ಆರ್.ಅಶ್ವಿನ್ ಈ ಮಾಂತ್ರಿಕ ಸ್ಪಿನ್ನರ್ ವೃತ್ತಿಜೀವನಕ್ಕೆ ಕಂಟಕ! ಶೀಘ್ರದಲ್ಲೇ ನಿವೃತ್ತಿ ಘೋಷಿಸುತ್ತಾರಾ?

ಸದ್ಯ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಆರ್.ಅಶ್ವಿನ್ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದು, ಬಜ್ಜಿ ಕಮ್ ಬ್ಯಾಕ್ ಮಾಡಲು ಎಲ್ಲಾ ಮಾರ್ಗಗಳು ಮುಚ್ಚಿಹೋಗಿವೆ.

Written by - Puttaraj K Alur | Last Updated : Dec 18, 2021, 10:52 AM IST
  • ಭಾರತದ ಸ್ಟಾರ್ ಸ್ಪಿನ್ನರ್ ಹರ್ಭಜನ್ ಸಿಂಗ್ ಶೀಘ್ರವೇ ನಿವೃತ್ತಿ ಘೋಷಿಸಬಹುದು
  • ಆರ್.ಅಶ್ವಿನ್ ಇತ್ತೀಚೆಗೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ
  • ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ವೈಫಲ್ಯರಾಗಿರುವ ಬಜ್ಜಿ ವೃತ್ತಿ ಜೀವನ ಡೋಲಾಯಮಾನ
ಆರ್.ಅಶ್ವಿನ್ ಈ ಮಾಂತ್ರಿಕ ಸ್ಪಿನ್ನರ್ ವೃತ್ತಿಜೀವನಕ್ಕೆ ಕಂಟಕ! ಶೀಘ್ರದಲ್ಲೇ ನಿವೃತ್ತಿ ಘೋಷಿಸುತ್ತಾರಾ? title=
ಶೀಘ್ರವೇ ಹರ್ಭಜನ್ ಸಿಂಗ್ ನಿವೃತ್ತಿ?

ನವದೆಹಲಿ: ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(Ravichandran Ashwin) ತಮ್ಮ ಮಾರಕ ಬೌಲಿಂಗ್‌ನಿಂದ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ. ಅವರ ಬಿರುಸಿನ ಬೌಲಿಂಗ್ ಎಲ್ಲರಿಗೂ ಮನವರಿಕೆಯಾಗಿದೆ. ಅವರು ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಂ.1 ಬೌಲರ್ ಆಗಿದ್ದಾರೆ. ಪ್ರತಿಯೊಬ್ಬ ಬ್ಯಾಟ್ಸ್ ಮನ್ ಗೂ ಹೇಗೆ ಬೌಲ್ ಮಾಡಬೇಕೆಂಬ ಕಲೆಯನ್ನು ಅವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಶ್ವಿನ್ ಟಿ-20 ಕ್ರಿಕೆಟ್‌ನಲ್ಲಿ ಪುನರಾಗಮನ ಮಾಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಅಶ್ವಿನ್ ತಂಡಕ್ಕೆ ಬಂದ ಕೂಡಲೇ ಬಲಿಷ್ಠ ಆಟಗಾರನ ವೃತ್ತಿ ಜೀವನ ಅಂತ್ಯ ಕಾಣುತ್ತಿದೆ. ಅಶ್ವಿನ್‌ನಿಂದಾಗಿ ಈ ಆಟಗಾರನಿಗೆ ಧೋನಿ(MS Dhoni) ಕೂಡ ಗೇಟ್ ಪಾಸ್ ತೋರಿಸಿದ್ದರು. ಈ ಆಟಗಾರ ಈಗ ತನ್ನ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದು, ಯಾವಾಗ ಬೇಕಾದರೂ ನಿವೃತ್ತಿ ಘೋಷಿಸಬಹುದು.

ಅಂತ್ಯ ಕಾಣುವ ಹಂತದಲ್ಲಿದೆ ಈ ಆಟಗಾರನ ವೃತ್ತಿಜೀವನ?

ಭಾರತದ ಮಾಂತ್ರಿಕ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕತ್ವದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಶ್ವಿನ್ ಭಾರತೀಯ ಕ್ರಿಕೆಟ್ ತಂಡದ ಭಾಗವಾದಾಗ ಹರ್ಭಜನ್ ಸಿಂಗ್(Harbhajan Singh) ತಂಡದ ಸಾಮಾನ್ಯ ಬೌಲರ್ ಆಗಿದ್ದರು. ಆದರೆ ಧೋನಿ ಅಶ್ವಿನ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡಿ, ಹರ್ಭಜನ್ ಅವರನ್ನು ಕಡೆಗಣಿಸಲಾರಂಭಿಸಿದರು. ಭಜ್ಜಿಗೆ ಟಿ-20 ತಂಡದಿಂದ ಹೊರಬರುವ ದಾರಿ ತೋರಿಸಲಾಯಿತು. ಹರ್ಭಜನ್ ಕೂಡ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಆದರೆ ಅಶ್ವಿನ್ ತಮ್ಮ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡರು ಮತ್ತು ಭಜ್ಜಿ ಹಿಂದುಳಿದಿದ್ದರು. ಹರ್ಭಜನ್ ಕಳೆದ 20 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅನೇಕ ಯುವ ಆಟಗಾರರು ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರುವುದರಿಂದ ಬಜ್ಜಿಗೆ ಈಗ ಕಷ್ಟಕರವಾಗಿದೆ.

