IND vs AUS : ಟೀಂಗೆ ಎಂಟ್ರಿಯಾಗುತ್ತಿದಂತೆ ಈ ಆಟಗಾರನನ್ನು ಕೈಬಿಟ್ಟ ಕ್ಯಾಪ್ಟನ್ ರೋಹಿತ್!

IND vs AUS : ರೋಹಿತ್ ಶರ್ಮಾ ಮೊದಲ ಏಕದಿನ ಪಂದ್ಯದಲ್ಲಿ ಫ್ಲಾಪ್ ಆಟಗಾರನನ್ನು ಪ್ಲೇಯಿಂಗ್ 11 ನಿಂದ ಕೈಬಿಟ್ಟಿದ್ದಾರೆ. ಹಾಗಿದ್ರೆ, ಈ ಆಟಗಾರ ಯಾರು? ಈ ಕೆಳಗಿದೆ ನೋಡಿ..

Written by - Channabasava A Kashinakunti | Last Updated : Mar 19, 2023, 02:00 PM IST
  • ನಾಯಕ ರೋಹಿತ್ ಬಂದ ಕೂಡಲೇ ಮಹತ್ವದ ನಿರ್ಧಾರ
  • ಮೊದಲ ಏಕದಿನ ಪಂದ್ಯದಲ್ಲಿ ವಿಫಲ
  • ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ
  • ಮೊದಲ ಏಕದಿನ ಪಂದ್ಯದಲ್ಲಿ ವಿಫಲ
IND vs AUS : ಟೀಂಗೆ ಎಂಟ್ರಿಯಾಗುತ್ತಿದಂತೆ ಈ ಆಟಗಾರನನ್ನು ಕೈಬಿಟ್ಟ ಕ್ಯಾಪ್ಟನ್ ರೋಹಿತ್! title=

IND vs AUS 2nd ODI Match : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ODI ಸರಣಿಯ ಎರಡನೇ ಪಂದ್ಯ (IND vs AUS) ವಿಶಾಖಪಟ್ಟಣಂನ ಡಾ. ವೈ.ಎಸ್.ರಾಜಶೇಖರ್ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ತಂಡಕ್ಕೆ ಬಂದ ತಕ್ಷಣ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಮೊದಲ ಏಕದಿನ ಪಂದ್ಯದಲ್ಲಿ ಫ್ಲಾಪ್ ಆಟಗಾರನನ್ನು ಪ್ಲೇಯಿಂಗ್ 11 ನಿಂದ ಕೈಬಿಟ್ಟಿದ್ದಾರೆ. ಹಾಗಿದ್ರೆ, ಈ ಆಟಗಾರ ಯಾರು? ಈ ಕೆಳಗಿದೆ ನೋಡಿ..

ನಾಯಕ ರೋಹಿತ್ ಬಂದ ಕೂಡಲೇ ಮಹತ್ವದ ನಿರ್ಧಾರ

ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದ ಪ್ಲೇಯಿಂಗ್ 11 ರಲ್ಲಿ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಆಡುವ ಅವಕಾಶ ಪಡೆದರು. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಇಶಾನ್ ಕಿಶನ್ ವಿಫಲರಾಗಿ ಅಗ್ಗವಾಗಿ ಪೆವಿಲಿಯನ್ ಗೆ ಮರಳಿದರು. ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ವಾಪಸಾದ ತಕ್ಷಣ ಇಶಾನ್ ಕಿಶನ್ ಪ್ಲೇಯಿಂಗ್ 11ರಿಂದ ಹೊರಗುಳಿಯುವ ಹಾದಿಯನ್ನು ತೋರಿಸಲಾಗಿದೆ.

ಇದನ್ನೂ ಓದಿ : WPL 2023, RCB Vs GG: ಸೋಫಿ ಡಿವೈನ್ ಅಬ್ಬರ! ಆರ್​ಸಿಬಿಗೆ ಮತ್ತೊಂದು ಭರ್ಜರಿ ಜಯ

ಮೊದಲ ಏಕದಿನ ಪಂದ್ಯದಲ್ಲಿ ವಿಫಲ

ಇಶಾನ್ ಕಿಶನ್ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 8 ಎಸೆತಗಳನ್ನು ಎದುರಿಸಿ 3 ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಅದೇ ಸಮಯದಲ್ಲಿ, ಎರಡನೇ ಏಕದಿನದಲ್ಲಿ, ರೋಹಿತ್ ಶರ್ಮಾ ಅವರೊಂದಿಗೆ ಶುಭಮನ್ ಗಿಲ್ ಇನ್ನಿಂಗ್ಸ್ ಓಪನಿಂಗ್ ಆಡಲಿದ್ದಾರೆ.  ಮೊದಲ ಏಕದಿನ ಪಂದ್ಯದಿಂದ ನಾಯಕ ರೋಹಿತ್ ಶರ್ಮಾ ತಮ್ಮ ಸೋದರ ಮಾವನ ಮದುವೆಯಲ್ಲಿ ಪಾಲ್ಗೊಳ್ಳಲು ದೂರ ಉಳಿದಿದ್ದರು.

ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ

ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರು ಅದ್ಭುತ ಬೌಲಿಂಗ್‌ನಲ್ಲಿ ತಲಾ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆಸ್ಟ್ರೇಲಿಯಾವನ್ನು ಮೊದಲ ಏಕದಿನ ಪಂದ್ಯದಲ್ಲಿ 35.4 ಓವರ್‌ಗಳಲ್ಲಿ 188 ರನ್‌ಗಳಿಗೆ ಆಲೌಟ್ ಮಾಡಿದರು. ಭಾರತವು ಆಸ್ಟ್ರೇಲಿಯಾವನ್ನು 35.4 ಓವರ್‌ಗಳಲ್ಲಿ 188 ರನ್‌ಗಳಿಗೆ ಆಲೌಟ್ ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತದ ಆರಂಭವೂ ಅತ್ಯಂತ ಕಳಪೆಯಾಗಿತ್ತು. ಇದಾದ ಬಳಿಕ ರಾಹುಲ್ (ಔಟಾಗದೆ 75) ಮತ್ತು ರವೀಂದ್ರ ಜಡೇಜಾ (ಔಟಾಗದೆ 45) ಆರನೇ ವಿಕೆಟ್‌ಗೆ ಮುರಿಯದ 108 ರನ್‌ಗಳ ಜೊತೆಯಾಟವನ್ನು ನಡೆಸಿ ತಂಡವನ್ನು 39.5 ಓವರ್‌ಗಳಲ್ಲಿ 5 ವಿಕೆಟ್‌ಗೆ 191 ರನ್ ಗಳಿಸಿದರು.

ಎರಡನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.

ಎರಡನೇ ಏಕದಿನ ಪಂದ್ಯಕ್ಕೆ ಆಸ್ಟ್ರೇಲಿಯಾ ಪ್ಲೇಯಿಂಗ್ 11

ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.

ಇದನ್ನೂ ಓದಿ : IND vs AUS : ಎರಡನೇ ODI ಗೆ ರೋಹಿತ್ ಎಂಟ್ರಿ : Playing 11 ನಿಂದ ಯಾರು ಔಟ್?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News