India vs England : ರೋಹಿತ್ ಬದಲು ಟೀಂ ಇಂಡಿಯಾದ ಈ ಅಪಾಯಕಾರಿ ಆಟಗಾರ ಓಪನರ್!

ರೋಹಿತ್ ಶರ್ಮಾ ಬದಲಿಗೆ ಜಸ್ಪ್ರೀತ್ ಬುಮ್ರಾನನ್ನ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿದೆ.

Written by - Channabasava A Kashinakunti | Last Updated : Jun 30, 2022, 03:53 PM IST
  • ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ
  • ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್
  • ಈ ಆಟಗಾರ ಕೂಡ ಇನ್ನಿಂಗ್ಸ್ ಆರಂಭಿಸಬಹುದು
India vs England : ರೋಹಿತ್ ಬದಲು ಟೀಂ ಇಂಡಿಯಾದ ಈ ಅಪಾಯಕಾರಿ ಆಟಗಾರ ಓಪನರ್! title=

India vs England : ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಈ ಮ್ಯಾಚ್ ನಲ್ಲಿ ಆಡುವುದು ಅನುಮಾನವಿದೆ. ರೋಹಿತ್ ಶರ್ಮಾ ಫಿಟ್ ಆಗದಿದ್ದರೆ ಅವರ ಸ್ಥಾನದಲ್ಲಿ ಯಾರು ಓಪನರ್ ಬರಲಿದ್ದಾರೆ? ಎಂಬ ಪ್ರಶ್ನೆಗೆ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಒಂದಲ್ಲ ಮೂರು ಹೆಸರುಗಳನ್ನು ಸೂಚಿಸಿದ್ದಾರೆ. ರೋಹಿತ್ ಶರ್ಮಾ ಬದಲಿಗೆ ಜಸ್ಪ್ರೀತ್ ಬುಮ್ರಾನನ್ನ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿದೆ.

ದ್ರಾವಿಡ್ ಸೂಚಿಸಿದ್ದಾರೆ ಈ ಹೆಸರು 

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, ಎಲ್ಲ ಕಾರಣಗಳನ್ನು ನೋಡಿಕೊಂಡು ನಿರ್ಧರಿಸುತ್ತೇವೆ. ನಿಸ್ಸಂಶಯವಾಗಿ ಹೇಳುವುದಾದರೆ ಮಯಾಂಕ್ ಒಬ್ಬ ಸಾಮಾನ್ಯ ಆರಂಭಿಕ ಬ್ಯಾಟ್ಸ್‌ಮನ್. ನಮಗೆ ಇತರ ಆಯ್ಕೆಗಳೂ ಇವೆ. ಕೆಎಸ್ ಭರತ್ ಆಂಧ್ರಕ್ಕೆ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಹಲವು ಪಂದ್ಯಗಳನ್ನು ವಿನ್ ಮಾಡಿದ್ದಾರೆ. ಬ್ಯಾಟಿಂಗ್ ಆರಂಭಿಸಿದ ನಂತರ ಭರತ್ 70 ಮತ್ತು 40 (43) ರನ್ ಗಳಿಸಿದರು. ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ಅವರನ್ನು ಆ ಇನ್ನಿಂಗ್ಸ್‌ನಲ್ಲಿ ಓಪನರ್ ಆಗಿ ಕಳುಹಿಸಿದ್ದೇವೆ.

ಇದನ್ನೂ ಓದಿ : IND vs ENG : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮ್ಯಾಚ್ ಗೆಲ್ಲುವುದು 'ಬುಮ್ರಾ ಸೇನೆ'ಗೆ ಅನಿವಾರ್ಯ!

ಈ ಆಟಗಾರ ಕೂಡ ಇನ್ನಿಂಗ್ಸ್ ಆರಂಭಿಸಬಹುದು

ಮುಂದುವರಿದು ಮಾತನಾಡಿದ ರಾಹುಲ್ ದ್ರಾವಿಡ್, ಚೇತೇಶ್ವರ ಪೂಜಾರಗೆ ಅಪಾರ ಪ್ರತಿಭೆ ಇದೆ. ನಾವು ಯಾವ ದಿಕ್ಕಿನಲ್ಲಿ ಹೋಗುತ್ತೇವೆ ಎಂಬುದು ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿದೆ. ರೋಹಿತ್ ಫಿಟ್ ಆಗಿದ್ದಾನೋ ಇಲ್ಲವೋ ನೋಡೋಣ, ನಾನು ಪ್ಲೇಯಿಂಗ್ XI ಅನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ನಾವು ಈ ಬಗ್ಗೆ ಸಂಪೂರ್ಣವಾಗಿ ಸ್ಪಷ್ಟವಾಗಿದ್ದೇವೆ.

ಒಬ್ಬ ಓಪನರ್ ಈಗಾಗಲೇ ರೆಡಿಯಾಗಿದ್ದಾನೆ

ಟೀಂ ಇಂಡಿಯಾದಲ್ಲಿ ಈಗಾಗಲೇ ಶುಭಮನ್ ಗಿಲ್ ನಂತಹ ಬಲಿಷ್ಠ ಓಪನರ್ ಬ್ಯಾಟ್ಸಮನ್ ನನ್ನ ಹೊಂದಿದೆ. ಗಿಲ್ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದುಕೊಟ್ಟಿದ್ದಾರೆ. ಯಾವುದೇ ಆಟಗಾರನ ಬೌಲಿಂಗ್ ಎದುರಿಸುವ ಸಾಮರ್ಥ್ಯ ಅವರಲ್ಲಿದೆ. ಗಿಲ್ ಆಸ್ಟ್ರೇಲಿಯಾ ವಿರುದ್ದದ ಮ್ಯಾಚ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಭಾರತಕ್ಕಾಗಿ ಮ್ಯಾಚ್ ಗೆದ್ದುಕೊಟ್ಟಿದ್ದಾರೆ.

ಇದನ್ನೂ ಓದಿ : Rohit Sharma out of 5th test : ಕೊನೆಯ ಟೆಸ್ಟ್‌ನಿಂದ ರೋಹಿತ್ ಔಟ್, ಈ ಆಟಗಾರನಿಗೆ ಹೊಸ ಕ್ಯಾಪ್ಟನ್ ಪಟ್ಟ!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News