15 ವರ್ಷಗಳ ವೃತ್ತಿಜೀವನ ಅಂತ್ಯ! ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಸ್ಟಾರ್ ವೇಗಿ

Pakistan pacer Wahab Riaz retirement: ವಹಾಬ್ ರಿಯಾಜ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ತಮ್ಮ15 ವರ್ಷಗಳ ವೃತ್ತಿಜೀವನಕ್ಕೆ ಕೊನೆ ಹೇಳಿದ್ದಾರೆ. ಆದರೆ ಫ್ರಾಂಚೈಸಿ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತಾರೆ ಎಂದು ತಿಳಿದುಬಂದಿದೆ.

Written by - Bhavishya Shetty | Last Updated : Aug 16, 2023, 01:18 PM IST
    • ವಹಾಬ್ ರಿಯಾಜ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ
    • ಫ್ರಾಂಚೈಸಿ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತಾರೆ ಎಂದು ತಿಳಿದುಬಂದಿದೆ.
    • ವಹಾಬ್ ರಿಯಾಜ್ ಪಾಕಿಸ್ತಾನದ ಪರ 27 ಟೆಸ್ಟ್, 91 ODI ಮತ್ತು 36 T20 ಪಂದ್ಯಗಳನ್ನು ಆಡಿದ್ದಾರೆ
15 ವರ್ಷಗಳ ವೃತ್ತಿಜೀವನ ಅಂತ್ಯ! ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಸ್ಟಾರ್ ವೇಗಿ  title=
Wahab Riaz Retirement

Pakistan pacer Wahab Riaz retirement: ಏಷ್ಯಾಕಪ್ 2023ಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಸ್ಟಾರ್ ವೇಗಿಯೊಬ್ಬರು ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದಾರೆ. ಈ ಆಟಗಾರ ಬೇರೆ ಯಾರೂ ಅಲ್ಲ ಪಾಕಿಸ್ತಾನದ ವೇಗಿ ವಹಾಬ್ ರಿಯಾಜ್. ವಹಾಬ್ ರಿಯಾಜ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ತಮ್ಮ15 ವರ್ಷಗಳ ವೃತ್ತಿಜೀವನಕ್ಕೆ ಕೊನೆ ಹೇಳಿದ್ದಾರೆ. ಆದರೆ ಫ್ರಾಂಚೈಸಿ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಒಂದೇ ಒಂದು ದಿನ ಶಾಲೆಗೆ ರಜೆ ಹಾಕದೆ 50 ದೇಶ ಸುತ್ತಿದ್ಳು 10ರ ಹರೆಯದ ಬಾಲೆ! ಅದ್ಹೇಗೆ ಗೊತ್ತಾ?

ನಿವೃತ್ತಿ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿದ ವಹಾಬ್ ರಿಯಾಜ್, “ಕಳೆದ ಎರಡು ವರ್ಷಗಳಿಂದ ನನ್ನ ನಿವೃತ್ತಿ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈಗ 2023 ಅಂತರಾಷ್ಟ್ರೀಯ ಕ್ರಿಕೆಟ್‌’ನಿಂದ ನಿವೃತ್ತಿ ಹೊಂದುವುದು ನನ್ನ ಗುರಿಯಾಗಿದೆ ಮತ್ತು ಈಗ ಹೆಚ್ಚು ಆರಾಮದಾಯಕವಾಗಿದೆ. ಇದುವರೆಗೆ ದೇಶ ಮತ್ತು ರಾಷ್ಟ್ರೀಯ ತಂಡಕ್ಕಾಗಿ ಅತ್ಯುತ್ತಮ ಸೇವೆಯನ್ನು ನೀಡಿದ್ದೇನೆ” ಎಂದು ತಿಳಿಸಿದ್ದಾರೆ.

"ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದು ಒಂದು ಗೌರವ. ಈ ಅಧ್ಯಾಯಕ್ಕೆ ನಾನು ವಿದಾಯ ಹೇಳುತ್ತಿದ್ದಂತೆ, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹೊಸ ಸಾಹಸವನ್ನು ಪ್ರಾರಂಭಿಸಲು ನಾನು ಖುಷಿ ಪಡುತ್ತಿದ್ದೇನೆ, ಅಲ್ಲಿ ನಾನು ಕೆಲವರ ವಿರುದ್ಧ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಸ್ಪರ್ಧಿಸುವಾಗ ಪ್ರೇಕ್ಷಕರನ್ನು ರಂಜಿಸಲು ಮತ್ತು ಪ್ರೇರೇಪಿಸಲು ಸಾಧ್ಯವಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ಡೈ, ಹೇರ್ ಕಲರ್, ದುಬಾರಿ ಪ್ರಾಡಕ್ಟ್ ಬೇಡವೇ ಬೇಡ ! ಹಿತ್ತಲಲ್ಲೇ ಬೆಳೆಯುವ ಈ ಎಲೆ ನೀಡುವುದು ಬಿಳಿ ಕೂದಲಿಗೆ ಶಾಶ್ವತ ಪರಿಹಾರ

ಇನ್ನು ವಹಾಬ್ ರಿಯಾಜ್ ಪಾಕಿಸ್ತಾನದ ಪರ 27 ಟೆಸ್ಟ್, 91 ODI ಮತ್ತು 36 T20 ಪಂದ್ಯಗಳನ್ನು ಆಡಿದ್ದಾರೆ. 2020 ರಲ್ಲಿ ಪಾಕಿಸ್ತಾನ ತಂಡದ ಭಾಗವಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 34.50 ಸರಾಸರಿಯಲ್ಲಿ 83 ವಿಕೆಟ್‌ಗಳನ್ನು, ODIಗಳಲ್ಲಿ 34.30 ರ ಸರಾಸರಿಯಲ್ಲಿ 120 ವಿಕೆಟ್, T20 ನಲ್ಲಿ ಅವರು 34 ವಿಕೆಟ್‌’ಗಳನ್ನು ಪಡೆದಿದ್ದಾರೆ. ವಹಾಬ್ ರಿಯಾಜ್ ಇತ್ತೀಚೆಗೆ PSL 2023 ರಲ್ಲಿ ಪೇಶಾವರ್ ಝಲ್ಮಿಯ ಭಾಗವಾಗಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News