ವಿಶ್ವಕಪ್ 2023 : ಈ ಪಂದ್ಯಕ್ಕೆ ಯಾವ ಪ್ರೇಕ್ಷಕರಿಗೂ ಇಲ್ಲ ಎಂಟ್ರಿ, ಟಿಕೆಟ್ ಹಣ ಏನಾಗುತ್ತದೆ?

World Cup 2023: ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಅಭ್ಯಾಸ ಪಂದ್ಯವು ಹೈದರಾಬಾದ್ ಮೈದಾನದಲ್ಲಿ ಪ್ರೇಕ್ಷಕರಿಲ್ಲದೆ ನಡೆಯಲಿದೆ. ಪ್ರೇಕ್ಷಕರಿಲ್ಲದೆ ಪಂದ್ಯ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.

Written by - Chetana Devarmani | Last Updated : Sep 19, 2023, 11:01 PM IST
  • ವಿಶ್ವಕಪ್ 2023 ರ ಪಂದ್ಯಗಳು
  • ಕ್ರಿಕೆಟ್ ಅಭಿಮಾನಿಗಳಿಗೆ ಕೆಟ್ಟ ಸುದ್ದಿ
  • ಈ ಪಂದ್ಯಕ್ಕೆ ಯಾವ ಪ್ರೇಕ್ಷಕರಿಗೂ ಇಲ್ಲ ಎಂಟ್ರಿ
ವಿಶ್ವಕಪ್ 2023 : ಈ ಪಂದ್ಯಕ್ಕೆ ಯಾವ ಪ್ರೇಕ್ಷಕರಿಗೂ ಇಲ್ಲ ಎಂಟ್ರಿ, ಟಿಕೆಟ್ ಹಣ ಏನಾಗುತ್ತದೆ?  title=

Pakistan vs New Zealand : ಇದು ಕ್ರಿಕೆಟ್ ಅಭಿಮಾನಿಗಳಿಗೆ ಕೆಟ್ಟ ಸುದ್ದಿ. ಸೆಪ್ಟೆಂಬರ್ 29 ರಂದು ಹೈದರಾಬಾದ್‌ನ ಉಪ್ಪಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳಿಲ್ಲದೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಅಭ್ಯಾಸ ಪಂದ್ಯ ನಡೆಯಲಿದೆ. ಬಿಸಿಸಿಐ ಮೂಲಗಳು ಇದನ್ನು ಬಹಿರಂಗಪಡಿಸಿವೆ. ಗಣೇಶ ನಿಮಜ್ಜನ ಮತ್ತು ಮಿಲನ್-ಉನ್-ನಬಿ ಹಬ್ಬದ ಕಾರಣ ಸೆಪ್ಟೆಂಬರ್ 28 ರಂದು ಪಂದ್ಯವನ್ನು ಮುಂದೂಡುವಂತೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಗೆ ನಗರ ಪೊಲೀಸರು ಕೇಳಿಕೊಂಡಿದ್ದಾರೆ. ಎಚ್‌ಸಿಎ ಈ ವಿಷಯವನ್ನು ಬಿಸಿಸಿಐ ಗಮನಕ್ಕೆ ತಂದಿದೆ. ಆದರೆ, ಬಿಸಿಸಿಐ ಈಗಾಗಲೇ ವಿಶ್ವಕಪ್ ಪಂದ್ಯಗಳನ್ನು ಒಮ್ಮೆ ಮರು ನಿಗದಿಪಡಿಸಿದ್ದರಿಂದ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಅಭ್ಯಾಸ ಪಂದ್ಯವಾದ್ದರಿಂದ ಪ್ರೇಕ್ಷಕರಿಲ್ಲದೆ ಪಂದ್ಯ ನಡೆಸುವಂತೆ ಸೂಚಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನ - ನ್ಯೂಜಿಲೆಂಡ್ ಪಂದ್ಯಕ್ಕೆ ಟಿಕೆಟ್ ಕಾಯ್ದಿರಿಸಿದವರಿಗೆ ಟಿಕೆಟ್ ಪಾಲುದಾರ 'ಬುಕ್‌ ಮೈ ಶೋ' ಹಣ ಮರುಪಾವತಿ ಮಾಡಲಿದೆ. "ನಾವು ಪ್ರೇಕ್ಷಕರಿಲ್ಲದೆ ಪಂದ್ಯವನ್ನು ಆಯೋಜಿಸುತ್ತೇವೆ. ಟಿಕೆಟ್ ಕಾಯ್ದಿರಿಸಿದವರಿಗೆ ಹಣವನ್ನು ಮರುಪಾವತಿಸಲಾಗುವುದು" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ :  ಏಷ್ಯಾಕಪ್ ಗೆದ್ದ ಭಾರತಕ್ಕೆ ಸಿಕ್ಕ ಮೊತ್ತವೆಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ

