RCB vs PBKS: ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಹೋಳಿ ದಿನ ಬೆಂಗಳೂರು ಗೆಲ್ಲೋದು ಪಕ್ಕಾ.. ಕಾರಣ ಏನ್ ಗೊತ್ತಾ?

RCB Will Win Today match: ಇಂದು ಹೋಳಿ ಹಬ್ಬ RCB ಗೆಲ್ಲೋದು ಫಿಕ್ಸ್.. ಬೆಂಗಳೂರು ತಂಡದ ಅಭಿಮಾನಿಗಳಿಗೆ ಈ ದಿನ ರಂಗು ರಂಗಾಗಲಿದೆ ಎನ್ನಲಾಗುತ್ತಿದೆ..  

Written by - Savita M B | Last Updated : Mar 25, 2024, 12:42 PM IST
  • ಆರ್‌ಸಿಬಿ ಅಭಿಮಾನಿಗಳು ಮೊದಲ ಪಂದ್ಯದಿಂದ ನಿರಾಸೆಗೊಂಡಿದ್ದರು
  • ಮುಂದಿನ ಆಟಗಳಲ್ಲಿ ಗೆಲ್ಲುವ ಭರವಸೆ ನಮ್ಮ ಬೆಂಗಳೂರು ತಂಡಕ್ಕಿದೆ
  • ಈ ಪಂದ್ಯದಲ್ಲಿ RCB ತಂಡದ ಗೆಲುವು ಖಚಿತ ಎನ್ನಲಾಗುತ್ತಿದೆ.
RCB vs PBKS: ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಹೋಳಿ ದಿನ ಬೆಂಗಳೂರು ಗೆಲ್ಲೋದು ಪಕ್ಕಾ.. ಕಾರಣ ಏನ್ ಗೊತ್ತಾ? title=

RCB vs PBKS: ಆರ್‌ಸಿಬಿ ಅಭಿಮಾನಿಗಳು ಮೊದಲ ಪಂದ್ಯದಿಂದ ನಿರಾಸೆಗೊಂಡಿದ್ದರು.. ಆದರೂ ಮುಂದಿನ ಆಟಗಳಲ್ಲಿ ಗೆಲ್ಲುವ ಭರವಸೆ ನಮ್ಮ ಬೆಂಗಳೂರು ತಂಡಕ್ಕಿದೆ.. ಐಪಿಎಲ್‌ 2024ರ ಆರ್‌ಸಿಬಿ ತಂಡ ತನ್ನ ಎರಡನೇ ಪಂದ್ಯದಲ್ಲಿ PBKS ವಿರುದ್ಧ ಸೆಣಸಾಡಲಿದೆ.. ಈ ಪಂದ್ಯದಲ್ಲಿ RCB ತಂಡದ ಗೆಲುವು ಖಚಿತ ಎನ್ನಲಾಗುತ್ತಿದೆ.. 

ಹೌದು ಇಂದು ಹೋಳಿ ಹಬ್ಬವಾಗಿದ್ದರಿಂದ ಈ ಹಿಂದಿನ 5 ಪಂದ್ಯಗಳನ್ನು ನೆನಪಿಸಿಕೊಂಡಾಗ ಈ ದಿನದಂದು ಆಡಿದ ಎಲ್ಲಾ ಮ್ಯಾಚ್‌ನಲ್ಲಿಯೂ ಆರ್‌ಸಿಬಿ ತಂಡ ಗೆದ್ದು ಬೀಗಿದೆ.. ಅದೇ ಭರವಸೆಯೊಂದಿಗೆ ಇದಂಉ ನಡೆಯುವ RCB vs PBKS ರೋಚಕ ಪಂದ್ಯದಲ್ಲಿ ಬೆಂಗಳೂರು ತಂಡ ಮುನ್ನಡೆ ಸಾಧಿಸಲಿದೆ ಎಂದು ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.. 

