Sanjay Manjrekar : ರವೀಂದ್ರ ಜಡೇಜಾ ಬಗ್ಗೆ ವಿಚಿತ್ರ ಹೇಳಿಕೆ ನೀಡಿದ ಮಂಜ್ರೇಕರ್!

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬಗ್ಗೆ ಸಂಜಯ್ ಮಂಜ್ರೇಕರ್ ಮತ್ತೊಮ್ಮೆ ವಿಚಿತ್ರ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಹಾಗಿದ್ರೆ, ಮಂಜ್ರೇಕರ್ ಅವರು ಜಡೇಜಾ ಬಗ್ಗೆ ಹೇಳಿದ್ದೇನು? ಇಲ್ಲಿದೆ ನೋಡಿ...

Written by - Channabasava A Kashinakunti | Last Updated : Aug 12, 2022, 07:43 PM IST
  • ಜಡೇಜಾ ಬಗ್ಗೆ ಮಂಜ್ರೇಕರ್ ವಿಚಿತ್ರ ಹೇಳಿಕೆ
  • ಜಡೇಜಾ ಸ್ಥಾನದ ಬಗ್ಗೆ ಎದ್ದಿವೆ ಪ್ರಶ್ನೆಗಳು
  • ಯಾವ ಸ್ಥಾನದಲ್ಲಿ ರವೀಂದ್ರ ಜಡೇಜಾ ಆಡಲಿದ್ದಾರೆ?
Sanjay Manjrekar : ರವೀಂದ್ರ ಜಡೇಜಾ ಬಗ್ಗೆ ವಿಚಿತ್ರ ಹೇಳಿಕೆ ನೀಡಿದ ಮಂಜ್ರೇಕರ್! title=

Ravindra Jadeja : ಭಾರತದ ಮಾಜಿ ಬ್ಯಾಟ್ಸ್‌ಮನ್ ಮತ್ತು ಕ್ರಿಕೆಟ್ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಅವರು ಆಗಾಗ್ಗೆ ತಮ್ಮ ಬಹಿರಂಗ ಮತ್ತು ಕಹಿ ಮಾತುಗಳಿಗೆ ಹೆಸರುವಾಸಿಯಾಗಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬಗ್ಗೆ ಸಂಜಯ್ ಮಂಜ್ರೇಕರ್ ಮತ್ತೊಮ್ಮೆ ವಿಚಿತ್ರ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಹಾಗಿದ್ರೆ, ಮಂಜ್ರೇಕರ್ ಅವರು ಜಡೇಜಾ ಬಗ್ಗೆ ಹೇಳಿದ್ದೇನು? ಇಲ್ಲಿದೆ ನೋಡಿ...

ಜಡೇಜಾ ಬಗ್ಗೆ ಮಂಜ್ರೇಕರ್ ವಿಚಿತ್ರ ಹೇಳಿಕೆ

ಸ್ಪೋರ್ಟ್ಸ್ 18 ರ ಸ್ಪೋರ್ಟ್ಸ್ ಓವರ್ ದಿ ಟಾಪ್ ಶೋನಲ್ಲಿ ಮಾತನಾಡಿದ ಸಂಜಯ್ ಮಂಜ್ರೇಕರ್, ಟೀಂ ಇಂಡಿಯಾದಲ್ಲಿ ಸ್ಥಾನವನ್ನು ಉಳಿಸಿಕೊಳ್ಳಲು ರವೀಂದ್ರ ಜಡೇಜಾ ಅವರು ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಅವರಿಗಿಂತ ಉತ್ತಮ ಆಟಗಾರ ಎಂದು ಆಯ್ಕೆದಾರರಿಗೆ ಸಾಬೀತುಪಡಿಸಬೇಕಾಗಿದೆ. 2022 ರ ಟಿ 20 ವಿಶ್ವಕಪ್‌ನಲ್ಲಿ ತಮ್ಮ ಸ್ಥಾನವನ್ನು ಟೀಂ ಇಂಡಿಯಾದಲ್ಲಿ ದೃಢೀಕರಿಸಲಾಗಿಲ್ಲ ಎಂದು ರವೀಂದ್ರ ಜಡೇಜಾ ಅವರಿಗೂ ಗೊತ್ತಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ : Arjun Tendulkar : ಮುಂಬೈ ತಂಡಕ್ಕೆ ಗುಡ್ ಬೈ ಹೇಳಲು ಸಿದ್ಧತೆ ನಡೆಸಿದ ಅರ್ಜುನ್ ತೆಂಡೂಲ್ಕರ್!

ಜಡೇಜಾ ಸ್ಥಾನದ ಬಗ್ಗೆ ಎದ್ದಿವೆ ಪ್ರಶ್ನೆಗಳು 

ಶೋನಲ್ಲಿ ಮಾತನಾಡಿದ ಸಂಜಯ್ ಮಂಜ್ರೇಕರ್, 'ರವೀಂದ್ರ ಜಡೇಜಾ ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಆಲ್‌ರೌಂಡರ್ ಆಗಿ ಆಡಿದ್ದಾರೆ, ಅವರು 6 ಅಥವಾ 7 ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗಿಂತ ಉತ್ತಮವಾಗಿ ಬ್ಯಾಟಿಂಗ್ ಮಾಡ್ತಾರೆ ಎಂದು ಹೇಳಿದ್ದಾರೆ. 

ಯಾವ ಸ್ಥಾನದಲ್ಲಿ ರವೀಂದ್ರ ಜಡೇಜಾ ಆಡಲಿದ್ದಾರೆ?

'ಟೀಮ್ ಇಂಡಿಯಾದಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಆಲ್‌ರೌಂಡರ್ ಆಗಿ ಆಡಿದರೆ, ಅವರು ಅಕ್ಸರ್ ಪಟೇಲ್‌ಗಿಂತ ಉತ್ತಮ ಸ್ಪಿನ್ ಬೌಲರ್ ಎಂದು ಟೀಂ ಮ್ಯಾನೇಜ್‌ಮೆಂಟ್‌ಗೆ ಗೊತ್ತಾಗಬೇಕಾಗಿದೆ ಎಡನು ಹೇಳಿದ್ದಾರೆ.

ಆದ್ರೆ, ಕಳೆದ ಕೆಲವು ಬಾರಿ ರವೀಂದ್ರ ಜಡೇಜಾ ಅವರಿಗಿಂತ ಅಕ್ಸರ್ ಪಟೇಲ್ ಉತ್ತಮ ಪ್ರದರ್ಶನ ನೀಡಿದ್ದಾರೆ . ಸಂಜಯ್ ಮಂಜ್ರೇಕರ್ ಹೇಳುವ ಪ್ರಕಾರ, 'ಈಗ ರವೀಂದ್ರ ಜಡೇಜಾ ಅವರು ಟೀಂ ಇಂಡಿಯಾದಲ್ಲಿ ಬೌಲರ್ ಆಲ್‌ರೌಂಡರ್ ಆಗಿ ಆಡುತ್ತಾರೆಯೇ ಅಥವಾ ಬ್ಯಾಟ್ಸ್‌ಮನ್ ಆಲ್‌ರೌಂಡರ್ ಆಗಿ ಆಡುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ' ಎಂದು ಹೇಳಿದರು.

ಇದನ್ನೂ ಓದಿ : IND vs ZIM : ODI ಮೂರು ಮ್ಯಾಚ್ ಗಳಿಗೆ ಕೆಎಲ್ ರಾಹುಲ್ ಕ್ಯಾಪ್ಟನ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News