T20 World Cup 2021: ಭಾರತ ಮತ್ತು ಪಾಕಿಸ್ತಾನ ಪಂದ್ಯದ ಹಿನ್ನೆಲೆ ಗ್ರಾಹಕರಿಗೆ ಭಾರಿ ಡಿಸ್ಕೌಂಟ್ ನೀಡುತ್ತಿರುವ ರೆಸ್ಟೋರೆಂಟ್ ಗಳು

India Vs Pakistan: ಇಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Satadium) ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಾ ಪಂದ್ಯ ನಡೆಯಲಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಭಾರತದ ಅನೇಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು IND VS PAK ಪಂದ್ಯದ ಬಗ್ಗೆ ಉತ್ಸುಕರಾಗಿದ್ದು, ಗ್ರಾಹಕರಿಗೆ ಭಾರಿ ರಿಯಾಯಿತಿಗಳನ್ನು (Restaurents Gave Discounts) ನೀಡುತ್ತಿವೆ.

Written by - Nitin Tabib | Last Updated : Oct 24, 2021, 03:47 PM IST
  • ಇಂದು ಭಾರತ-ಪಾಕ್ ನಡುವೆ ಟಿ20 ವಿಶ್ವಕಪ್ ಮಹಾ ಸಮರ
  • ಈ ಹಿನ್ನೆಲೆ ರೆಸ್ಟೋರೆಂಟ್ ಗಳು ತಮ್ಮ ಗ್ರಾಹಕರಿಗೆ ಭಾರಿ ರಿಯಾಯಿತಿ ನೀಡುತ್ತಿವೆ.
  • ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಇದುವರೆಗೂ ಒಂದೂ ಪಂದ್ಯವನ್ನು ಸೋತಿಲ್ಲ.
T20 World Cup 2021: ಭಾರತ ಮತ್ತು ಪಾಕಿಸ್ತಾನ ಪಂದ್ಯದ ಹಿನ್ನೆಲೆ ಗ್ರಾಹಕರಿಗೆ ಭಾರಿ ಡಿಸ್ಕೌಂಟ್ ನೀಡುತ್ತಿರುವ ರೆಸ್ಟೋರೆಂಟ್ ಗಳು title=
T20 World Cup 2021 (File Photo)

Ind Vs Pak - ಇಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ನಡುವೆ ಟಿ20 ವಿಶ್ವಕಪ್ ಪಂದ್ಯ ನಡೆಯಲಿದ್ದು, ಉಭಯ ದೇಶಗಳ ಪ್ರೇಕ್ಷಕರಲ್ಲಿ ಭಾರೀ ಉತ್ಸಾಹ ಮೂಡಿದೆ. ಭಾರತ-ಪಾಕಿಸ್ತಾನ ನಡುವೆ ಪಂದ್ಯ (Ind Vs Pak T20 World Cup) ನಡೆದಾಗಲೆಲ್ಲ ರೋಚಕತೆ ಉತ್ತುಂಗಕ್ಕೇರುತ್ತದೆ. ಎಲ್ಲಾ ಕ್ರೀಡಾ ಪ್ರೇಮಿಗಳು ಒಂದಾಗುತ್ತಾರೆ. ಭಾರತದ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯವನ್ನು ಹಬ್ಬದಂತೆ ಆಚರಿಸುತ್ತಾರೆ. ಇಂದು ಕರ್ವಾ ಚೌತ್ ದಿನದಂದು ಈ  ಪಂದ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈ ಹಬ್ಬವನ್ನು ಆಚರಿಸುವ ವಿಶಿಷ್ಟ ವಿಧಾನವನ್ನು ಕಂಡುಕೊಂಡಿವೆ. 

IND VS PAK ಪಂದ್ಯಕ್ಕಾಗಿ ಟೊಂಕ ಕಟ್ಟಿ ನಿಂತ ರೆಸ್ಟೋರೆಂಟ್ ಗಳು
ಇಂದು ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಹಬ್ಬವಾಗಿ ಮಾರ್ಪಟ್ಟಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಹೊಟೇಲ್ ನವರು ಹಿತಕರ ವಾತಾವರಣ ಸೃಷ್ಟಿಸಿದ್ದಾರೆ. ಪಂದ್ಯದ ಜೊತೆಗೆ, ಇಂದು ಕರ್ವಾ ಚೌತ್, ಇರುವುದರಿಂದ ಹೋಟೆಲ್ ಮಾಲೀಕರು ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದಾರೆ. ಅವರು ಸರಕುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲು ಸಜ್ಜಾಗಿದ್ದಾರೆ. ಅನೇಕ ಹೋಟೆಲ್‌ಗಳು ದೊಡ್ಡ ಟಿವಿ ಪರದೆಗಳನ್ನು ಸ್ಥಾಪಿಸಿವೆ. ಇದರಿಂದ ಪ್ರೇಕ್ಷಕರು ಸುಲಭವಾಗಿ ಪಂದ್ಯವನ್ನು ಆನಂದಿಸಬಹುದು. ಒಟ್ಟಿನಲ್ಲಿ ನಿಮ್ಮ ಜೀವನದ ಅಮೂಲ್ಯ ಸಮಯವನ್ನು ಕಳೆಯುವಂತಹ ವಾತಾವರಣ ಇಂದು ನಿರ್ಮಾಣವಾಗುತ್ತಿದೆ.

