ನವದೆಹಲಿ: ಸ್ಟಾರ್ ಆಸ್ಟ್ರೇಲಿಯಾದ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಮಂಗಳವಾರದಂದು ಸುಮಾರು ಎರಡು ದಶಕಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.39 ರ ಹರೆಯದ ಶೇನ್ ವಾಟ್ಸನ್ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಪರ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದ್ದಾರೆ.
'ನೀನು ಚೆನ್ನೈ ತಂಡದ ಹೃದಯ ಬಡಿತವಿದ್ದಂತೆ'-ಸುರೇಶ್ ರೈನಾಗೆ ಶೇನ್ ವ್ಯಾಟ್ಸನ್ ಹೃದಯಸ್ಪರ್ಶಿ ಸಂದೇಶ
ವ್ಯಾಟ್ಸನ್ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಚೆನ್ನೈ ತಂಡವು ಐಪಿಎಲ್ 2020ಯಲ್ಲಿ ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯಲು ವಿಫಲವಾದ ಬೆನ್ನಲ್ಲೇ ಅವರು ಅವರು ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.'ಈ ಮುಕ್ತಾಯ ಅಧ್ಯಾಯವು ಮೇಲಕ್ಕೆ ಹೋಗುವುದು ತುಂಬಾ ಕಷ್ಟಕರವಾಗಿದೆ, ಆದರೆ ನಾನು ಪ್ರಯತ್ನಿಸಲಿದ್ದೇನೆ. ಈ ಅದ್ಭುತ ಕನಸನ್ನು ಬದುಕಿದ್ದಕ್ಕಾಗಿ ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಈಗ ಮುಂದಿನ ರೋಚಕತೆಗೆ' ಎಂದು ವ್ಯಾಟ್ಸನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಶೇನ್ ವಾಟ್ಸನ್ ಹೆಸರಿಸಿದ ಸಾರ್ವಕಾಲಿಕ ಟಾಪ್ 5 ಟಿ-20 ಬೌಲರ್‌ಗಳಲ್ಲಿ ಸ್ಥಾನ ಪಡೆದ ಭಾರತೀಯ ಬೌಲರ್ !
As one amazing chapter closes another very exciting one opens.
I am so incredibly grateful.#thankyouhttps://t.co/UONVFc5WQz— T20 Stars (@stars_t20) November 3, 2020
ತಮ್ಮ ಐಪಿಎಲ್ ನಲ್ಲಿನ ಪ್ರದರ್ಶನಕ್ಕಾಗಿ ಭಾರತೀಯರ ಪ್ರೀತಿ ಪಾತ್ರರಾಗಿರುವ ವಾಟ್ಸನ್ ತಮ್ಮ 'ಟಿ 20 ಸ್ಟಾರ್ಸ್' ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ನಿವೃತ್ತಿ ಕುರಿತಾಗಿ ಮಾತನಾಡಿದ ಅವರು.'ನಾನು ಧನ್ಯವಾದ ಹೇಳಲು ಬಯಸುವ ಮೊದಲ ವ್ಯಕ್ತಿ ನನ್ನ ಅಮ್ಮ ಮತ್ತು ತಂದೆ, ಅವರು ನನ್ನ ಕನಸನ್ನು ನನಸಾಗಿಸಲು ಎಲ್ಲವನ್ನು ಮಾಡಿದರು. ನನ್ನ ಅಮ್ಮ ಮತ್ತು ತಂದೆ ತುಂಬಾ ತ್ಯಾಗ ಮಾಡಿದ್ದಾರೆ.ನನ್ನ ಪ್ರೀತಿಯ ಸಿಎಸ್ಕೆಗಾಗಿ ನಾನು ಕ್ರಿಕೆಟ್ನ ಕೊನೆಯ ಪಂದ್ಯವನ್ನು ಆಡಿದ್ದೇನೆ ಎಂದು ಭಾವನಾತ್ಮಕ ವ್ಯಾಟ್ಸನ್ ತಮ್ಮ ಯೂಟ್ಯೂಬ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
Thank you Watto Man, for everything. May your next chapter open with a bang, as always. Farewell beloved. 🦁💛 #ThankYouWattoMan #WhistlePodu #Yellove pic.twitter.com/lksEyODg19
— Chennai Super Kings (@ChennaiIPL) November 3, 2020
2008 ರಲ್ಲಿ, ಐಪಿಎಲ್‌ನ ಮೊದಲ ಆವೃತ್ತಿಯಿಂದ ಹಿಡಿದು 2015 ರ ವರೆಗೂ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿದ ಶೇನ್ ವಾಟ್ಸನ್ ನಂತರ ಎರಡು ಸಿಜನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಿದ್ದರು. ತದನಂತರ 2018 ರಲ್ಲಿ ಚೆನ್ನೈ ತಂಡವು ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.
ಶೇನ್ ವಾಟ್ಸನ್ ಆರ್ಭಟಕ್ಕೆ ತತ್ತರಿಸಿದ ರಾಜಸ್ತಾನ್
ಶೇನ್ ವ್ಯಾಟ್ಸನ್ 2016 ರಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು 2002 ರಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು.ಅದಾದ ನಂತರ 2005 ರಲ್ಲಿ ಟೆಸ್ಟ್ ಗೆ ಪಾದರ್ಪಣೆ ಮಾಡಿದ್ದರು.ಅವರು 190 ಏಕದಿನ ಪಂದ್ಯಗಳಲ್ಲಿ 5757 ರನ್ ಹಾಗೂ 168 ವಿಕೆಟ್ ಗಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ, 3731 ರನ್ ಗಳಿಸಿರುವುದಲ್ಲದೆ 75 ವಿಕೆಟ್ ಪಡೆದಿದ್ದಾರೆ.