ಜನಪ್ರಿಯ ಸೆಲೆಬ್ರಿಟಿ.. ಪತಿಗಿಂತ ಹೆಚ್ಚು ಕ್ರೇಜ್‌ ಪಡೆದ ಸ್ಟಾರ್ ಕ್ರಿಕೆಟಿಗನ ಪತ್ನಿ ಈಕೆ!

Team India Cricketer Wife: ಕೆಲವರು ಸೆಲೆಬ್ರಿಟಿಗಳು ಅಥವಾ ಕ್ರೀಡಾಪಟುಗಳನ್ನು ಮದುವೆಯಾದ ನಂತರ ಜನಪ್ರಿಯರಾಗುತ್ತಾರೆ. ಇನ್ನು ಕೆಲವರು ಜನಪ್ರಿಯತೆ ಗಳಿಸಿದ ನಂತರ ಬೇರೆ ಸೆಲೆಬ್ರಿಟಿಗಳನ್ನು ಮದುವೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಕ್ರೇಜ್ ಪಡೆಯುತ್ತಾರೆ.. ಅಂತಹ ಫೇಮಸ್‌ ಸೆಲೆಬ್ರಿಟಿಗಳಲ್ಲಿ ಇವರು ಒಬ್ಬರು..   

Written by - Savita M B | Last Updated : Mar 5, 2024, 10:50 AM IST
  • ಹಲವಾರು ಸಲೆಬ್ರಿಟಿ ಹಾಗೂ ಬಾಲಿವುಡ್‌ ನಟಿಯರು ಕ್ರಿಕೆಟಿಗರ ಪ್ರೇಮ ಪಾಶದಲ್ಲಿ ಬಿದ್ದು.. ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ.
  • ಧನಶ್ರೀ ವರ್ಮ ಕೂಡ ಒಬ್ಬರು
  • ಇವರು ಭಾರತ ತಂಡದ ಸ್ಪಿನ್ನರ್ ಯಜ್ವೇಂದ್ರ ಚಹಾಲ್ ಅವರ ಪತ್ನಿಯಾಗಿ ನೆಟಿಜನ್‌ಗಳಿಗೆ ಚಿರಪರಿಚಿತರು.
ಜನಪ್ರಿಯ ಸೆಲೆಬ್ರಿಟಿ.. ಪತಿಗಿಂತ ಹೆಚ್ಚು ಕ್ರೇಜ್‌ ಪಡೆದ ಸ್ಟಾರ್ ಕ್ರಿಕೆಟಿಗನ ಪತ್ನಿ ಈಕೆ!    title=

Dhanashree Verma: ಹಲವಾರು ಸಲೆಬ್ರಿಟಿ ಹಾಗೂ ಬಾಲಿವುಡ್‌ ನಟಿಯರು ಕ್ರಿಕೆಟಿಗರ ಪ್ರೇಮ ಪಾಶದಲ್ಲಿ ಬಿದ್ದು.. ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ.. ಅಂತಹ ವ್ಯಕ್ತಿಗಳಲ್ಲಿ ಧನಶ್ರೀ ವರ್ಮ ಕೂಡ ಒಬ್ಬರು.. ಇವರು ಭಾರತ ತಂಡದ ಸ್ಪಿನ್ನರ್ ಯಜ್ವೇಂದ್ರ ಚಹಾಲ್ ಅವರ ಪತ್ನಿಯಾಗಿ ನೆಟಿಜನ್‌ಗಳಿಗೆ ಚಿರಪರಿಚಿತರು. 

 27 ಸೆಪ್ಟೆಂಬರ್ 1996 ರಂದು ದುಬೈ, UAE (ಯುನೈಟೆಡ್ ಅರಬ್ ಎಮಿರೇಟ್ಸ್) ನಲ್ಲಿ ಜನಿಸಿದ ಧನಶ್ರೀ ವರ್ಮಾ 2014 ರಲ್ಲಿ ಮುಂಬೈನ ಡಿವೈ ಪಾಟೀಲ್ ಕಾಲೇಜಿನಲ್ಲಿ Dentistryಯನ್ನು ಅಧ್ಯಯನ ಮಾಡಿದರು. ಆದರೆ ಧನಶ್ರೀ ವರ್ಮಾ ಅವರಿಗೆ ಡ್ಯಾನ್ಸ್ ಮಾಡುವುದು ತುಂಬಾ ಇಷ್ಟ. ಯೂಟ್ಯೂಬ್‌ನಲ್ಲಿ ತಮ್ಮದೇ ಆದ ಚಾನಲ್ ಅನ್ನು ಸಹ ಈಕೆ ಹೊಂದಿದ್ದಾಳೆ.. ಡ್ಯಾನ್ಸ್ ಮಾಡುವ ಮೂಲಕವೇ ಸೋಷಿಯಲ್‌ ಮಿಡಿಯಾದಲ್ಲಿ ಧನು ಸಖತ್‌ ಫೇಮ್‌ ಗಳಿಸಿದ್ದಾರೆ. 

