ಬೆಂಗಳೂರು: ವಿವೋ ಪ್ರೋ ಕಬಡ್ಡಿ ಲೀಗ್‌ನ ಮೊದಲ ಸುತ್ತಿನ ಕೊನೆಯ ಎರಡು ಪಂದ್ಯಗಳಲ್ಲಿ ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ಜಯ ಗಳಿಸಿವೆ. ಇದರೊಂದಿಗೆ ಕಂಠೀರವ ಕ್ರೀಡಾಂಗಣದಲ್ಲಿನ ಪಂದ್ಯಗಳಿಗೆ ತೆರೆ ಬಿದ್ದಿದ್ದು, ಶುಕ್ರವಾರದಿಂದ ಪುಣೆಯ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಎರಡನೇ ಸುತ್ತಿನ ಪಂದ್ಯಗಳು ನಡೆಯಲಿವೆ.
ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಗುಜರಾತ್ ಜಯಂಟ್ಸ್ ವಿರುದ್ಧ 37-29 ಅಂಕಗಳ ಅಂತರದಲ್ಲಿ ಜಯ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ 35-30 ಅಂಕಗಳಿಂದ ಜಯ ಗಳಿಸಿತು. ಸದ್ಯ ದಬಾಂಗ್ ಡೆಲ್ಲಿ ಸತತ ಎರಡು ಸೋಲುಗಳಿಂದ ಕಂಗೆಟ್ಟಿದೆ. ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ ರೈಡಿಂಗ್‌ನಲ್ಲಿ ಸೂಪರ್ ಟೆನ್ ಸಾಧನೆ ಮಾಡಿದರು. ಆದರೆ ತಂಡದ ಜಯಕ್ಕೆ ಪ್ರಮುಖ ಕಾರಣವಾದದ್ದು ಡಿಫೆನ್ಸ್ ವಿಭಾಗ. ವೈಭವ್ ಗಾರ್ಜೆ, ಗಿರೀಶ್ ಮಾರುತಿ ಹಾಗೂ ಶುಭಂ ಶಿಂದೆ ಟ್ಯಾಕಲ್‌ನಲ್ಲಿ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ದ್ವಿತಿಯಾರ್ಧದಲ್ಲಿ ಬೆಂಗಾಲ್ ವಾರಿಯರ್ಸ್ ಟ್ಯಾಕಲ್‌ನಿಂದ 10 ಅಂಕಗಳನ್ನು ಗಳಿಸಿದ್ದು, ಇದೇ ಮೊದಲ ಬಾರಿಗೆ ರೈಡಿಂಗ್‌ಗಿಂತ ಟ್ಯಾಕಲ್‌ನಲ್ಲೇ ಅತಿ ಹೆಚ್ಚು ಅಂಕಗಳು ಬಂದವು.
ಇದನ್ನೂ ಓದಿ : Mallikarjun Kharge : ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ
𝘒𝘢𝘣𝘩𝘪 𝘬𝘢𝘣𝘩𝘪 𝘭𝘢𝘨𝘵𝘢 𝘩𝘢𝘪 𝘢𝘱𝘶𝘯 𝘩𝘪 𝘑𝘢𝘪 𝘉𝘩𝘢𝘨𝘸𝘢𝘯 𝘩𝘢𝘪 😌
U Mumba fans have no second thoughts about this 😁#vivoProKabaddi #FantasticPanga #GGvMUM pic.twitter.com/GNyz6GSiUu
— ProKabaddi (@ProKabaddi) October 26, 2022
ದಬಾಂಗ್ ಡೆಲ್ಲಿ ನಾಯಕ ನವೀನ್ ಕುಮಾರ್ ಸೂಪರ್ ಟೆನ್ ಸಾಧನೆ ಮಾಡಿದರೂ ಈ ಬಾರಿ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.ಪ್ರಥಮಾರ್ಧದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ದಬಾಂಗ್ ಡೆಲ್ಲಿ ವಿರುದ್ಧ 15-13 ಅಂಕಗಳಿಂದ ಮುನ್ನಡೆ ಕಂಡಿತ್ತು. ರೈಡಿಂಗ್‌ಗಿಂತ ಟ್ಯಾಕಲ್‌ನಲ್ಲೇ ಇತ್ತಂಡಗಳು ಹೆಚ್ಚು ಅಂಕಗಳನ್ನು ಗಳಿಸಿದವು. ದಬಾಂಗ್ ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ ದಿಟ್ಟ ಹೋರಾಟ ನೀಡಿ ಉತ್ತಮ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು. ಸತತ ಜಯದಿಂದ ಮುನ್ನುಗ್ಗುತ್ತಿದ್ದ ದಬಾಂಗ್ ಡೆಲ್ಲಿ ಈ ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿತ್ತು. ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ರೈಡಿಂಗ್‌ನಲ್ಲಿ 6 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.