ಶೇ.40 ರಷ್ಟು ರಿಯಾಯಿತಿ
ಗುರುಗ್ರಾಮ್‌ನ ಹೋಟೆಲ್‌ನಲ್ಲಿ, ನೀವು ಈಗ ನಿಮ್ಮ ಟೇಬಲ್ ಅನ್ನು ಬುಕ್ ಮಾಡಿದರೆ, ನಿಮಗೆ ಭಾರತದ ಗೆಲುವು ಸಾಧಿಸಿದರೆ ನಿಮಗೆ ಒಂದು ಬಿಯರ್ ಉಚಿತವಾಗಿ ಸಿಗಲಿದೆ. ನೀವು ಕ್ರಿಕೆಟ್ ಅಭಿಮಾನಿಯಾಗಿದ್ದರೆ, ಹೋಟೆಲ್ ಗಳಲ್ಲಿ ನಿಮಗೆ ಪ್ರಿನ್ಸ್ ರೀತಿಯ ಅನುಭವ ಸಿಗಲಿದೆ. ಉಚಿತ ವೌಚರ್ ಗಳು ಹಾಗೂ ದೆಹಲಿಯ ನೆಹರೂ ಪ್ಲೇಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ನಿಮಗೆ ಸಿಗಲಿದೆ. ರೆಸ್ಟೋರೆಂಟ್‌ಗಳು ತಮ್ಮ ಗ್ರಾಹಕರಿಗೆ ಭಾರತದಲ್ಲಿ ಬ್ಯಾಟಿಂಗ್ ಮಾಡುವಾಗ 40% ರಿಯಾಯಿತಿ ಪಡೆಯುವ ಅದ್ಭುತ ಅವಕಾಶವನ್ನು ನೀಡುತ್ತಿವೆ. ಮನೆಯಲ್ಲಿ ಕುಳಿತು ಪಂದ್ಯ ವೀಕ್ಷಿಸಲು ಬಯಸುವವರು ರಿಯಾಯಿತಿಯೊಂದಿಗೆ ಪಿಜ್ಜಾವನ್ನು ಆರ್ಡರ್ ಮಾಡಬಹುದು.

ಇದನ್ನೂ ಓದಿ-Ind Vs Pak: Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ?

ಸರಿಯಾದ ಸ್ಕೋರ್ ಗೆಸ್ ಮಾಡಿ ಬಿರಿಯಾನಿ ಉಚಿತ ಪಡೆಯಿರಿ
ಈ ಕುರಿತು ಹೇಳಿಕೆ ನೀಡಿರುವ ಪ್ರಚಲಿತ ಹೋಟೆಲ್ ವೊಂದರ ಸಿಇಓ, 'ನಾವು ಸಾಮಾಜಿಕ ಮಾಧ್ಯಮದಲ್ಲಿ ಸ್ಪರ್ಧೆಗಳನ್ನು ನಡೆಸುತ್ತಿದ್ದು, ಸ್ಪರ್ಧೆಯಲ್ಲಿ ನೀವು ಆಟಗಾರರ ಸರಿಯಾದ ಸ್ಕೋರ್ ಅಥವಾ ವಿಕೆಟ್‌ಗಳನ್ನು ಊಹಿಸಿದರೆ, ನಿಮಗೆ ₹ 5,000 ರ ವೋಚರ್‌ಗಳನ್ನು ಸಿಗಲಿವೆ' ಎಂದು ಹೇಳಿದ್ದಾರೆ. ಇದರ ಜೊತೆಗೆ ನೀವು ಪಂದ್ಯವನ್ನು ಕೂಡ ನೋಡಿ ಆನಂದಿಸಬಹುದು.

ಇದನ್ನೂ ಓದಿ-T20 World Cup, Ind vs Pak: ಪಾಕ್ ವಿರುದ್ಧ ಜೈತ್ರಯಾತ್ರೆ ಮುಂದುವರೆಸುವುದೇ ಭಾರತ..?

ಇಂದು ನಡೆಯಲಿದೆ ಈ ಮಹಾಸಮರ
ದುಬೈನ ಮರುಭೂಮಿ ಮೈದಾನದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಎರಡು ವರ್ಷಗಳ ನಂತರ ಎರಡೂ ದೇಶಗಳು ಪರಸ್ಪರರ ವಿರುದ್ಧ ಆಡುತ್ತವೆ. ಕೊನೆಯ ಬಾರಿಗೆ  ಉಭಯ ತಂಡಗಳು 2019ರ ವಿಶ್ವಕಪ್ ನಲ್ಲಿ ಮುಖಾಮುಖಿಯಾಗಿದ್ದವು.  ಇಲ್ಲಿಯವರೆಗೆ ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸೋತಿಲ್ಲ. ಈ ದಾಖಲೆಯನ್ನು ಉಳಿಸಿಕೊಳ್ಳಲು ಭಾರತ ಇಳಿಯಲಿದೆ. ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ದಾಖಲೆ 5-0 ಆಗಿದೆ.

ಇದನ್ನೂ ಓದಿ-ENG VS WI -  6 ವಿಕೆಟ್ ಗಳಿಂದ ಗೆಲುವು ಸಾಧಿಸಿದ ಇಂಗ್ಲೆಂಡ್, 55 ರನ್ ಗಳಿಗೆ WI ಆಲೌಟ್ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News