ಇದನ್ನೂ ಓದಿ-ಯುಪಿ ವಾರಿಯರ್ಸ್ ಎದುರು RCB ಗೆ ಭರ್ಜರಿ ಜಯ.. ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು!

ಧನಶ್ರೀ ವರ್ಮಾ ಪ್ರಸ್ತುತ ಯೂಟ್ಯೂಬ್‌ನಲ್ಲಿ 2.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇವರು ಯೂಟ್ಯೂಬ್ ಚಾನೆಲ್, ಇತರ ಸಾಮಾಜಿಕ ಮಾಧ್ಯಮಗಳು, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು, ಕೋರಿಯೋಗ್ರಾಫಿ ಇತ್ಯಾದಿಗಳ ಮೂಲಕ ಉತ್ತಮವಾಗಿ ಗಳಿಸುತ್ತಿದ್ದಾರೆ. ವರದಿ ಪ್ರಕಾರ.. ಧನಶ್ರೀ ಅವರ ನಿವ್ವಳ ಮೌಲ್ಯ ರೂ.3 ಮಿಲಿಯನ್ ಡಾಲರ್. ಭಾರತೀಯ ಕರೆನ್ಸಿಯಲ್ಲಿ 24 ಕೋಟಿ..

ಇದನ್ನೂ ಓದಿ-IPL 2024: ಧೋನಿ ಬಳಿಕ CSK ಮುಂದಿನ ನಾಯಕ ಇವರೇ: ಮಾಹಿ ಪೋಸ್ಟರ್ ಬೆನ್ನಲ್ಲೇ ಹೊರಬಿತ್ತು ಸೀಕ್ರೆಟ್!

ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಡಾನ್ಸ್‌ ಫರ್ಮಾಮೆನ್ಸ್‌ವೊಂದರಲ್ಲಿ ಧನಶ್ರೀ ಜೊತೆ ಸೇರಿಕೊಂಡಿದ್ದರು.. ಆಗಲೇ ಇಬ್ಬರ ಮಧ್ಯೆ ಸ್ನೇಹ ಚಿಗುರಿ.. ಪ್ರೀತಿಯಾಗಿ ಪರಿವರ್ತನೆಯಾಯಿತು..  ಡಿಸೆಂಬರ್ 2020 ರಲ್ಲಿ ಕುಟುಂಬದ ಸಮ್ಮುಖದಲ್ಲಿ ವಿವಾಹವಾದರು.. 

 ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ಧನಶ್ರೀ ತನ್ನ ಪತಿ ಚಹಾಲ್ ಜೊತೆಗಿನ ಫೋಟೋಗಳು, ರೀಲ್ಸ್ ಮತ್ತು ಡ್ಯಾನ್ಸ್ ವೀಡಿಯೊಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಕಳೆದ ವರ್ಷ ಧನಶ್ರೀ ವರ್ಮಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಚಹಾಲ್ ಅವರ ಕುಟುಂಬದ ಹೆಸರನ್ನು ತೆಗೆದುಹಾಕಿದ್ದರು.. ಹೀಗಾಗಿ ಚಹಾಲ್ ಧನಶ್ರೀ ವರ್ಮಾ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.. ಇಷ್ಟೇ ಅಲ್ಲ ಟೀಮ್ ಇಂಡಿಯಾ ಬ್ಯಾಟರ್ ಶ್ರೇಯಸ್ ಅಯ್ಯರ್ ಗೆ ಹತ್ತಿರವಾದ ಕಾರಣಕ್ಕೆ ನೆಟಿಜನ್ ಗಳು ಧನಶ್ರೀ ಅವರನ್ನು ಸಖತ್ ಟ್ರೋಲ್ ಕೂಡಾ ಮಾಡಿದ್ದರು.. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News