ಇದನ್ನೂ ಓದಿ: Wrestling: ವೇದಿಕೆಯಲ್ಲೇ ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದ ಕುಸ್ತಿ ಸಂಸ್ಥೆ ಅಧ್ಯಕ್ಷ..!

 ಎಲ್ಲಾ ಬಾಗಿಲು ಬಂದ್?

ಭಾರತದ ಸ್ಟಾರ್ ಸ್ಪಿನ್ನರ್ ಹರ್ಭಜನ್ ಸಿಂಗ್(Harbhajan Singh Career) ಮಾರಕ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅಸಖ್ಯಾಂತ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ‘ಟರ್ಬನೇಟರ್’ ಎಂದು ಕರೆಯುತ್ತಾರೆ. ಹರ್ಭಜನ್ ತಮ್ಮ ಗೂಗ್ಲಿಯ ಮ್ಯಾಜಿಕ್ ನಿಂದ ವಿಶ್ವ ಕ್ರಿಕೆಟ್ ನಲ್ಲಿ ಸೌಂಡ್ ಮಾಡಿದ್ದರು. 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಬಜ್ಜಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಸದ್ಯ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಆರ್.ಅಶ್ವಿನ್ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ ಬಜ್ಜಿ ಕಮ್ ಬ್ಯಾಕ್ ಮಾಡಲು ಎಲ್ಲಾ ಮಾರ್ಗಗಳು ಮುಚ್ಚಿಹೋಗಿವೆ.

6 ವರ್ಷಗಳ ಕಾಲ ತಂಡದಿಂದ ಹೊರಗೆ

ಹರ್ಭಜನ್ ಸಿಂಗ್ 2015ರಿಂದ ಟೆಸ್ಟ್ ತಂಡದಿಂದ ಹೊರಗುಳಿಯುತ್ತಿದ್ದಾರೆ. ವಿರಾಟ್ ಕೊಹ್ಲಿ(Virat Kohli) ನಾಯಕತ್ವದಲ್ಲಿಯೂ ಅವರಿಗೆ ಆಡಲು ಹೆಚ್ಚು ಅವಕಾಶಗಳು ಸಿಗಲಿಲ್ಲ. ಹೊಸದಾಗಿ ನೇಮಕಗೊಂಡ ನಾಯಕ ರೋಹಿತ್ ಶರ್ಮಾ ಮತ್ತು ಹರ್ಭಜನ್ ಮುಂಬೈ ಇಂಡಿಯನ್ಸ್ ಜೊತೆಗೆ ಆಡಿದ್ದಾರೆ. ಹರ್ಭಜನ್ 2017ರವರೆಗೆ ಮುಂಬೈ ತಂಡದ ಭಾಗವಾಗಿದ್ದರು. ಹರ್ಭಜನ್ ಉತ್ತಮ ಫಾರ್ಮ್‌ನಲ್ಲಿಲ್ಲ. ಎದುರಾಳಿ ಬ್ಯಾಟ್ಸ್‌ ಮನ್‌ಗಳಿಗೆ ಬಜ್ಜಿ ಹೆಚ್ಚು ರನ್ ಬಿಟ್ಟುಕೊಡಲು ಶುರು ಮಾಡಿದ್ದರು. ಹೀಗಾಗಿ ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ವೈಫಲ್ಯರಾಗಿರುವ ಬಜ್ಜಿ ವೃತ್ತಿ ಜೀವನವಿಗ ಡೋಲಾಯಮಾನವಾಗಿದೆ. ಹರ್ಭಜನ್ ಭಾರತದ ಪರ 103 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್, 236 ಏಕದಿನ ಪಂದ್ಯಗಳಲ್ಲಿ 269 ವಿಕೆಟ್ ಮತ್ತು 28 ಟಿ-20 ಪಂದ್ಯಗಳಿಂದ 25 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: ದ್ರಾವಿಡ್ ನಂತರ ಟೀಂ ಇಂಡಿಯಾದ ಸಂಭಾವ್ಯ ಕೋಚ್ ಇವರೆ ಎಂದ ಸೌರವ್ ಗಂಗೂಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News