ಟೀಂ ಇಂಡಿಯಾಗೆ ಸಿಕ್ಕೇಬಿಟ್ರು ಜೂ. ಯುವರಾಜ್ ಸಿಂಗ್! ಈತನ ಬ್ಯಾಟಿಂಗ್ ಮೋಡಿಗೆ ಫ್ಯಾನ್ ಆಗ್ಬಿಟ್ಟೆ ಎಂದ ಗವಾಸ್ಕರ್

Sunil Gavaskar on Rinku Singh: ಟೀಂ ಇಂಡಿಯಾದ ಮಾಜಿ ಅನುಭವಿ ಆರಂಭಿಕ ಬ್ಯಾಟ್ಸ್‌’ಮನ್ ಸುನಿಲ್ ಗವಾಸ್ಕರ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಡುವೆ ಯುವ ಬ್ಯಾಟ್ಸ್‌ಮನ್‌ ಒಬ್ಬರನ್ನು ಕೊಂಡಾಡಿದ್ದಾರೆ.

Written by - Bhavishya Shetty | Last Updated : Dec 11, 2023, 09:50 PM IST
    • ಟೀಂ ಇಂಡಿಯಾದ ಮಾಜಿ ಅನುಭವಿ ಆರಂಭಿಕ ಬ್ಯಾಟ್ಸ್‌’ಮನ್ ಸುನಿಲ್ ಗವಾಸ್ಕರ್
    • ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಗವಾಸ್ಕರ್
    • ಆತ ಟೀಂ ಇಂಡಿಯಾಗೆ ಭವಿಷ್ಯದ ಯುವರಾಜ್ ಸಿಂಗ್ ಆಗುತ್ತಾರೆ ಎಂದು ಹೇಳಿದ್ದಾರೆ
ಟೀಂ ಇಂಡಿಯಾಗೆ ಸಿಕ್ಕೇಬಿಟ್ರು ಜೂ. ಯುವರಾಜ್ ಸಿಂಗ್! ಈತನ ಬ್ಯಾಟಿಂಗ್ ಮೋಡಿಗೆ ಫ್ಯಾನ್ ಆಗ್ಬಿಟ್ಟೆ ಎಂದ ಗವಾಸ್ಕರ್  title=
Sunil Gavaskar-Yuvraj Singh

Sunil Gavaskar on Rinku Singh: ಟೀಂ ಇಂಡಿಯಾದ ಮಾಜಿ ಅನುಭವಿ ಆರಂಭಿಕ ಬ್ಯಾಟ್ಸ್‌’ಮನ್ ಸುನಿಲ್ ಗವಾಸ್ಕರ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಡುವೆ ಯುವ ಬ್ಯಾಟ್ಸ್‌ಮನ್‌ ಒಬ್ಬರನ್ನು ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ, ಈತ ಟೀಂ ಇಂಡಿಯಾಗೆ ಭವಿಷ್ಯದ ಯುವರಾಜ್ ಸಿಂಗ್ ಆಗುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಸ್ಟಾಪ್ ಕ್ಲಾಕ್' ನಿಯಮ: ಆಟ ನಿಧಾನವಾದರೆ 5 ರನ್ ದಂಡ ವಿಧಿಸುತ್ತೆ ICCಯ ಈ ಹೊಸ ರೂಲ್ಸ್!

ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಗವಾಸ್ಕರ್, “ಪ್ರತಿಭೆ - ಎಲ್ಲರಿಗೂ ಇದು ಸಿಗುವುದಿಲ್ಲ. ನೀವು ಕ್ರೀಡೆಗಳನ್ನು ಪ್ರೀತಿಸಬಹುದು. ನೀವು ಇಡೀ ದಿನ ಆಡಬಹುದು, ಆದರೆ ಕೆಲವೊಮ್ಮೆ ಸಾಕಷ್ಟು ಪ್ರತಿಭೆ ಇಲ್ಲ ಎಂದು ನಿಮಗನಿಸಬಹುದು. ಆದರೆ ರಿಂಕು ಇದನ್ನೆಲ್ಲಾ ದಾಟಬಲ್ಲ. ಕಳೆದ 2-3 ವರ್ಷಗಳಲ್ಲಿ ಅವನು ಇದೇ ಮಾಡಿದ್ದು… ಅವಕಾಶ ಸಿಕ್ಕಿದಾಗ ಮತ್ತು ಅದನ್ನು ಆತ ಉಪಯೋಗಿಸಿಕೊಂಡ ರೀತಿ ಅದ್ಭುತ” ಎಂದಿದ್ದಾರೆ.

'ಈಗ ರಿಂಕು ಟೀಂ ಇಂಡಿಯಾದ ಭಾಗವಾಗಿದ್ದಾರೆ. ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈತ ಜೂ. ಯುವರಾಜ್ ಸಿಂಗ್ ಆಗುತ್ತಾರೆ ಎಂದು ಜನರು ಈಗ ನಿರೀಕ್ಷಿಸುತ್ತಿದ್ದಾರೆ. ರಿಂಕು ಸಿಂಗ್ - ಯುವರಾಜ್ ಸಿಂಗ್” ಎಂದಿದ್ದಾರೆ.

ಐಪಿಎಲ್ 2023ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಮಿಂಚಿದ್ದರು. ಈ ಪಂದ್ಯದ ಕೊನೆಯ ಓವರ್‌ನಲ್ಲಿ ವೇಗದ ಬೌಲರ್ ಯಶ್ ದಯಾಳ್ ಅವರ ಎಸೆತಕ್ಕೆ ಸತತ 5 ಸಿಕ್ಸರ್ ಬಾರಿಸುವ ಮೂಲಕ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದರು. ಅವರ 5 ಸಿಕ್ಸರ್‌’ಗಳಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಅಸಾಧ್ಯವೆಂದು ಅಂದುಕೊಂಡಿದ್ದ ಪಂದ್ಯವನ್ನು ಗೆದ್ದಿತ್ತು.

ಇದನ್ನೂ ಓದಿ: ಮುಂಜಾನೆ ಹಳಸಿದ ಬಾಯಲ್ಲಿ ಈ ನೀರನ್ನು ಕುಡಿದರೆ ಅತಿ ವೇಗವಾಗಿ ತೂಕ ಕಡಿಮೆ ಮಾಡಬಹುದು!

ರಿಂಕು ಇದುವರೆಗೆ ಭಾರತ ಪರ 10 ಟಿ20 ಪಂದ್ಯಗಳ ಭಾಗವಾಗಿದ್ದಾರೆ. ಇವುಗಳಲ್ಲಿ 60ರ ಸರಾಸರಿಯಲ್ಲಿ 180 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 187 ಕ್ಕಿಂತ ಹೆಚ್ಚಿದೆ. ಹಲವು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News