INDvsWI: ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ ಪೃಥ್ವಿ ಶಾ ದಾಖಲೆ

ರಾಜ್ ಕೋಟ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದು, ಪೃಥ್ವಿ ಶಾ ಅದ್ಭುತ ಅರ್ಧ ಶತಕ ಗಳಿಸಿದ್ದಾರೆ.

Last Updated : Oct 4, 2018, 12:00 PM IST
INDvsWI: ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ ಪೃಥ್ವಿ ಶಾ ದಾಖಲೆ  title=
Pic: IANS

ರಾಜ್ ಕೋಟ್: ಪೃಥ್ವಿ ಶಾ ಟೆಸ್ಟ್ ಕ್ರಿಕೆಟ್ನಲ್ಲಿ ಅದ್ಭುತ ಪ್ರವೇಶ ಕಂಡಿದ್ದಾರೆ. ತನ್ನ ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ 23 ಓವರ್ ಗಳಲ್ಲಿ 69 ಎಸೆತಗಳಲ್ಲಿ ಅಜೇಯ 67 ರನ್ ಗಳಿಸಿದ್ದಾರೆ. ಚೆತೇಶ್ವರ ಪೂಜಾರ 52 ರನ್ ಗಳಿಸಿದ್ದು, ಭಾರತವು 1 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ.

ರಾಜ್ಕೋಟ್ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಮತ್ತು ಚೇತೇಶ್ವರ ಪೂಜಾರಾ 20 ಓವರ್ ಗಳಲ್ಲಿ ಪೃಥ್ವಿ 61 ಮತ್ತು ಪೂಜಾರಾ 40 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾವನ್ನು 100 ಗಡಿ ದಾಟುವಂತೆ ಮಾಡಿದರು. ಭಾರತ 102/1 (20 ಓವರ್ಗಳು)

ಚೊಚ್ಚಲ ಪಂದ್ಯದಲ್ಲಿ 50 ರನ್:
ಟೀಂ ಇಂಡಿಯಾಕ್ಕಾಗಿ ಪೃಥ್ವಿ ಶಾ ತನ್ನ ಮೊದಲ ಅರ್ಧಶತಕವನ್ನು ಪೂರ್ಣಗೊಳಿಸಿದರು. ಪೃಥ್ವಿ ಶಾ ಅತಿ ಕಿರಿಯ ವಯಸ್ಸಿನಲ್ಲಿ ಟೀಂ ಇಂಡಿಯಾ ಪ್ರವೇಶಿಸಿದ 13 ನೇ ಬ್ಯಾಟ್ಸ್ಮನ್ ಆಗಿದ್ದಾರೆ. ಅವರಲ್ಲಿ ಪೃಥ್ವಿ ತನ್ನ ಮೊದಲನೇ ಟೆಸ್ಟ್ ಮ್ಯಾಚ್ ನಲ್ಲೆ ಅರ್ಧ ಶತಕ ಸಿಡಿಸಿದ್ದಾರೆ. ಪೃಥ್ವಿ 18 ಓವರ್ ನಲ್ಲಿ 56 ಎಸೆತಗಳಲ್ಲಿ ತನ್ನ ಅರ್ಧ ಶತಕವನ್ನು ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದಾರೆ.

ಎರಡನೇ ಎಸೆತಕ್ಕೆ ಖಾತೆ ತೆರೆದ ಪೃಥ್ವಿ:
18 ವರ್ಷ 329 ದಿನಗಳ ಪೃಥ್ವಿ ರಾಜ್ಕೋಟ್ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದರು. ಕೆ.ಎಲ್. ರಾಹುಲ್ ಅವರೊಂದಿಗೆ ತನ್ನ ಪಂದ್ಯ ಆರಂಭಿಸಿದ ಪೃಥ್ವಿ ಅದ್ಭುತ ಬ್ಯಾಕ್-ಅಪ್ ಪಂಚ್ ಅನ್ನು ಇಟ್ಟುಕೊಂಡು ಪಂದ್ಯದ ಎರಡನೇ ಚೆಂಡಿನ ಎಸೆತಕ್ಕೆ ಅವರು ತಮ್ಮ ಖಾತೆಯನ್ನು ತೆರೆದರು. ಶಾನನ್ ಗೇಬ್ರಿಯಲ್ ಅವರ ಚೆಂಡಿಗೆ ಅವರು ಮೂರು ರನ್ಗಳನ್ನು ಗಳಿಸಿದರು.

ಅರ್ಧ ಶತಕ ಪೂರೈಸಿದ ಮೂರನೇ ಕಿರಿಯ ಭಾರತೀಯ:
ಚಿಕ್ಕ ವಯಸ್ಸಿನಲ್ಲಿ ಸಚಿನ್ ತೆಂಡುಲ್ಕರ್ ಮತ್ತು ಪಾರ್ಥಿವ್ ಪಟೇಲ್ ಮಾತ್ರ ಅರ್ಧಶತಕಗಳನ್ನು ಗಳಿಸಿದ್ದರು. ಇದೀಗ ತನ್ನ ಚೊಚ್ಚಲ ಟೆಸ್ಟ್ ಕ್ರಿಕೆಟ್ ನಲ್ಲಿ ಅರ್ಧ ಶತಕ ಸಿಡಿಸಿರುವ ಪೃಥ್ವಿ ಶಾ ಅರ್ಧ ಶತಕ ಪೂರೈಸಿದ ಮೂರನೇ ಕಿರಿಯ ಭಾರತೀಯ ಆಟಗಾರರಾಗಿದ್ದಾರೆ. ಸಚಿನ್ 16 ವರ್ಷ ಮತ್ತು 214 ದಿನಗಳಲ್ಲಿ ಅರ್ಧಶತಕವನ್ನು ಮಾಡಿದ್ದಾರೆ. ಪಾರ್ಥಿವ್ ಪಟೇಲ್ ಅವರು 18 ವರ್ಷ 301 ದಿನಗಳಲ್ಲಿ ಅರ್ಧ ಶತಕ ಸಿಡಿಸಿದ್ದರು.

ಪೃಥ್ವಿ ಶಾ ದೇಶದಲ್ಲಿ ಪ್ರಥಮ ಬಾರಿಗೆ 50 ರನ್ ಗಳಿಸಿದ ಭಾರತೀಯ ಆಟಗಾರರಾದರು. ಇವರು ರಾಜ್ಕೋಟ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಪಂದ್ಯದಲ್ಲೇ ಅರ್ಧ ಶತನ ಸಿಡಿಸಿದರು. ಸಚಿನ್ ತಂಡೂಲ್ಕರ್ ಫೈಸಲಾಬಾದ್ನಲ್ಲಿ ಪಾಕಿಸ್ತಾನ ವಿರುದ್ಧದ ಅರ್ಧಶತಕವನ್ನು ಸಿಡಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಪಾರ್ಥಿವ್ ಪಟೇಲ್ ಅರ್ಧಶತಕ ದಾಖಲಿಸಿದ್ದರು.

Trending News