Jadeja Stunning Catch: ರವೀಂದ್ರ ಜಡೇಜಾ ಭರ್ಜರಿ ಡೈವಿಂಗ್ ಕ್ಯಾಚ್‌, ಯುವರಾಜ್‌ ಸಿಂಗ್‌ರನ್ನು ನೆನೆದ ಕ್ರಿಕೆಟ್‌ ಫ್ಯಾನ್ಸ್‌! ವಿಡಿಯೋ ವೈರಲ್‌

Ravindra Jadeja Stunning Catch: ಕಾರು ಅಪಘಾತದಿಂದಾಗಿ ವಿಕೆಟ್ ಕೀಪರ್ ರಿಷಬ್ ಪಂತ್ ಆಟದಿಂದ ಹೊರಗುಳಿದಿದ್ದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪ್ ಮಾಡಿದ ಕೆಎಲ್ ರಾಹುಲ್‌ ಸ್ಥಾನಕ್ಕೆ ಬಂದಿದ್ದಾರೆ. ರಾಹುಲ್ ಕೂಡ ಅದೇ ಸ್ಟೈಲ್ ನಲ್ಲಿ ಭರ್ಜರಿ ಕ್ಯಾಚ್ ಹಿಡಿದಿದ್ದಾರೆ.  

Written by - Chetana Devarmani | Last Updated : Mar 18, 2023, 09:30 AM IST
  • ಭಾರತ - ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ
  • ರವೀಂದ್ರ ಜಡೇಜಾ ಭರ್ಜರಿ ಡೈವಿಂಗ್ ಕ್ಯಾಚ್‌
  • ಯುವರಾಜ್‌ ಸಿಂಗ್‌ರನ್ನು ನೆನೆದ ಕ್ರಿಕೆಟ್‌ ಫ್ಯಾನ್ಸ್‌!
Jadeja Stunning Catch: ರವೀಂದ್ರ ಜಡೇಜಾ ಭರ್ಜರಿ ಡೈವಿಂಗ್ ಕ್ಯಾಚ್‌, ಯುವರಾಜ್‌ ಸಿಂಗ್‌ರನ್ನು ನೆನೆದ ಕ್ರಿಕೆಟ್‌ ಫ್ಯಾನ್ಸ್‌! ವಿಡಿಯೋ ವೈರಲ್‌   title=
ಭಾರತ - ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ರವೀಂದ್ರ ಜಡೇಜಾ ಭರ್ಜರಿ ಡೈವಿಂಗ್ ಕ್ಯಾಚ್‌ ಯುವರಾಜ್‌ ಸಿಂಗ್‌ರನ್ನು ನೆನೆದ ಕ್ರಿಕೆಟ್‌ ಫ್ಯಾನ್ಸ್‌!

Ravindra Jadeja Stunning Catch: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಭರ್ಜರಿ ಕ್ಯಾಚ್ ಪಡೆದರು. ರವೀಂದ್ರ ಜಡೇಜಾ ಅವರ ಈ ಡೈವಿಂಗ್ ಕ್ಯಾಚ್‌ನ ವಿಡಿಯೋ ಕ್ಷಣಗಳಲ್ಲಿ ವೈರಲ್ ಆಗಿದ್ದು ಮಾತ್ರವಲ್ಲದೆ ಯುವರಾಜ್ ಸಿಂಗ್ ಅವರ ಒಂದು ಅದ್ಭುತ ಕ್ಯಾಚ್ ಅನ್ನು ನೆನಪಿಸಿತು. ರವೀಂದ್ರ ಜಡೇಜಾ ಅವರ ಈ ಅದ್ಭುತ ಕ್ಯಾಚ್ ಕಾರಣದಿಂದಾಗಿ ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ರೀಸ್‌ನಿಂದ ಔಟಾದರು. ಮಿಚೆಲ್ ಮಾರ್ಷ್ ಔಟಾದ ಬಳಿಕ ಮತ್ತೊಂದು ಓವರ್ ಬೌಲಿಂಗ್ ಮಾಡಲು ಬಂದ ಕುಲದೀಪ್ ಯಾದವ್ ಎಸೆದ ಚೆಂಡನ್ನು ಆಫ್ ಸೈಡ್ ನಲ್ಲಿ ಶಾಟ್ ಮಾಡಲು ಮಾರ್ನಸ್ ಯತ್ನಿಸಿದರು. ಮಾರ್ನಸ್ ಬಾರಿಸಿದ ಚೆಂಡನ್ನು ರವೀಂದ್ರ ಜಡೇಜಾ ಪೂರ್ಣ ಪ್ರಮಾಣದಲ್ಲಿ ಡೈವ್ ಮಾಡಿ ಕ್ಯಾಚ್ ಹಿಡಿದರು.

