Team Indiaಗೆ ಸಿಕ್ಕಾಯ್ತು ಯುವರಾಜ್ ಸಿಂಗ್ ತರಹದ ಬ್ಯಾಟ್ಸ್’ಮನ್! ಬೌಲಿಂಗ್’ನಲ್ಲೂ ಯುವಿಗೆ ಸರಿಸಾಟಿ ಈತ!

Shivam Dubey: ಚೆನ್ನೈ ಸೂಪರ್ ಕಿಂಗ್ಸ್ (CSK) ಬ್ಯಾಟಿಂಗ್ ಶೈಲಿಯಲ್ಲಿ ಸ್ವಲ್ಪಮಟ್ಟಿಗೆ ಯುವರಾಜ್ ಸಿಂಗ್ ಅವರಂತೆಯೇ ಇರುವ ಬ್ಯಾಟ್ಸ್‌ಮನ್ ಒಬ್ಬನಿದ್ದಾನೆ. ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಈ ಬ್ಯಾಟ್ಸ್‌ಮನ್ ಎಲ್ಲರನ್ನೂ ಶಾಕ್’ಗೆ ಒಳಗಾಗುವಂತೆ ಮಾಡಿದ್ದು ಸುಳ್ಳಲ್ಲ.

Written by - Bhavishya Shetty | Last Updated : Apr 24, 2023, 12:13 PM IST
    • ಯುವರಾಜ್ ಸಿಂಗ್ ಅವರಂತೆಯೇ ಇರುವ ಬ್ಯಾಟ್ಸ್‌ಮನ್ ಒಬ್ಬನಿದ್ದಾನೆ.
    • ತಮ್ಮ ಆಟದ ವೈಖರಿಯಿಂದಲೇ ಭಾರತವನ್ನು ವಿಶ್ವದ ಅತ್ಯುತ್ತಮ ತಂಡವನ್ನಾಗಿ ಮಾಡಬಲ್ಲರು.
    • ಶಿವಂ ದುಬೆ ಯುವರಾಜ್ ಸಿಂಗ್ ಅವರಂತೆ ಅಪಾಯಕಾರಿ ಮತ್ತು ಸ್ಟೈಲಿಸ್ಟ್ ಕ್ರಿಕೆಟಿಗ.
Team Indiaಗೆ ಸಿಕ್ಕಾಯ್ತು ಯುವರಾಜ್ ಸಿಂಗ್ ತರಹದ ಬ್ಯಾಟ್ಸ್’ಮನ್! ಬೌಲಿಂಗ್’ನಲ್ಲೂ ಯುವಿಗೆ ಸರಿಸಾಟಿ ಈತ!  title=
Shivam Dubey

Shivam Dubey: ಟೀಂ ಇಂಡಿಯಾಗೆ ಈಗ ಯುವರಾಜ್ ಸಿಂಗ್ ಅವರಂತಹ ಸ್ಫೋಟಕ ಕ್ರಿಕೆಟಿಗ ಸಿಕ್ಕಂತಾಗಿದೆ. ಬೌಲರ್‌’ಗಳ ನಿಷ್ಕರುಣೆಯ ದಾಳಿಯನ್ನೂ ಲೆಕ್ಕಿಸದೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾನೆ ಈತ. ಇದುವರೆಗೆ ಏಕದಿನ ಮತ್ತು ಟಿ20 ಕ್ರಿಕೆಟ್‌’ಗೆ ಭಾರತವು ಅಂತಹ ಬ್ಯಾಟ್ಸ್‌ಮನ್‌’ನ್ನು ಹುಡುಕುತಿತ್ತು. ಕಡೆಗೂ ಸಿಕ್ಕಿದ್ದಾನೆ ಈ ಯುವ ಆಟಗಾರ.

ಇದನ್ನೂ ಓದಿ: ವಿಶ್ವ ಕಂಡ ಆ 5 ಸ್ಫೋಟಕ ಬ್ಯಾಟ್ಸ್’ಮನ್’ಗಳನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ್ದು Sachin Tendulkar! ಯಾರವರು ಗೊತ್ತಾ?

 ಚೆನ್ನೈ ಸೂಪರ್ ಕಿಂಗ್ಸ್ (CSK) ಬ್ಯಾಟಿಂಗ್ ಶೈಲಿಯಲ್ಲಿ ಸ್ವಲ್ಪಮಟ್ಟಿಗೆ ಯುವರಾಜ್ ಸಿಂಗ್ ಅವರಂತೆಯೇ ಇರುವ ಬ್ಯಾಟ್ಸ್‌ಮನ್ ಒಬ್ಬನಿದ್ದಾನೆ. ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಈ ಬ್ಯಾಟ್ಸ್‌ಮನ್ ಎಲ್ಲರನ್ನೂ ಶಾಕ್’ಗೆ ಒಳಗಾಗುವಂತೆ ಮಾಡಿದ್ದು ಸುಳ್ಳಲ್ಲ.  ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌’ಮನ್ ಶಿವಂ ದುಬೆ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 21 ಎಸೆತಗಳಲ್ಲಿ 50 ರನ್‌’ಗಳ ಬಿರುಸಿನ ಇನಿಂಗ್ಸ್ ಆಡಿದರು.

