U19 T20 World Cup: ಶೆಫಾಲಿ ವರ್ಮಾ ನಾಯಕತ್ವದಲ್ಲಿ ಭಾರತ ಅಂಡರ್-19 ತಂಡ ವಿಶ್ವಕಪ್ನಲ್ಲಿ ಅಮೋಘ ಪದಾರ್ಪಣೆ ಮಾಡಿದೆ. ಭಾರತ ಮಹಿಳಾ ತಂಡ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಶೆಫಾಲಿ ವರ್ಮಾ ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರ ಮನ ಗೆದ್ದರು. ಇವರಲ್ಲದೆ ಶ್ವೇತಾ ಸೆಹ್ರಾವತ್ ಕೂಡ 92 ರನ್ಗಳ ಇನಿಂಗ್ಸ್ ಆಡಿದರು.
ಇದನ್ನೂ ಓದಿ: ಟೀಂ ಇಂಡಿಯಾ ಪ್ಲೇಯಿಂಗ್ 11 ನಿಂದ ಈ ಇಬ್ಬರು ಆಟಗಾರು ಔಟ್!
ಶೆಫಾಲಿ ವರ್ಮಾ ಅದ್ಭುತ ಪ್ರದರ್ಶನ:
ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಹಾಗೂ ನಾಯಕಿ ಶೆಫಾಲಿ ವರ್ಮಾ ಇನಿಂಗ್ಸ್ ನ ಆರನೇ ಓವರ್ ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಅವರು ಥಾಬಿಸೆಂಗ್ ನಿನಿ ಅವರ ಓವರ್ನಲ್ಲಿ 26 ರನ್ ಗಳಿಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು ಮೊದಲ ಐದು ಎಸೆತಗಳಲ್ಲಿ ಬೌಂಡರಿ ಬಾರಿಸಿದರೆ, ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ 26 ರನ್ ಗಳಿಸಿದರು. ಶೆಫಾಲಿ ಕೇವಲ 16 ಎಸೆತಗಳಲ್ಲಿ 281.25 ಸ್ಟ್ರೈಕ್ ರೇಟ್ನಲ್ಲಿ 45 ರನ್ ಗಳಿಸಿದರು. ಆದರೆ ಅವರು ಅರ್ಧಶತಕವನ್ನು ತಪ್ಪಿಸಿಕೊಂಡರು. ಅವರಿಂದಲೇ ಭಾರತ ತಂಡ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
4️⃣4️⃣4️⃣4️⃣4️⃣6️⃣ 🔥🔥
Skipper @TheShafaliVerma scores 26 runs in the sixth over as #TeamIndia move to 70/0 after 6 overs.
Solid start in the chase for #TeamIndia 🙌
Follow the match👉https://t.co/sA6ECj9P1O…#TeamIndia | #U19T20WorldCup pic.twitter.com/LAATIxQjPc
— BCCI Women (@BCCIWomen) January 14, 2023
ಶೆಫಾಲಿ ವರ್ಮಾ ಜೊತೆ ಓಪನಿಂಗ್ ಮಾಡಲು ಬಂದ ಶ್ವೇತಾ ಸೆಹ್ರಾವತ್ ಕೂಡ ಅಬ್ಬರದ ಬ್ಯಾಟಿಂಗ್ ಮಾಡಿದರು. 57 ಎಸೆತಗಳಲ್ಲಿ 20 ಬೌಂಡರಿಗಳ ನೆರವಿನಿಂದ 92 ರನ್ ಗಳಿಸಿದರು. ಶೆಫಾಲಿ ಮತ್ತು ಶ್ವೇತಾ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಟೀಂ ಇಂಡಿಯಾ 16.3 ಓವರ್ಗಳಲ್ಲಿ 7 ವಿಕೆಟ್ಗಳಿಂದ ಜಯ ಸಾಧಿಸಿತು.
ಇದನ್ನೂ ಓದಿ: ಸಚಿನ್-ಕೊಹ್ಲಿಗಿಂತಲೂ ಅತಿ ಹೆಚ್ಚು ಸರಾಸರಿ ಹೊಂದಿರುವ ಈ ಆಟಗಾರನಿಗೆ ಸಿಗುತ್ತಿಲ್ಲ ಸ್ಥಾನ!
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಭಾರತ ತಂಡಕ್ಕೆ ಗೆಲುವಿಗೆ 167 ರನ್ ಗಳ ಗುರಿ ನೀಡಿದ್ದು, ಭಾರತ ತಂಡ 3 ವಿಕೆಟ್ ಕಳೆದುಕೊಂಡು ವಿಜಯದ ಹಾದಿ ಹಿಡಿದಿದೆ. ಪಂದ್ಯದಲ್ಲಿ ಭಾರತದ ಆಟಗಾರರು ಅಮೋಘ ಆಟ ಪ್ರದರ್ಶಿಸಿದರು. ಅವರ ಅದ್ಭುತ ಇನ್ನಿಂಗ್ಸ್ಗಾಗಿ ಶ್ವೇತಾ ಸೆಹ್ರಾವತ್ಗೆ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿ ನೀಡಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.