IPL 2024 : ಸುರೇಶ್‌ ರೈನಾ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಸೇರ್ಪಡೆ.!

IPL 2024 Suresh Raina: ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಐಪಿಎಲ್ 2024ರಲ್ಲಿ ಕಮ್‌ ಬ್ಯಾಕ್‌ ಮಾಡಬಹುದು ಎನ್ನಲಾಗಿದೆ.  

Written by - Chetana Devarmani | Last Updated : Dec 29, 2023, 03:26 PM IST
  • ಸುರೇಶ್ ರೈನಾ ಐಪಿಎಲ್ 2024ರಲ್ಲಿ ಕಮ್‌ ಬ್ಯಾಕ್‌
  • ಲಕ್ನೋ ಸೂಪರ್‌ ಜೈಂಟ್ಸ್‌
  • ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್
IPL 2024 : ಸುರೇಶ್‌ ರೈನಾ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಸೇರ್ಪಡೆ.!   title=
Suresh Raina

IPL 2024 Suresh Raina: ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಐಪಿಎಲ್ 2024ರಲ್ಲಿ ಕಮ್‌ ಬ್ಯಾಕ್‌ ಮಾಡಬಹುದು ಎನ್ನಲಾಗಿದೆ. ಸುರೇಶ್ ರೈನಾ ಐಪಿಎಲ್‌ನಲ್ಲಿ ಸುದೀರ್ಘ ಕಾಲ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಆಡಿದರು. ಸುರೇಶ್ ರೈನಾ ಅವರ ಅದ್ಭುತ ಬ್ಯಾಟಿಂಗ್‌ನಿಂದಾಗಿ ಅವರನ್ನು ಮಿಸ್ಟರ್ ಐಪಿಎಲ್ ಎಂದು ಕರೆಯಲಾಗುತ್ತದೆ. ಸುರೇಶ್ ರೈನಾ ಮತ್ತೊಮ್ಮೆ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸುರೇಶ್ ರೈನಾ ಅಭಿಮಾನಿಗಳಿಗೆ ಸಂತಸದ ಸುದ್ದಿ ಇದಾಗಿದೆ. ಸುರೇಶ್ ರೈನಾ ಐಪಿಎಲ್ 2024 ರಲ್ಲಿ ಪುನರಾಗಮನ ಮಾಡಬಹುದು ಎನ್ನಲಾಗುತ್ತಿದೆ. ಆದರೆ ಸುರೇಶ್ ರೈನಾ ಈ ಬಾರಿ ಆಟಗಾರನಾಗಿ ಅಲ್ಲ ಮೆಂಟರ್‌ ಆಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. 

ಇದನ್ನೂ ಓದಿ : IND vs SA: ರೋಹಿತ್ ಶರ್ಮಾ ನಿರೀಕ್ಷೆ ಹುಸಿಯಾಗಿಸಿದ ಆಟಗಾರ ! ಟೀಂ ಇಂಡಿಯಾ ಸೋಲಿನಲ್ಲಿ ಇವರದ್ದೇ ಮುಖ್ಯ ಪಾತ್ರ ! 

ವರದಿಗಳ ಪ್ರಕಾರ, ಸುರೇಶ್ ರೈನಾ ಅವರನ್ನು ಲಕ್ನೋ ಸೂಪರ್ ಜೈಂಟ್ಸ್‌ನ ಮೆಂಟರ್‌ ಆಗಿ ಮಾಡಬಹುದು ಎನ್ನಲಾಗಿದೆ. ಸುರೇಶ್ ರೈನಾ ಲಕ್ನೋ ಸೂಪರ್‌ಜೈಂಟ್ಸ್‌ನ ಭಾಗವಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 

ಸುರೇಶ್ ರೈನಾ ಶೀಘ್ರದಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಬಹುದೆಂಬ ಊಹಾಪೋಹಗಳು ಶುರುವಾಗಿವೆ. ಕಳೆದ ಎರಡು ಸೀಸನ್‌ಗಳಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಅದ್ಭುತ ಪ್ರದರ್ಶನ ನೀಡಿದೆ. ತಂಡವು ತನ್ನ ಮೊದಲ ಟ್ರೋಫಿಗಾಗಿ ಈ ಬಾರಿಯೂ ಹೋರಾಟ ನಡೆಸಲಿದೆ. 

ಇದನ್ನೂ ಓದಿ : ಹರಿಣಗಳ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಗೆ ಇನಿಂಗ್ಸ್ ಸಹಿತ 32 ರನ್ಗಳ ಸೋಲು  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News