ಈ ಡ್ಯಾಶಿಂಗ್ ಕ್ರಿಕೆಟಿಗ ತಮ್ಮ ಆಟದ ವೈಖರಿಯಿಂದಲೇ ಭಾರತವನ್ನು ವಿಶ್ವದ ಅತ್ಯುತ್ತಮ ತಂಡವನ್ನಾಗಿ ಮಾಡಬಲ್ಲರು. ಐಪಿಎಲ್‌’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಅವಕಾಶವನ್ನು ನಿರಂತರವಾಗಿ ನೀಡುತ್ತಿರುವ ಮಹೇಂದ್ರ ಸಿಂಗ್ ಧೋನಿಗೆ ಈ ಬ್ಯಾಟ್ಸ್‌ಮನ್ ಅಬ್ಬರದ ಸಂಪೂರ್ಣ ಕ್ರೆಡಿಟ್ ಸಲ್ಲುತ್ತದೆ ಎನ್ನಬಹುದು.

ಶಿವಂ ದುಬೆ ಯುವರಾಜ್ ಸಿಂಗ್ ಅವರಂತೆ ಅಪಾಯಕಾರಿ ಮತ್ತು ಸ್ಟೈಲಿಸ್ಟ್ ಕ್ರಿಕೆಟಿಗ. ಶಿವಂ ದುಬೆಗೆ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ನೀಡಿದರೆ, ಅವರು ಈ ವರ್ಷ ಭಾರತಕ್ಕೆ 2023 ರ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಡಬಹುದು. ಯುವರಾಜ್ ಸಿಂಗ್ 2011 ರ ವಿಶ್ವಕಪ್ ಅನ್ನು ಭಾರತಕ್ಕೆ ಗೆದ್ದುಕೊಟ್ಟಂತೆ, ಶಿವಂ ದುಬೆ ಕೂಡ 2023 ರ ವಿಶ್ವಕಪ್ ಟ್ರೋಫಿಯನ್ನು ಭಾರತಕ್ಕೆ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ.

ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ಶಿವಂ ದುಬೆ ಅವರನ್ನು 4 ಕೋಟಿ ರೂ.ಗೆ ಖರೀದಿಸಿತು. 29 ರ ಹರೆಯದ ಆಲ್‌’ರೌಂಡರ್ ಶಿವಂ ದುಬೆ ಕೂಡ ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಆಡಿದ್ದಾರೆ. ಶಿವಂ ದುಬೆ ಸಿಕ್ಸರ್‌’ಗಳನ್ನು ಬಾರಿಸುವ ರೀತಿ, ಯುವರಾಜ್ ಸಿಂಗ್ ಅವರಂತೆಯೇ ಕೊಂಚ ಭಾಸವಾಗುತ್ತದೆ. ಇನ್ನು ಬಲಗೈಯಿಂದ ವೇಗದ ಬೌಲಿಂಗ್ ಮಾಡುವ ದುಬೆ, ಎಡಗೈಯಿಂದ ಬ್ಯಾಟಿಂಗ್ ಮಾಡುತ್ತಾರೆ. ಎಡಗೈ ಬ್ಯಾಟ್ಸ್‌ಮನ್ ಶಿವಂ ದುಬೆ ಬೃಹತ್ ಸಿಕ್ಸರ್‌’ಗಳನ್ನು ಬಾರಿಸಬಲ್ಲರು.

ಶಿವಂ ದುಬೆ ಭಾರತ ಪರ 1 ODI ಮತ್ತು 13 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 13 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 105 ರನ್ ಗಳಿಸುವುದರ ಜೊತೆಗೆ 5 ವಿಕೆಟ್ ಪಡೆದಿದ್ದಾರೆ. ಭಾರತದ ಪರ ಆಡಿದ ಒಂದು ಏಕದಿನ ಪಂದ್ಯದಲ್ಲಿ 9 ರನ್ ಗಳಿಸಿದ್ದಾರೆ.

ಟೀಂ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಇರುವ ಕಾರಣ ಆಯ್ಕೆಗಾರರು ಶಿವಂ ದುಬೆ ಅವರನ್ನು ಕಡೆಗಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಐಪಿಎಲ್ 2023 ರಲ್ಲಿ ಶಿವಂ ದುಬೆ ಪ್ರದರ್ಶನ ನೀಡುತ್ತಿರುವ ರೀತಿಯನ್ನು ನಿರ್ಲಕ್ಷಿಸಲಾಗುವುದಿಲ್ಲ. ಶಿವಂ ದುಬೆಗೆ ಅವಕಾಶ ಸಿಕ್ಕರೆ 2023ರ ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಮ್ಯಾಚ್ ವಿನ್ನರ್ ಆಗಬಹುದು.

ಇದನ್ನೂ ಓದಿ: HBD Sachin Tendulkar Birthday: ಪಾಕ್’ನ ಆ ಸವಾಲು ಮೆಟ್ಟಿನಿಂತ ಸಚಿನ್ ಕ್ರಿಕೆಟ್ ಜೀವನದಲ್ಲೇ ಊಹಿಸಿರದ ದಾಖಲೆ ಬರೆದರು..

ಇನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಈ ಬಾರಿ ಐದನೇ ಐಪಿಎಲ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ತಂಡದಲ್ಲಿ ಅನೇಕ ಆಟಗಾರರು ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದರೂ ಸಹ, ಉಳಿದ ಆಟಗಾರರು ತಮ್ಮ ಸಾಮಾರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. 2010, 2011, 2018 ಮತ್ತು 2021ರಲ್ಲಿ ಚೆನ್ನೈ ಪ್ರಶಸ್ತಿ ಗೆದ್ದಿತ್ತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News