 

 

ಕಾರು ಅಪಘಾತದಿಂದಾಗಿ ವಿಕೆಟ್ ಕೀಪರ್ ರಿಷಬ್ ಪಂತ್ ಆಟದಿಂದ ಹೊರಗುಳಿದಿದ್ದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪ್ ಮಾಡಿದ ಕೆಎಲ್ ಅವರ ಸ್ಥಾನಕ್ಕೆ ಬಂದಿದ್ದಾರೆ. ರಾಹುಲ್ ಕೂಡ ಅದೇ ಸ್ಟೈಲ್ ನಲ್ಲಿ ಭರ್ಜರಿ ಕ್ಯಾಚ್ ಹಿಡಿದು ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ. ಕೆಎಲ್ ರಾಹುಲ್ ಹಿಡಿದ ಈ ಅದ್ಭುತ ಕ್ಯಾಚ್ ನಿಂದ ಸ್ಟೀವ್ ಸ್ಮಿತ್ ಪೆವಿಲಿಯನ್ ಹಾದಿ ಹಿಡಿದರು.

 

 

ಇದನ್ನೂ ಓದಿ: Virat Kohli: ಮೈದಾನದಲ್ಲೇ 'ನಾಟು ನಾಟು' ಹುಕ್ ಸ್ಟೆಪ್ ಹಾಕಿದ ವಿರಾಟ್ ಕೊಹ್ಲಿ, ವಿಡಿಯೋ ನೋಡಿ

ಪಂದ್ಯದ ಆರಂಭದಲ್ಲಿಯೇ ಮೊಹಮ್ಮದ್ ಸಿರಾಜ್ ಅವರು ಮೊದಲ ಓವರ್‌ನಲ್ಲಿ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದರು. ಮತ್ತೊಂದೆಡೆ, ಕೆ.ಎಲ್. ರಾಹುಲ್ ಸ್ಟೀವ್ ಸ್ಮಿತ್ ಅವರನ್ನು ರನೌಟ್ ಮಾಡಲು ಹೊರಟಿದ್ದರೂ.. ಅದೃಷ್ಟವಶಾತ್ ಸ್ಮಿತ್ ಪಾರಾದರು. ಆದರೆ ಸ್ಮಿತ್ 22 ರನ್ ಗಳಿಸಿದ್ದಾಗ ರಾಹುಲ್ ಅದ್ಭುತ ಕ್ಯಾಚ್ ಪಡೆದು ಪೆವಿಲಿಯನ್ ಗೆ ಕಳುಹಿಸಿದರು. ಮಿಚೆಲ್ ಮಾರ್ಷ್ ಜತೆ ಸ್ಮಿತ್ ಅವರ ಮಹತ್ವದ ಜೊತೆಯಾಟವನ್ನು ಮುರಿದರು.

 

 

ಮಾರ್ಷ್ ಮತ್ತು ಸ್ಮಿತ್ ಇಬ್ಬರೂ ಒಟ್ಟಿಗೆ ವೇಗವಾಗಿ ರನ್ ಗಳಿಸುವ ಮೂಲಕ ಭಾರತೀಯ ಬೌಲರ್‌ಗಳನ್ನು ಕೆರಳಿಸುತ್ತಿದ್ದ ಸಮಯದಲ್ಲಿ, 13 ನೇ ಓವರ್‌ನಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಬಾಲ್‌ನಲ್ಲಿ ಸ್ಮಿತ್ ಅವರನ್ನು ಔಟ್ ಮಾಡಿ ಅವರ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಸ್ಮಿತ್ ನಿರ್ಗಮನದ ನಂತರ ಅದೇ ವೇಗದಲ್ಲಿ ಮಾರ್ಷ್ ಅರ್ಧಶತಕ ಪೂರೈಸಿ ಶತಕದತ್ತ ದಾಪುಗಾಲಿಡುತ್ತಿರುವಾಗಲೇ ರವೀಂದ್ರ ಜಡೇಜಾ ಅದ್ಭುತ ಡೈವಿಂಗ್‌ ಕ್ಯಾಚ್‌ ಮೂಲಕ ವಿಕೆಟ್‌ ಪಡೆದರು. 

ಇದನ್ನೂ ಓದಿ:  ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಎದುರಾಳಿಗಳಿಗೆ ನಡುಕ ತಂದಿದೆ: ಕಾಲಿಂಗ್‌ವುಡ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News