ಸೋಲಿನ ನಡುವೆಯೂ ದಾಖಲೆ ನಿರ್ಮಿಸಿದ ಆರ್ಸಿಬಿ ಬೌಲರ್ ಮೊಹಮ್ಮದ್ ಸಿರಾಜ್..!

ಐ‌ಪಿ‌ಎಲ್ 2022 ರ ಆವೃತ್ತಿಯಲ್ಲಿ ಫೈನಲ್ ತಲುಪುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜಸ್ಥಾನ ರಾಯಲ್ಸ್ ತಂಡವು ಆಘಾತ ನೀಡಿದೆ. ಆ ಮೂಲಕ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಬೆಂಗಳೂರು ತಂಡದ ಕನಸು ಈಗ ಭಗ್ನವಾಗಿದೆ.

Written by - Zee Kannada News Desk | Last Updated : May 28, 2022, 12:27 AM IST
ಸೋಲಿನ ನಡುವೆಯೂ ದಾಖಲೆ ನಿರ್ಮಿಸಿದ ಆರ್ಸಿಬಿ ಬೌಲರ್ ಮೊಹಮ್ಮದ್ ಸಿರಾಜ್..! title=

ನವದೆಹಲಿ: ಐ‌ಪಿ‌ಎಲ್ 2022 ರ ಆವೃತ್ತಿಯಲ್ಲಿ ಫೈನಲ್ ತಲುಪುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜಸ್ಥಾನ ರಾಯಲ್ಸ್ ತಂಡವು ಆಘಾತ ನೀಡಿದೆ. ಆ ಮೂಲಕ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಬೆಂಗಳೂರು ತಂಡದ ಕನಸು ಈಗ ಭಗ್ನವಾಗಿದೆ.

ಇಂತಹ ಸೋಲಿನ ನಡುವೆಯೂ ಕೂಡ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಮಹಮ್ಮದ್ ಸಿರಾಜ್ ವಿಚಿತ್ರ ಕಾರಣಕ್ಕಾಗಿ ಹೆಸರು ಮಾಡಿದ್ದಾರೆ. ಹೌದು,ಈಗ  ಅವರು ಐ‌ಪಿ‌ಎಲ್ ಇತಿಹಾಸ ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ನೀಡಿದ ಬೌಲರ್ ಎನ್ನುವ ಸಾಧನೆಯನ್ನು ಮಾಡಿದ್ದಾರೆ.ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐ‌ಪಿ‌ಎಲ್ 2022 ಕ್ವಾಲಿಫೈಯರ್ 2 ಚೇಸ್‌ನ ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ಅವರು ಭರ್ಜರಿ ಸಿಕ್ಸರ್ ಹೊಡೆದಾಗ ಸಿರಾಜ್ ಹೊಸ ದಾಖಲೆಯನ್ನು ನಿರ್ಮಿಸಿದರು.

ಇದಕ್ಕೂ ಮೊದಲು 2018 ರ ಋತುವಿನಲ್ಲಿ ಡ್ವೇನ್ ಬ್ರಾವೋ ಅವರು 29 ಸಿಕ್ಸರ್‌ಗಳ ದಾಖಲೆಯನ್ನು ನಿರ್ಮಿಸಿದ್ದರು.ಈಗ ಮಹಮ್ಮದ್ ಸಿರಾಜ್ 30 ಸಿಕ್ಸರ್ ಗಳನ್ನು ನೀಡಿದ ಸಾಧನೆ ಮಾಡಿದ್ದಾರೆ.

ಐಪಿಎಲ್ ಆವೃತ್ತಿಯಲ್ಲಿ ಹೆಚ್ಚಿನ ಸಿಕ್ಸರ್‌ಗಳನ್ನು ನೀಡಿರುವ ಆಟಗಾರರ ಪಟ್ಟಿ

30 ಮೊಹಮ್ಮದ್ ಸಿರಾಜ್ (2022)
29 ಡ್ವೇನ್ ಬ್ರಾವೋ (2018)
28 ಯುಜುವೇಂದ್ರ ಚಹಾಲ್ (2015)
28 ವನಿಂದು ಹಸರಂಗ (2022)
27 ಯುಜ್ವೇಂದ್ರ ಚಹಾಲ್ (2022)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News