IPL 2024: ಆರಂಭಿಕ ಪಂದ್ಯದಲ್ಲಿ CSK ಗೆಲ್ಲುತ್ತಿದ್ದಂತೆ ವಿಶ್ವದಾಖಲೆ ಬರೆದ ಜಡೇಜಾ: ಧೋನಿಯ ಶ್ರೇಷ್ಠ ದಾಖಲೆ ಸರಿಗಟ್ಟಿದ ಶಿಷ್ಯ!

Ravindra Jadeja IPL Record: ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸುತ್ತಿದ್ದಂತೆ, ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಐಪಿಎಲ್‌’ನಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಅಲ್ಲದೆ, ಮಹೇಂದ್ರ ಸಿಂಗ್ ಧೋನಿ ಅವರ ಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ್ದಾರೆ.

Written by - Bhavishya Shetty | Last Updated : Mar 23, 2024, 03:09 PM IST
    • ಚೆನ್ನೈ ಸೂಪರ್ ಕಿಂಗ್ಸ್ ತಂಡವು IPL 2024ರಲ್ಲಿ ಉತ್ತಮ ಆರಂಭವನ್ನು ಮಾಡಿದೆ
    • ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಐಪಿಎಲ್‌’ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ
    • ಐಪಿಎಲ್‌’ನಲ್ಲಿ ಗರಿಷ್ಠ ಬಾರಿ ಅಜೇಯರಾಗಿ ಮರಳಿದ ಬ್ಯಾಟರ್ ಎನಿಸಿಕೊಂಡಿದ್ದಾರೆ
IPL 2024: ಆರಂಭಿಕ ಪಂದ್ಯದಲ್ಲಿ CSK ಗೆಲ್ಲುತ್ತಿದ್ದಂತೆ ವಿಶ್ವದಾಖಲೆ ಬರೆದ ಜಡೇಜಾ: ಧೋನಿಯ ಶ್ರೇಷ್ಠ ದಾಖಲೆ ಸರಿಗಟ್ಟಿದ ಶಿಷ್ಯ! title=
Ravindra Jadeja

IPL 2024, CSK vs RCB: ಚೆನ್ನೈ ಸೂಪರ್ ಕಿಂಗ್ಸ್ ತಂಡವು IPL 2024ರಲ್ಲಿ ಉತ್ತಮ ಆರಂಭವನ್ನು ಮಾಡಿದೆ. ಚೆಪಾಕ್ ಮೈದಾನದಲ್ಲಿ ಶುಕ್ರವಾರ ನಡೆದ ಐಪಿಎಲ್ 2024ರ ಆರಂಭಿಕ ಪಂದ್ಯದಲ್ಲಿ ಯೆಲ್ಲೋ ಆರ್ಮಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು 6 ವಿಕೆಟ್‌’ಗಳಿಂದ ಸೋಲಿಸಿತು.

ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸುತ್ತಿದ್ದಂತೆ, ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಐಪಿಎಲ್‌’ನಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಅಲ್ಲದೆ, ಮಹೇಂದ್ರ ಸಿಂಗ್ ಧೋನಿ ಅವರ ಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ: IPL 2024: ಐಪಿಎಲ್ ನ ಒಂದೇ ಪಂದ್ಯದಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾನೆ ಈ ಬ್ಯಾಟ್ಸ್ ಮನ್!

ರವೀಂದ್ರ ಜಡೇಜಾ, ಐಪಿಎಲ್‌’ನಲ್ಲಿ ಗರಿಷ್ಠ ಬಾರಿ ಅಜೇಯರಾಗಿ ಮರಳಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. 27 ನೇ ಬಾರಿಗೆ ಯಶಸ್ವಿ ರನ್ ಚೇಸ್ ಮಾಡಿರುವ ಜಡ್ಡು ಧೋನಿ (27 ಬಾರಿ) ದಾಖಲೆಗೆ ಸರಿಸಮಾನರಾಗಿ ಬಂದಿದ್ದಾರೆ. ಈ ಪಟ್ಟಿಯಲ್ಲಿ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಹೆಸರು ಎರಡನೇ ಸ್ಥಾನದಲ್ಲಿದೆ. ದಿನೇಶ್ ಕಾರ್ತಿಕ್ ಐಪಿಎಲ್‌’ನಲ್ಲಿ 22 ಯಶಸ್ವಿ ರನ್ ಚೇಸ್ ಮಾಡಿದ್ದು, ನಂತರ ಅಜೇಯರಾಗಿ ಮರಳಿದ್ದಾರೆ.

ಐಪಿಎಲ್’ನಲ್ಲಿ 100 ಸಿಕ್ಸರ್‌:

ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ ರವೀಂದ್ರ ಜಡೇಜಾ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ತೋರಿಸಿದ್ದಾರೆ. ಮೊದಲು ಬೌಲಿಂಗ್ ಮಾಡಿದ್ದ ಅವರು, 4 ಓವರ್‌’ಗಳಲ್ಲಿ 5.20 ಎಕಾನಮಿಯೊಂದಿಗೆ 21 ರನ್ ಮಾತ್ರ ನೀಡಿದರು. ಇದಾದ ಬಳಿಕ ಬ್ಯಾಟಿಂಗ್’ನಲ್ಲಿ 17 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌’ನಲ್ಲಿ ಸಿಕ್ಸರ್ ಕೂಡ ಸೇರಿತ್ತು. ಇದಲ್ಲದೇ ರವೀಂದ್ರ ಜಡೇಜಾ ಐಪಿಎಲ್ ಇತಿಹಾಸದಲ್ಲಿ 100 ಸಿಕ್ಸರ್ ಸಿಡಿಸಿದ್ದಾರೆ. ಐಪಿಎಲ್‌ನ 227 ಪಂದ್ಯಗಳಲ್ಲಿ 2717 ರನ್ ಗಳಿಸಿರುವ ಅವರು, 152 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

IPLನಲ್ಲಿ ಯಶಸ್ವಿ ರನ್ ಚೇಸ್ ಬಳಿಕ ಗರಿಷ್ಠ ಬಾರಿ ಅಜೇಯರಾಗಿ ಮರಳಿದ ಬ್ಯಾಟ್ಸ್’ಮನ್ಸ್:

  • 27 ಬಾರಿ- ಎಂಎಸ್ ಧೋನಿ
  • 27 ಬಾರಿ- ರವೀಂದ್ರ ಜಡೇಜಾ
  • 22 ಬಾರಿ- ದಿನೇಶ್ ಕಾರ್ತಿಕ್
  • 22 ಬಾರಿ- ಯೂಸುಫ್ ಪಠಾಣ್
  • 21 ಬಾರಿ - ಡೇವಿಡ್ ಮಿಲ್ಲರ್
  • 20 ಬಾರಿ - ಡ್ವೇನ್ ಬ್ರಾವೋ

ಇದನ್ನೂ ಓದಿ: Virat Kohli: ಅನುಷ್ಕಾಗಿಂತಲೂ ಈ ವ್ಯಕ್ತಿಯೇ ಹೆಚ್ಚು… ವಿರಾಟ್ ಕೊಹ್ಲಿ ಜೀವನದ ಬಹುದೊಡ್ಡ ಶಕ್ತಿ ಇವರಂತೆ! ಸ್ವತಃ ಅವರೇ ಹೇಳಿದ ಸತ್ಯವಿದು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News