ಟೀಂ ಇಂಡಿಯಾಗೆ ‘RRR’ ಬಲ: ಸಖತ್ ವೈರಲ್ ಆಗ್ತಿರೋ ಸಚಿನ್ ತೆಂಡೂಲ್ಕರ್ ಟ್ವೀಟ್ ಹೇಳುತ್ತಿರೋದೇನು?

Sachin Tendulkar’s Tweet: ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಟೀಂ ಇಂಡಿಯಾದ ಪರ ಜಡೇಜಾ ಮತ್ತು ಅಶ್ವಿನ್ ಎಂಟು ವಿಕೆಟ್‌ಗಳನ್ನು ಕಬಳಿಸಿ ಎದುರಾಳಿ ತಂಡವನ್ನು 63.5 ಓವರ್‌ಗಳಲ್ಲಿ 177 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Written by - Bhavishya Shetty | Last Updated : Feb 11, 2023, 01:57 PM IST
    • ನಾಗ್ಪುರದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಬಾರ್ಡರ್-ಗವಾಸ್ಕರ್ ಟ್ರೋಫಿ 2023
    • ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಭಾರತಕ್ಕೆ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ
    • ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು
ಟೀಂ ಇಂಡಿಯಾಗೆ ‘RRR’ ಬಲ: ಸಖತ್ ವೈರಲ್ ಆಗ್ತಿರೋ ಸಚಿನ್ ತೆಂಡೂಲ್ಕರ್ ಟ್ವೀಟ್ ಹೇಳುತ್ತಿರೋದೇನು? title=
Sachin Tendulkar

Sachin Tendulkar’s Tweet: ನಾಗ್ಪುರದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಬಾರ್ಡರ್-ಗವಾಸ್ಕರ್ ಟ್ರೋಫಿ 2023 ಟೆಸ್ಟ್ ಪಂದ್ಯದ ಮೊದಲ ಐದು ಸೆಷನ್‌ಗಳಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಭಾರತಕ್ಕೆ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಟೀಂ ಇಂಡಿಯಾದ ಪರ ಜಡೇಜಾ ಮತ್ತು ಅಶ್ವಿನ್ ಎಂಟು ವಿಕೆಟ್‌ಗಳನ್ನು ಕಬಳಿಸಿ ಎದುರಾಳಿ ತಂಡವನ್ನು 63.5 ಓವರ್‌ಗಳಲ್ಲಿ 177 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ: ಪಿಪಿಎಫ್ ನಿಯಮದಲ್ಲಿ ಬದಲಾವಣೆ ತಂದ ಸರ್ಕಾರ, ಹಣ ಹೂಡುವ ಮುನ್ನ ತಿಳಿದುಕೊಳ್ಳಿ, ಇಲ್ದಿದ್ರೆ ಹಾನಿ ತಪ್ಪಿದ್ದಲ್ಲ!

ಕಳೆದ ವರ್ಷ ಆಗಸ್ಟ್ ನಂತರ ಮೊದಲ ಬಾರಿಗೆ ಅಂತರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಜಡೇಜಾ ಅದ್ಭುತ ಆಟ ಪ್ರದರ್ಶನ ಮಾಡುತ್ತಿದ್ದಾರೆ. ಮತ್ತೊಂದೆಡೆ ಅಶ್ವಿನ್ ಆಸ್ಟ್ರೇಲಿಯನ್ ಇನ್ನಿಂಗ್ಸ್‌ನ ದ್ವಿತೀಯಾರ್ಧದಲ್ಲಿ ಮೂರು ಬ್ಯಾಟರ್‌ಗಳನ್ನು ಔಟ್ ಮಾಡಿದರು. ಸದ್ಯ ಈ ಇಬ್ಬರು ಸರಿಸಮಾನರಾಗಿದ್ದು, ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಸುಮಾರು 11 ತಿಂಗಳ ನಂತರ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ರೋಹಿತ್ ಶರ್ಮಾ, ಈ ಮಾದರಿಯಲ್ಲಿ ಒಂಬತ್ತನೇ ಶತಕವನ್ನು ಬಾರಿಸಿದರು. ಶರ್ಮಾ ಅವರ ಇನ್ನಿಂಗ್ಸ್ ಹೆಚ್ಚು ಮೆಚ್ಚುಗೆಗೆ ಅರ್ಹವಾಗಿರುವುದಕ್ಕೆ ಒಂದು ಪ್ರಾಥಮಿಕ ಕಾರಣವೆಂದರೆ, ಸದ್ಯಕ್ಕೆ ಯಾವುದೇ ಬ್ಯಾಟರ್‌ಗಳು ಅರ್ಧಶತಕ ಗಳಿಸಲು ಸಾಧ್ಯವಾಗದ ಪಿಚ್‌ನಲ್ಲಿ ಈ ಸಾಧನೆ ಮಾಡಿರುವುದು.

 

ನಾಗ್ಪುರ ಟೆಸ್ಟ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದಕ್ಕಾಗಿ ರೋಹಿತ್ ಶರ್ಮಾ, ಆರ್ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.

“ಆರ್ ಆರ್ ಆರ್. ರೋಹಿತ್, ರವೀಂದ್ರ ಮತ್ತು ರವಿಚಂದ್ರನ್ ಮೂವರು ಈ ಟೆಸ್ಟ್‌ನಲ್ಲಿ ಭಾರತವನ್ನು ಮುನ್ನಡೆಸಲು ಸಹಾಯ ಮಾಡಿದ್ದಾರೆ. ರೋಹಿತ್ ಶತಕ ಸಾಧಿಸಿದ ಮುನ್ನಡೆದರೆ, ಅಶ್ವಿನ್ ಮತ್ತು ಜಡೇಜಾ ನಮಗೆ ಸಿಕ್ಕ ಪ್ರಮುಖ ಆವಿಷ್ಕಾರಗಳು” ಎಂದು ಹೊಗಳಿದ್ದಾರೆ.

ಇದನ್ನೂ ಓದಿ: PF ಚಂದಾದಾರರಿಗೊಂದು ಸಂತಸದ ಸುದ್ದಿ, ಸಿಗಲಿದೆ ಈ ಲಾಭ, ಇಲ್ಲಿದೆ ಡೀಟೇಲ್ಸ್!

ಈ ಪಂದ್ಯದಲ್ಲಿ ಜಡೇಜಾ ಅವರ ಕೊಡುಗೆ ಕೇವಲ ಬೌಲರ್ ಆಗಿದ್ದಕ್ಕೆ ಸೀಮಿತವಾಗಿಲ್ಲ ಎಂಬುದು ಗಮನಾರ್ಹ. 2ನೇ ದಿನದಂದು ಶರ್ಮಾ ಜೊತೆಯಾಟದಲ್ಲಿ ಜಡೇಜಾ ಅರ್ಧ ಶತಕ ಸಿಡಿಸಿದರು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News