/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Rohit Sharma: ಭಾರತ ಕ್ರಿಕೆಟ್ ತಂಡ ಇದೇ ತಿಂಗಳ 26 ರಿಂದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿದೆ. ವಾಸ್ತವವಾಗಿ ಟೀಂ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಗಾಯಗೊಂಡಿರುವ ರೋಹಿತ್ ಏಕದಿನ ಸರಣಿಯಿಂದಲೂ ಹೊರಗುಳಿಯುವ ಅಪಾಯವೂ ಇದೆ. ಹೀಗಿರುವಾಗ ರೋಹಿತ್ ಬದಲಿಗೆ ಯಾವ ಆಟಗಾರ ತಂಡವನ್ನು ಮುನ್ನಡೆಸುತ್ತಾರೆ ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ. 

ಈ ಆಟಗಾರ ನಾಯಕನಾಗಬಹುದು:
ರೋಹಿತ್ ಶರ್ಮಾ (Rohit Sharma) ಏಕದಿನ ಸರಣಿಯಿಂದ ಹೊರಗುಳಿದರೆ, ಮೂರು ಪಂದ್ಯಗಳಿಗೆ ಬಿಸಿಸಿಐ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ. ಆದರೆ, ಈ ಹುದ್ದೆಯನ್ನು ನಿಭಾಯಿಸುವ ದೊಡ್ಡ ಸ್ಪರ್ಧಿ ಎಂದರೆ ಕನ್ನಡಿಗ ಕೆಎಲ್ ರಾಹುಲ್. ರೋಹಿತ್-ವಿರಾಟ್ ನಂತರ ತಂಡದ ಹಿರಿಯ ಆಟಗಾರರಲ್ಲಿ ಕೆಎಲ್ ರಾಹುಲ್ (KL Rahul) ಒಬ್ಬರು. ಈ ಹಿಂದೆಯೂ ಹಲವು ಬಾರಿ ರಾಹುಲ್ ನಾಯಕತ್ವ ವಹಿಸಿದ್ದರು. ಇದಲ್ಲದೆ, ಅವರು ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ನಾಯಕತ್ವವನ್ನೂ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಬದಲಿಗೆ ರಾಹುಲ್ ನಾಯಕತ್ವದ ಜವಾಬ್ದಾರಿಯನ್ನೂ ನಿಭಾಯಿಸಬಲ್ಲರು ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ICC T20I Rankings: Virat Kohli drops to eighth spot, KL Rahul jumps to  fifth | Cricket News | Zee News

ಇದನ್ನೂ ಓದಿ-  ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಸಾಧನೆ: ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆದ ದೆಹಲಿಯ ಯುವಕ..!

ರೋಹಿತ್ ಗಾಯಗೊಂಡರು:
ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ಸರಣಿಗಾಗಿ (South Africa Series) ಮುಂಬೈನಲ್ಲಿ ಅನೇಕ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದರು. ಅಷ್ಟರಲ್ಲಿ ನೆಟ್ಸ್ ನಲ್ಲಿ ಚೆಂಡು ರೋಹಿತ್ ಬೆರಳಿಗೆ ಬಡಿಯಿತು. ವರದಿಯ ಪ್ರಕಾರ, ಥ್ರೋ-ಡೌನ್ ಸಮಯದಲ್ಲಿ, ಚೆಂಡು ನೇರವಾಗಿ ರೋಹಿತ್ ಶರ್ಮಾ ಅವರ ಕೈಗವಸುಗಳಿಗೆ ಹೋಯಿತು, ನಂತರ ಅವರು ನೋವಿನಿಂದ ನರಳುತ್ತಿರುವುದು ಕಂಡುಬಂದಿತು. ಬಳಿಕ ಕೈಗೆ ಗಾಯ ಆಗಿರುವುದರಿಂದ ಈ ಸ್ಟಾರ್ ಆಟಗಾರ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎಂದು  ಇತ್ತೀಚೆಗೆ ಘೋಷಿಸಲಾಯಿತು.

