World Test Championship: ಪಾಕಿಸ್ತಾನದ ಸೋಲಿನಿಂದ ಟೀಂ ಇಂಡಿಯಾಗೆ ಲಾಭ: 10 ವರ್ಷಗಳ ಬಳಿಕ ಕೈಸೇರುತ್ತಾ ಐಸಿಸಿ ಟ್ರೋಫಿ!

World Test Championship 2021-2023: ಈ ವರ್ಷ ಪಾಕಿಸ್ತಾನದ ಮೂರನೇ ಟೆಸ್ಟ್ ಸರಣಿ ಸೋಲು ಇದಾಗಿದೆ. ಪಾಕಿಸ್ತಾನ ವಿರುದ್ಧದ ಸರಣಿಯನ್ನು ಗೆದ್ದುಕೊಂಡಿರುವ ಇಂಗ್ಲೆಂಡ್ ತಂಡವು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತಲುಪಿದೆ. ಪಾಕಿಸ್ತಾನದ ಈ ಸೋಲಿನಿಂದ ಟೀಂ ಇಂಡಿಯಾಗೂ ಲಾಭವಾಗಿದೆ. ಅಂದರೆ ಭಾರತ ನಾಲ್ಕನೇ ಸ್ಥಾನಕ್ಕೇರಿದೆ.

Written by - Bhavishya Shetty | Last Updated : Dec 12, 2022, 05:47 PM IST
    • ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಸೋಲು ಕಂಡಿದೆ
    • 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುವ ಕನಸು ಭಗ್ನ
    • ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಪಾಕಿಸ್ತಾನ ಆರನೇ ಸ್ಥಾನಕ್ಕೆ ಕುಸಿದಿದೆ
World Test Championship: ಪಾಕಿಸ್ತಾನದ ಸೋಲಿನಿಂದ ಟೀಂ ಇಂಡಿಯಾಗೆ ಲಾಭ: 10 ವರ್ಷಗಳ ಬಳಿಕ ಕೈಸೇರುತ್ತಾ ಐಸಿಸಿ ಟ್ರೋಫಿ!  title=
World Test Championship

World Test Championship 2021-2023: ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೂ ಸೋಲು ಕಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ 0-2 ಅಂತರದ ಹಿನ್ನಡೆ ಸಾಧಿಸಿದೆ. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೂ ಸೋಲನ್ನು ಎದುರಿಸಬೇಕಾಯಿತು. ಸರಣಿ ಸೋಲಿನ ನಂತರ 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ತಲುಪುವ ಪಾಕಿಸ್ತಾನದ ಭರವಸೆಯೂ ಅಂತ್ಯ ಕಂಡಿದೆ. ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಪಾಕಿಸ್ತಾನ ಆರನೇ ಸ್ಥಾನಕ್ಕೆ ಕುಸಿದಿದೆ.

ಇದನ್ನೂ ಓದಿ: ಕಾಡಾನೆ ದಾಳಿಯಿಂದಾದ ಜೀವ ಹಾನಿ-ಬೆಳೆಹಾನಿ ಪರಿಹಾರ ದ್ವಿಗುಣ: ಸಚಿವ ಕೆ.ಗೋಪಾಲಯ್ಯ

ಈ ವರ್ಷ ಪಾಕಿಸ್ತಾನhttps://zeenews.india.com/kannada/technology/fastag-is-no-longer-required-toll-tax-will-be-deducted-from-the-account-if-done-this-way-107025ದ ಮೂರನೇ ಟೆಸ್ಟ್ ಸರಣಿ ಸೋಲು ಇದಾಗಿದೆ. ಪಾಕಿಸ್ತಾನ ವಿರುದ್ಧದ ಸರಣಿಯನ್ನು ಗೆದ್ದುಕೊಂಡಿರುವ ಇಂಗ್ಲೆಂಡ್ ತಂಡವು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತಲುಪಿದೆ. ಪಾಕಿಸ್ತಾನದ ಈ ಸೋಲಿನಿಂದ ಟೀಂ ಇಂಡಿಯಾಗೂ ಲಾಭವಾಗಿದೆ. ಅಂದರೆ ಭಾರತ ನಾಲ್ಕನೇ ಸ್ಥಾನಕ್ಕೇರಿದೆ. ಪಾಕಿಸ್ತಾನ ಮತ್ತು ಇಂಗ್ಲೆಂಡ್ ಈಗಾಗಲೇ ಔಟ್ ಆದ ಬಳಿಕ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಭಾರತ ಈಗ WTC ಫೈನಲ್‌ಗಾಗಿ ರೇಸ್‌ನಲ್ಲಿವೆ. ಡಬ್ಲ್ಯುಟಿಸಿ ವೇಳಾಪಟ್ಟಿಯಲ್ಲಿ ಟೀಂ ಇಂಡಿಯಾ 6 ಪಂದ್ಯಗಳು ಬಾಕಿ ಉಳಿದಿವೆ. ಫೈನಲ್‌ಗೆ ತಲುಪಲು ಅವರು ತಮ್ಮ 5 ಪಂದ್ಯಗಳನ್ನು ಗೆಲ್ಲಬೇಕು.

ಸದ್ಯ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶವನ್ನು 2-0 ಅಂತರದಿಂದ ಸೋಲಿಸಬೇಕಾಗಿದೆ. ಅದರ ನಂತರ, ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು 4-0 ಅಥವಾ 3-1 ಅಥವಾ 3-0 ರಿಂದ ಗೆಲ್ಲಬೇಕಾಗುತ್ತದೆ. ಟೀಮ್ ಇಂಡಿಯಾ ಮುಂದಿನ ವರ್ಷ ಆಸ್ಟ್ರೇಲಿಯಾವನ್ನು ತವರು ನೆಲದಲ್ಲಿ ಎದುರಿಸಲಿದೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ.

ಇದನ್ನೂ ಓದಿ: New Year 2023: ಹೊಸ ವರ್ಷದಲ್ಲಿ ಭಾರಿ ಯಶಸ್ಸಿಗಾಗಿ ಹಸಿರು ಏಲಕ್ಕಿಯ ಈ ತಂತ್ರಗಳನ್ನು ಅನುಸರಿಸಿ

WTCಯ ಈ ವೇಳಾಪಟ್ಟಿಯಲ್ಲಿ ಒಂದು ಪಂದ್ಯ ಉಳಿದಿದೆ. ಹೀಗಿರುವಾಗ ಮತ್ತೊಮ್ಮೆ ಫೈನಲ್‌ ಪ್ರವೇಶಿಸಲು ಟೀಂ ಇಂಡಿಯಾಗೆ ಉತ್ತಮ ಅವಕಾಶವಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಸೀಸನ್‌ನಲ್ಲಿ ಟೀಂ ಇಂಡಿಯಾ ಫೈನಲ್‌ವರೆಗೆ ಪ್ರಯಾಣಿಸಿತ್ತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಬೇಕಾಯಿತು. ಭಾರತ ತಂಡ ಈ ಬಾರಿ ಡಬ್ಲ್ಯುಟಿಸಿ ಗೆದ್ದರೆ 10 ವರ್ಷಗಳ ಬಳಿಕ ಐಸಿಸಿ ಟ್ರೋಫಿ ವಶಪಡಿಸಿಕೊಳ್ಳಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News