ಮಾಡಿದ ಚೆಲುವೆ ಈಕೆ!

MS Dhoni Sister: ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಆಡಲು ಸಿದ್ಧರಾಗಿದ್ದಾರೆ. ಕಳೆದ ವರ್ಷ ಅಂದರೆ 2023ರಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿತ್ತು. ಈ ಸೀಸನ್‌ಲ್ಲಿಯೂ ಚೆನ್ನೈ ತನ್ನ ಪ್ರಬಲ ಪ್ರದರ್ಶನವನ್ನು ಮುಂದುವರಿಸಲು ಪ್ರಯತ್ನಿಸುತ್ತದೆ. 

Written by - Savita M B | Last Updated : Mar 12, 2024, 08:57 AM IST
  • ಭಾರತ ತಂಡದ ಅತ್ಯಂತ ಯಶಸ್ವಿ ನಾಯಕ ಎಣಿಸಲ್ಪಟ್ಟಿರುವ ಮಹೇಂದ್ರ ಸಿಂಗ್ ಧೋನಿ
  • ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ
  • ಧೋನಿ ದೊಡ್ಡ ಮೈಲಿಗಲ್ಲು ತಲುಪುವಲ್ಲಿ ಅವರ ಕುಟುಂಬ ಸದಸ್ಯರ ಪಾತ್ರವೂ ಇದೆ.
ಭಾರತದ ಸ್ಟಾರ್ ಕ್ರಿಕೆಟಿಗ ಎಂ.ಎಸ್. ಧೋನಿ ಅಕ್ಕ ಯಾರು ಗೊತ್ತಾ? ಪ್ರತಿ ಹಂತದಲ್ಲೂ ಮಾಹಿಗೆ ಸಪೋರ್ಟ್‌ ಮಾಡಿದ ಚೆಲುವೆ ಈಕೆ! title=

MS Dhoni Sister Jayanti Gupta: ಭಾರತ ತಂಡದ ಅತ್ಯಂತ ಯಶಸ್ವಿ ನಾಯಕ ಎಣಿಸಲ್ಪಟ್ಟಿರುವ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ.... ಇತ್ತೀಚೆಗೆ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಧೋನಿ ಅನಂತ್ ಅಂಬಾನಿ ಅವರ ವಿವಾಹಪೂರ್ವ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಧೋನಿ ದೊಡ್ಡ ಮೈಲಿಗಲ್ಲು ತಲುಪುವಲ್ಲಿ ಅವರ ಕುಟುಂಬ ಸದಸ್ಯರ ಪಾತ್ರವೂ ಇದೆ.

ಮಹೇಂದ್ರ ಸಿಂಗ್ ಧೋನಿ ತಮ್ಮ ಕ್ರಿಕೆಟ್ ಜೀವನದ ಆರಂಭಿಕ ಹಂತದಲ್ಲಿ ಸಾಕಷ್ಟು ಹೋರಾಟಗಳನ್ನು ಎದುರಿಸಬೇಕಾಯಿತು.. ಅಂತಹ ಪರಿಸ್ಥಿತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಸಹೋದರಿ ಅವರಿಗೆ ಉತ್ತಮ ಬೆಂಬಲ ನೀಡಿದರು. ಮಹೇಂದ್ರ ಸಿಂಗ್ ಧೋನಿ ಸಹೋದರಿಯ ಹೆಸರು ಜಯಂತಿ ಗುಪ್ತಾ. ಜಯಂತಿ ಗುಪ್ತಾ ಮಹೇಂದ್ರ ಸಿಂಗ್ ಧೋನಿಗಿಂತಲೂ ಮೂರ್ನಾಲ್ಕು ವರ್ಷ ದೊಡ್ಡವರು. ಧೋನಿಯವರ ಪ್ರತಿಯೊಂದು ನಿರ್ಧಾರವನ್ನು ಜಯಂತಿ ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದಾರೆ.. 

ಇದನ್ನೂ ಓದಿ-Virat Kohli Kundli: ಅಪರೂಪದ ಜಾತಕದಲ್ಲಿ ಜನಿಸಿರುವ ವಿರಾಟ್ ಕೊಹ್ಲಿ.. ಕುಂಡಲಿಯಲ್ಲಿದೆ ವಿಶೇಷ ಗ್ರಹಗತಿ, ಇವರ ಅತಿಯಾದ ಕೋಪಕ್ಕೆ ಇದೇ ಕಾರಣ!

ಮಹೇಂದ್ರ ಸಿಂಗ್ ಧೋನಿ ಸಹೋದರಿ ಜಯಂತಿ ಗುಪ್ತಾ ತುಂಬಾ ಸರಳ ಜೀವನ ನಡೆಸುತ್ತಿದ್ದಾರೆ. ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರ ಸಹೋದರಿಯಾಗಿದ್ದರೂ, ಅವರು ಜನಪ್ರಿಯತೆ ಪಡೆದುಕೊಳ್ಳುವುದರಿಂದ ತಾವಾಗಿಯೇ ದೂರ ಉಳಿದಿದ್ದಾರೆ. ಅವರು ರಾಂಚಿಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಯಂತಿ ಗುಪ್ತಾ ಗೌತಮ್ ಗುಪ್ತಾ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಗೌತಮ್ ಅವರನ್ನು ಧೋನಿಯ ಹಳೆಯ ಮತ್ತು ಆತ್ಮೀಯ ಸ್ನೇಹಿತರು ಎನ್ನಲಾಗಿದೆ.. ಜಯಂತಿಯಂತೆ ಗೌತಮ್ ಕೂಡ ಧೋನಿಗೆ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ.. 

ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಎಂಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಅವರ ಸಹೋದರಿ ಮತ್ತು ಈ ಸ್ನೇಹಿತನ ಪಾತ್ರವನ್ನು ಸಹ ತೋರಿಸಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರೂ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮಹೇಂದ್ರ ಸಿಂಗ್ ಧೋನಿ ಮೈದಾನಕ್ಕಿಳಿದಾಗ, ಸ್ಟೇಡಿಯಂ ಮತ್ತೊಮ್ಮೆ ಮಹಿ ಹೆಸರಿನೊಂದಿಗೆ ಪ್ರತಿಧ್ವನಿಸುತ್ತದೆ.

ಇದನ್ನೂ ಓದಿ-ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ 8ರ ಬಾಲೆ: EBC ತಲುಪಿದ ಅತ್ಯಂತ ಕಿರಿಯ ಭಾರತೀಯಳೇ ಈ ಬೆಂಗಳೂರಿನ ಸಾಧಕಿ
 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News