ಇದನ್ನೂ ಓದಿ : Urfi Javed in legal trouble : ಮನಸೋ ಇಚ್ಛೆ ಬಟ್ಟೆ ಧರಿಸುವ ಉರ್ಫಿ ಜಾವೇದ್ ಮೇಲೆ ಬಿತ್ತು ಕೇಸ್
ಗುಮಾನ್ ಸಿಂಗ್ (10) ಹಾಗೂ ಹೈದರಾಲಿ ಎಕ್ರಾಮಿ (10) ರೈಡಿಂಗ್‌ನಲ್ಲಿ ಸೂಪರ್ ಟೆನ್ ಸಾಧನೆಯ ನೆರವಿನಿಂದ ಯು ಮುಂಬಾ ತಂಡ ಗುಜರಾತ್ ಜಯಂಟ್ಸ್ ವಿರುದ್ಧ 37-29 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ. ಈ ಜಯದೊಂದಿಗೆ ಯು ಮುಂಬಾ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿಯಿತು.ಪ್ರಥಮಾರ್ಧದಲ್ಲಿ ಇತ್ತಂಡಗಳು 16-16 ಅಂಕಗಳಿಂದ ಸಮಬಲ ಸಾಧಿಸಿದ್ದವು. ಆದರೆ ದ್ವಿತಿಯಾರ್ಧದಲ್ಲಿ ಯು ಮುಂಬಾ ಆಲ್ರೌಂಡ್ ಪ್ರದರ್ಶನ ತೋರಿ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತು. ಪ್ರಥಮಾರ್ಧದಲ್ಲಿ ಯು ಮುಂಬಾ ರೈಡಿಂಗ್‌ನಲ್ಲಿ ಅತಿ ಹೆಚ್ಚು ಅಂಕಗಳನ್ನು (11) ಗಳಿಸಿದ್ದರೂ, ಒಮ್ಮೆ ಆಲೌಟ್ ಆಗುವ ಮೂಲಕ ಗುಜರಾತ್‌ಗೆ ಸಮಬಲ ಸಾಧಿಸಲು ಅವಕಾಶ ನೀಡಿತು.
ದ್ವಿತಿಯಾರ್ಧದಲ್ಲಿ ಗುಜರಾತ್ ಕೇವಲ 13 ಅಂಕಗಳನ್ನು ಗಳಿಸಿತು. ಯು ಮುಂಬಾ 21 ಅಂಕಗಳನ್ನು ಗಳಿಸಿತಲ್ಲದೆ ಒಮ್ಮೆ ಗುಜರಾತ್ ತಂಡವನ್ನು ಆಲೌಟ್ ಮಾಡಿ ಪ್ರಭುತ್ವ ಸಾಧಿಸಿತು. ಟ್ಯಾಕಲ್‌ನಲ್ಲಿ ಗುಜರಾತ್ ಕೇವಲ 1 ಅಂಕ ಗಳಿಸಿದ್ದು ತಂಡದ ಡಿಫೆನ್ಸ್ ವಿಭಾಗದ ವೈಫಲ್ಯದ ಮೇಲೆ ಗಮನಹರಿಸುವಂತಿದೆ. ಯು ಮುಂಬಾ ದ್ವಿತಿಯಾರ್ಧದಲ್ಲಿ ಟ್ಯಾಕಲ್‌ನಲ್ಲಿ 8 ಅಂಕಗಳನ್ನು ಗಳಿಸಿತು. ನಾಯಕ ಸರಿಂದರ್ ಸಿಂಗ್ ಟ್ಯಾಕಲ್‌ನಲ್ಲಿ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.ಗುಜರಾತ್ ಜಯಂಟ್ಸ್ ಪರ ರಾಕೇಶ್ 12 ಅಂಕಗಳೊಂದಿಗೆ ಸೂಪರ್ ಟೆನ್ ಸಾಧನೆ ಮಾಡಿದರೂ ಉಳಿದ ಆಟಗಾರರು ಯಶಸ್ಸು ಕಾಣುವಲ್ಲಿ ವಿಫಲರಾಗಿರುವುದು ತಂಡದ ಸೋಲಿಗೆ ಕಾರಣವಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.