ನವದೆಹಲಿ: ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ತಂದೆ ಅನಿರುಧ್ಸಿನ್ಹ ಜಡೇಜಾ ಅವರು ತಮ್ಮ ಸೊಸೆ ರಿವಾಬಾ ಜಡೇಜಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನನ್ನ ಮಗನ ಮೇಲೆ ಸೊಸೆ ಏನು ಮಾಟ ಮಾಡಿದ್ದಾಳೆ ಎಂಬುದು ಗೊತ್ತಿಲ್ಲ ಅಂತಾ ಕಿಡಿಕಾರಿದ್ದರು. ತಮ್ಮ ಕುಟುಂಬದಲ್ಲಿನ ಬಿರುಕಿಗೆ ಸೊಸೆ ರಿವಾಬಾನೇ ಕಾರಣವೆಂದು ಆರೋಪಿಸಿದ್ದರು. ಆದರೆ ತಂದೆಯ ಈ ಆರೋಪವನ್ನು ಸ್ವತಃ ರವೀಂದ್ರ ಜಡೇಜಾ ಅವರೇ ತಳ್ಳಿಹಾಕಿದ್ದರು.
ಈ ವಿವಾದದ ಕೆಲವು ದಿನಗಳ ನಂತರ ರವೀಂದ್ರ ಜಡೇಜಾ ರಾಜ್ಕೋಟ್ನಲ್ಲಿ ತನಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನ ಪತ್ನಿ ರಿವಾಬಾಗೆ ಅರ್ಪಿಸಿದ್ದಾರೆ. ತನಗೆ ಮಾನಸಿಕ ಬೆಂಬಲ ನೀಡಿದ ಅವರು ಉತ್ತಮ ಪ್ರದರ್ಶನ ನೀಡಲು ನನಗೆ ಪ್ರೇರೇಪಿಸಿದ್ದಾಳೆ ಎಂದು ಹೇಳಿದ್ದಾರೆ.
Team India smashes an exhilarating triumph in the 3rd test against England, clinching a monumental victory by an unprecedented 434-run margin! Led by @ImRo45, fueled by @ybj_19, @ShubmanGill, debutant Sarfaraz, alongside the stellar performance from @imjadeja and… pic.twitter.com/QJlCktT7hw
— Jay Shah (@JayShah) February 18, 2024
ಇದನ್ನೂ ಓದಿ: IND vs ENG: ರಾಜ್ಕೋಟ್ ಟೆಸ್ಟ್ನಲ್ಲಿ ದಾಖಲಾದ ಟಾಪ್-10 ವಿಶ್ವ ದಾಖಲೆಗಳಿವು!
ರಾಜ್ಕೋಟ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ 434 ರನ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವಿನಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾರ ಕೊಡುಗೆ ಪ್ರಮುಖವಾಗಿತ್ತು. ಆರ್.ಅಶ್ವಿನ್ ಬಳಿಕ ಟೆಸ್ಟ್ ಪಂದ್ಯವೊಂದರಲ್ಲಿ ಶತಕ ಬಾರಿಸಿ 5 ವಿಕೆಟ್ ಪಡೆದ ಭಾರತದ ೨ನೇ ಆಟಗಾರನೆಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾದರು.
Smiles all around here in Rajkot 😃👌#TeamIndia win the 3rd Test by 434 runs and take a 2⃣-1⃣ lead in the Test series 👏👏
Scorecard ▶️ https://t.co/FM0hVG5X8M#INDvENG | @IDFCFIRSTBank pic.twitter.com/C5QeI757QN
— BCCI (@BCCI) February 18, 2024
ಜಡೇಜಾ ತವರಿನ ಪ್ರೇಕ್ಷಕರ ಮುಂದೆ ಆಡಿದ ತಮ್ಮ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಮತ್ತು 2ನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಯುವ ಆಟಗಾರ ಯಶಸ್ವಿ ಜೈಸ್ವಾಲ್ ದ್ವಿಶತಕ ಬಾರಿಸಿದರೆ, ರೋಹಿತ್ ಶರ್ಮಾ ನಾಯಕನ ಆಟವಾಡಿದರು. ಆದರೆ ಪಂದ್ಯದ ತೀರ್ಪುಗಾರರು ಜಡೇಜಾರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತಂಡಕ್ಕೆ ಆಲ್ರೌಂಡರ್ ಕೊಡುಗೆ ನೀಡಿದ ಹಿನ್ನೆಲೆ ಜಡೇಜಾ ಈ ಗೌರವಕ್ಕೆ ಪಾತ್ರರಾದರು.
ಇದನ್ನೂ ಓದಿ: Rohit Sharma: ಸರ್ಫರಾಜ್-ಗಿಲ್ ಇವರ್ಯಾರೂ ಅಲ್ಲ.. ಈ ಇಬ್ಬರೂ ಆಟಗಾರರೇ ಟೀಂ ಇಂಡಿಯಾದ ಹೀರೋಗಳು ಎಂದ ರೋಹಿತ್ ಶರ್ಮಾ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.