ಇದನ್ನೂ ಓದಿ-KKR Vs SRH : 208ರನ್ ಗಳ ಭರ್ಜರಿ ಮೊತ್ತದೊಂದಿಗೆ, ಭರ್ಜರಿ 4 ರನ್ ಅಂತರದಿಂದ ಗೆಲುವು ಸಾಧಿಸಿದ ಕೆಕೆಆರ್

ಹೋಳಿಯಲ್ಲಿ RCB ಗೆಲುವು ಖಚಿತ!
IPL 2024 ರಲ್ಲಿ RCB ಮತ್ತು PBKS ಎರಡರಲ್ಲೂ ಇದು ಎರಡನೇ ಪಂದ್ಯವಾಗಿದೆ. ಇದಕ್ಕೂ ಮೊದಲು, ಪಂಜಾಬ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ತವರು ಮೈದಾನದಲ್ಲಿ ಅಂದರೆ ಮುಲ್ಲನ್‌ಪುರದಲ್ಲಿ ಆಡಿ ಗೆದ್ದಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು CSK ನ ತವರು ಮೈದಾನ ಚೆಪಾಕ್‌ನಲ್ಲಿ ಆಡಿ ಸೋಲನ್ನು ಎದುರಿಸಬೇಕಾಯಿತು.

ಕಳೆದ ಪಂದ್ಯವನ್ನು ಗೆದ್ದು ಬೆಂಗಳೂರು ತಲುಪಿರುವ ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್  ಮತ್ತೆ ಗೆಲ್ಲುವ ಉತ್ಸಾಹದಲ್ಲಿದೆ.. ಆದರೆ ಪಂದ್ಯವು RCB ಯ ಟೆರಿಟರಿಯಲ್ಲಿರುವುದರಿಂದ ಚಿಂತಿಸಬೇಕಾಗಿಲ್ಲ. ಈ ಸೀಸನ್‌ನಲ್ಲಿ ಇದುವರೆಗಿನ ಆತಿಥೇಯ ತಂಡಗಳ ಪ್ರದರ್ಶನವನ್ನು ಪರಿಗಣಿಸಿದರೆ ಬೆಂಗಳೂರು ತಂಡವೇ ಗೆಲ್ಲುವ ನಿರೀಕ್ಷೆಗಳಿವೆ.. 

ಇದನ್ನೂ ಓದಿ-208 ಬೃಹತ್ ಮೊತ್ತದ ರನ್ ಸಾಧಿಸಿದ ಕೆಕೆಆರ್ : ಗೆಲುವಿನ ಗುರಿಯನ್ನು ತಲುಪುವ ಭರದಲ್ಲಿ ಹೈದರಬಾದ್

IPL ಪಿಚ್‌ನಲ್ಲಿ RCB vs PBKS
ಐಪಿಎಲ್ ಪಿಚ್‌ನಲ್ಲಿ ಇದುವರೆಗಿನ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೆ, ಎರಡೂ ತಂಡಗಳು ಒಟ್ಟು 31 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಪಂಜಾಬ್ ಕಿಂಗ್ಸ್ 17 ಬಾರಿ ಗೆದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ತವರು ಮೈದಾನವಾಗಿರುವ ಕಾರಣ ಅಂಕಿಅಂಶದಲ್ಲಿ ಆರ್‌ಸಿಬಿಗೆ ಕೊಂಚ ಅನುಕೂಲವಾಗಿದೆ. ಚಿನ್ನಸ್ವಾಮಿಯಲ್ಲಿ ಇದುವರೆಗೆ ನಡೆದ 11 ಕೂಟಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಬಾರಿ ಗೆಲುವು ಸಾಧಿಸಿದೆ. ಆದರೆ ಪಂಜಾಬ್ ಕಿಂಗ್ಸ್ 5 ಪಂದ್ಯಗಳಲ್ಲಿ ಯಶಸ್ಸು ಕಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News