ರೋಹಿತ್ ಬದಲಿಗೆ ಪ್ರಿಯಾಂಕ್ ಪಾಂಚಾಲ್ ಈ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಪ್ಲೇಯಿಂಗ್ 11ರಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ರೋಹಿತ್ ನಂತರ ಮಯಾಂಕ್ ಅಗರ್ವಾಲ್ ಕೆಎಲ್ ರಾಹುಲ್ (KL Rahul) ಜೊತೆ ಬ್ಯಾಟಿಂಗ್ ಮಾಡಬಹುದು ಅಥವಾ ಈ ಅವಕಾಶವನ್ನು ಶುಭಮನ್ ಗಿಲ್ ಗೆ ನೀಡಬಹುದು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಮಯಾಂಕ್ ಅದ್ಭುತ ಫಾರ್ಮ್‌ನಲ್ಲಿದ್ದರು.  

ಇದನ್ನೂ ಓದಿ-  Ravindra Jadeja: ಶೀಘ್ರವೇ ಈ ಮಾದರಿಯ ಕ್ರಿಕೆಟ್ ನಿಂದ ರವೀಂದ್ರ ಜಡೇಜಾ ನಿವೃತ್ತಿ..?

ಇತ್ತೀಚೆಗಷ್ಟೇ ಏಕದಿನ ಪಂದ್ಯದ ನಾಯಕರಾಗಿ ಆಯ್ಕೆಯಾಗಿದ್ದ ರೋಹಿತ್:
ಇತ್ತೀಚೆಗೆ, ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಅವರನ್ನು ಭಾರತೀಯ ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ರೋಹಿತ್ ಈಗಾಗಲೇ ಟಿ20 ತಂಡದ ನಾಯಕರಾಗಿದ್ದರು. ಇದರೊಂದಿಗೆ ಎರಡು ವಿಭಿನ್ನ ಸ್ವರೂಪಗಳಲ್ಲಿ ಉಳಿದ ತಂಡಗಳಂತೆ ಭಾರತ ಕೂಡ ಇಬ್ಬರು ನಾಯಕರನ್ನು ಹೊಂದಲಿದೆ. ಇದಲ್ಲದೇ ದಕ್ಷಿಣ ಆಫ್ರಿಕಾ ಸರಣಿಯೊಂದಿಗೆ ಭಾರತದ ಟೆಸ್ಟ್ ತಂಡದ ಉಪನಾಯಕನಾಗಿಯೂ ರೋಹಿತ್ ಸ್ಥಾನ ಪಡೆದಿದ್ದರು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Rohit Sharma may also be out of ODI series; this player will take over the command of Team India!
News Source: 
Home Title: 

ರೋಹಿತ್ ಶರ್ಮಾ ಬದಲಿಗೆ ಕನ್ನಡಿಗನ ಹೆಗಲಿಗೆ ಟೀಂ ಇಂಡಿಯಾ ನಾಯಕತ್ವ ಸಾಧ್ಯತೆ!

Rohit Sharma: ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆಯೇ ಹಿಟ್ ಮ್ಯಾನ್? ಈ ಆಟಗಾರನಿಗೆ ಟೀಂ ಇಂಡಿಯಾದ ನಾಯಕತ್ವ!
Caption: 
Rohit Sharma may also be out of ODI series; KL Rahul can get captaincy
Yes
Is Blog?: 
No
Tags: 
Facebook Instant Article: 
Yes
Highlights: 

ದಕ್ಷಿಣ ಆಫ್ರಿಕಾ ಸರಣಿ ಇದೇ ತಿಂಗಳು ಆರಂಭವಾಗಲಿದೆ

ಈ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ದೊಡ್ಡ ಹಿನ್ನಡೆ

ಈ ಆಟಗಾರ ನಾಯಕನಾಗಬಹುದು

Mobile Title: 
ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆಯೇ ಹಿಟ್ ಮ್ಯಾನ್? ಈ ಆಟಗಾರನಿಗೆ ಟೀಂ ಇಂಡಿಯಾದ ನಾಯಕತ್ವ!
Yashaswini V
Publish Later: 
No
Publish At: 
Wednesday, December 15, 2021 - 07:04
Created By: 
Yashaswini V
Updated By: 
Yashaswini V
Published By: 
Yashaswini V
Request Count: 
1
Is Breaking News: 
No