India Qualify for Semi-Finals: ಅಧಿಕೃತವಾಗಿ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ

India Qualify for Semi-Finals: ಇಂದು ನಡೆದ ಪಂದ್ಯದಲ್ಲಿ ನೆದರ್ಲ್ಯಾಂಡ್, ದಕ್ಷಿಣ ಆಫ್ರಿಕಾವನ್ನು  ಸೋಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕುಸಿತಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಆರು ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿರುವ ಭಾರತ ಸೆಮೀಸ್ ಗೆ ಎಂಟ್ರಿ ಪಡೆದಿದೆ.

Written by - Bhavishya Shetty | Last Updated : Nov 6, 2022, 10:16 AM IST
    • ನೆದರಲ್ಯಾಂಡ್ ವಿರುದ್ದ ಮುಗ್ಗರಿಸಿದ ದಕ್ಷಿಣ ಆಫ್ರಿಕಾ
    • ದಕ್ಷಿಣ ಆಫ್ರಿಕಾಗೆ ನಷ್ಟ, ಟೀಂ ಇಂಡಿಯಾಗೆ ಲಾಭ
    • ಸೆಮೀಸ್ ಗೆ ಎಂಟ್ರಿ ಕೊಟ್ಟ ಭಾರತ ಕ್ರಿಕೆಟ್ ತಂಡ
India Qualify for Semi-Finals: ಅಧಿಕೃತವಾಗಿ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ title=
India

India Qualify for Semi-Finals: ಅಡಿಲೇಡ್‌ನಲ್ಲಿ ಇಂದು ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ 13 ರನ್‌ಗಳ ಭರ್ಜರಿ ಜಯದೊಂದಿಗೆ ದಕ್ಷಿಣ ಆಫ್ರಿಕಾವನ್ನು ನೆದರ್ಲೆಂಡ್ಸ್ ತಂಡವು ಸೋಲಿಸಿತು. ಈ ಮೂಲಕ ಸೆಮಿಫೈನಲ್‌ಗೆ ಕನಸು ಮುರಿದುಹೋಯಿತು. ಸದ್ಯ ಈ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಕೊನೆಯ ನಾಲ್ಕರಲ್ಲಿ ಅಂತಿಮ ಸ್ಥಾನಕ್ಕಾಗಿ ಹೋರಾಡುವ ಸ್ಥಿತಿಗೆ ತಲುಪಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತವು ಆರು ಅಂಕಗಳನ್ನು ಹೊಂದಿದೆ. ಭಾನುವಾರದ ಟ್ರಿಪಲ್ ಹೆಡರ್‌ನ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಮೆಲ್ಬೋರ್ನ್‌ನಲ್ಲಿ ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೆಮೀಸ್ ಗೆ ಟಿಕೆಟ್ ಪಡೆದಿದೆ.

ಇದನ್ನೂ ಓದಿ: T20 World Cup 2022: ದಕ್ಷಿಣ ಆಫ್ರಿಕಾಗೆ ಹೀನಾಯ ಸೋಲು, ಪಾಕಿಸ್ತಾನಕ್ಕೆ ಸುವರ್ಣಾವಕಾಶ!

ಇಂದು ನಡೆದ ಪಂದ್ಯದಲ್ಲಿ ನೆದರ್ಲ್ಯಾಂಡ್, ದಕ್ಷಿಣ ಆಫ್ರಿಕಾವನ್ನು  ಸೋಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕುಸಿತ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಆರು ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿರುವ ಭಾರತ ಸೆಮೀಸ್ ಗೆ ಎಂಟ್ರಿ ಪಡೆದಿದೆ.

ಕಾಲಿನ್ ಅಕರ್‌ಮನ್ ಅವರ ಅಜೇಯ 41 ರನ್‌ಗಳ ನಂತರ ಗೆಲುವಿಗಾಗಿ 159 ರನ್‌ಗಳನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಡಚ್ ವೇಗದ ಬೌಲರ್ ಬ್ರಾಂಡನ್ ಗ್ಲೋವರ್ ಬೌಲಿಂಗ್ ಗೆ ಸಂಪೂರ್ಣವಾಗಿ ತತ್ತರಿಸಿತು.ಎರಡು ಓವರ್‌ಗಳಲ್ಲಿ 9 ರನ್ ಗೆ 3 ವಿಕೆಟ್ ಕಬಳಿಸಿದ ಗ್ಲೋವರ್ ಆಟ ದ. ಆಫ್ರಿಕಾವನ್ನು 145-8 ಕ್ಕೆ ಕಟ್ಟಿ ಹಾಕುವಂತೆ ಮಾಡಿತು.

ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಟೆಂಬಾ ಬವುಮಾ ಅವರ ಆರು ಓವರ್‌ಗಳ ಆಟ ಇಡೀ ತಂಡವನ್ನು ಸಂಕಷ್ಟಕ್ಕೆ ದೂಡಿತು ಎನ್ನಬಹುದು. ಎಡಗೈ ಬ್ಯಾಟ್ಸ್ ಮನ್ ಡಿ ಕಾಕ್ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಆದರೆ ಶೀಘ್ರದಲ್ಲೇ ಫ್ರೆಡ್ ಕ್ಲಾಸೆನ್ ಗೆ ಕ್ಯಾಚ್ ನೀಡಿ ಔಟ್ ಆದರು. ಇನ್ನೊಂದೆಡೆ ಬವುಮಾ ಕೂಡ ಪಾಲ್ ವ್ಯಾನ್ ಮೀಕೆರೆನ್ ಅವರ ಬೌಲಿಂಗ್ ಗೆ ತತ್ತರಿಸಿ ಕೇವಲ 20 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು.

 

 

ಇದನ್ನೂ ಓದಿ: T20 World Cup 2022: ದಕ್ಷಿಣ ಆಫ್ರಿಕಾಗೆ ಹೀನಾಯ ಸೋಲು, ಪಾಕಿಸ್ತಾನಕ್ಕೆ ಸುವರ್ಣಾವಕಾಶ!

ಒಟ್ಟಾರೆಯಾಗಿ ದಕ್ಷಿಣಾ ಆಫ್ರಿಕಾ ಸೋಲಿನಿಂದ ವಿಶ್ವಕಪ್ ಕನಸು ದೂರವಾಗಿದೆ. ಆದರೆ ಟೀಂ ಇಂಡಿಯಾ ಮಾತ್ರ ಅಧಿಕೃತವಾಗಿ ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಈ ಬಗ್ಗೆ ಐಸಿಸಿ ಟ್ವೀಟ್ ಮಾಡಿದ್ದು, “ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ ರೋಚಕ ಜಯ ಸಾಧಿಸಿದ್ದು, ಭಾರತ ಅಧಿಕೃತವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ” ಎಂದು ಹೇಳಿಕೊಂಡಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News