ಅಕ್ಟೋಬರ್ 9 ಮತ್ತು ಅಕ್ಟೋಬರ್ 10 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ನಡೆಸುವ ಬಗ್ಗೆ ಎಚ್‌ಸಿಎ ಬಿಸಿಸಿಐಗೆ ಪತ್ರ ಬರೆದಿದೆ. ಅಕ್ಟೋಬರ್ 9 ರಂದು ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವೆ ಪಂದ್ಯ ನಡೆಯಲಿದೆ. ಅಕ್ಟೋಬರ್ 10 ರಂದು ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ - ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಒಂದೇ ಪಂದ್ಯಕ್ಕೆ ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದೇ ರೀತಿ ಆಟಗಾರರು ತಂಗಿರುವ ಹೋಟೆಲ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಇರುತ್ತಾರೆ. ಆಗಲೂ ಬಿಸಿಸಿಐ ಪಂದ್ಯಗಳನ್ನು ಮರು ನಿಗದಿಪಡಿಸುವಂತೆ ಉತ್ತರ ನೀಡಿತ್ತು ಎಂದು ಗೊತ್ತಾಗಿದೆ.

2023 ರ ವಿಶ್ವಕಪ್‌ನಲ್ಲಿ ಈಗಾಗಲೇ ಅತಿ ದೊಡ್ಡ ಪಂದ್ಯಗಳಲ್ಲಿ ಒಂದಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ದಿನದಿಂದ ದಿನಕ್ಕೆ ತಂದಿರುವುದು ಗೊತ್ತೇ ಇದೆ. ಮೂಲತಃ ಅಕ್ಟೋಬರ್ 15 ರಂದು ನಡೆಯಬೇಕಿತ್ತು. ಆದರೆ ಅದೇ ದಿನ ನವರಾತ್ರಿ ಹಬ್ಬದ ಕಾರಣ ಅಕ್ಟೋಬರ್ 14 ಕ್ಕೆ ಮರು ನಿಗದಿಪಡಿಸಲಾಗಿತ್ತು. ಬಂಗಾಳದ ಪ್ರಮುಖ ಹಬ್ಬವಾದ ಕಾಳಿಪೂಜೆಯ ಜೊತೆಗೆ ಕೋಲ್ಕತ್ತಾದಲ್ಲಿ ನವೆಂಬರ್ 12 ರಂದು ಪಾಕಿಸ್ತಾನ-ಇಂಗ್ಲೆಂಡ್ ಪಂದ್ಯವನ್ನು ನವೆಂಬರ್ 11 ಕ್ಕೆ ನಿಗದಿಪಡಿಸಲಾಯಿತು. ಮೊದಲ ಪಂದ್ಯದಲ್ಲಿ ಅಕ್ಟೋಬರ್ 5 ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್-ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ : ಸಿರಾಜ್‌ ಬದಲಿಗೆ ರೋಹಿತ್ ತಿಲಕ್ ವರ್ಮಾ ಕೈಗೆ ಏಷ್ಯಾ ಕಪ್ ನೀಡಿದ್ದು ಏಕೆ ಗೊತ್ತೆ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News