ಈ 10 ವಿಷಯಗಳಲ್ಲಿ ಪಾಕಿಸ್ತಾನ ವಿಶ್ವದಲ್ಲೇ ಮುಂಚೂಣಿಯಲ್ಲಿದೆ! ಸತ್ಯ ತಿಳಿದರೆ ಶಾಕ್ ಆಗೋದು ಗ್ಯಾರಂಟಿ

Pakistan Fact: ವಿಶ್ವದ ಎರಡನೇ ಅತಿ ಎತ್ತರದ ಶಿಖರವನ್ನು ಹೊಂದಿರುವ ಏಕೈಕ ದೇಶ ಪಾಕಿಸ್ತಾನ. ಅದರ ಹೆಸರು K2. ಇದಲ್ಲದೆ, ಮೂರು ಅತಿ ಎತ್ತರದ ಪರ್ವತ ಶ್ರೇಣಿಗಳಾದ ಹಿಂದೂಕುಶ್, ಕಾರಕೋರಂ ಮತ್ತು ಹಿಮಾಲಯಗಳು ಸಹ ಈ ದೇಶದಲ್ಲಿವೆ.

Written by - Bhavishya Shetty | Last Updated : Nov 29, 2023, 08:15 PM IST
    • ಪಾಕಿಸ್ತಾನ ಕೆಲವು ವಿಷಯಗಳಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ
    • ವಿಶ್ವದ ಎರಡನೇ ಅತಿ ಎತ್ತರದ ಶಿಖರವನ್ನು ಹೊಂದಿರುವ ಏಕೈಕ ದೇಶ
    • ಪರಮಾಣು ಶಕ್ತಿ ಹೊಂದಿರುವ ವಿಶ್ವದ ಏಕೈಕ ಮುಸ್ಲಿಂ ರಾಷ್ಟ್ರ
ಈ 10 ವಿಷಯಗಳಲ್ಲಿ ಪಾಕಿಸ್ತಾನ ವಿಶ್ವದಲ್ಲೇ ಮುಂಚೂಣಿಯಲ್ಲಿದೆ! ಸತ್ಯ ತಿಳಿದರೆ ಶಾಕ್ ಆಗೋದು ಗ್ಯಾರಂಟಿ title=
Contribution of Pakistan to the World

Pakistan Fact: ಇಂದು ನೆರೆಯ ರಾಷ್ಟ್ರ ಪಾಕಿಸ್ತಾನದ ಸ್ಥಿತಿ ತುಂಬಾ ಕೆಟ್ಟದಾಗಿದೆ. ಪ್ರಸ್ತುತ ಬಡತನದಿಂದ ಕಂಗೆಟ್ಟ ಪಾಕ್ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದೆ. ಆದರೆ ತನ್ನ ಕಿಡಿಗೇಡಿ ಕೃತ್ಯವನ್ನೇನು ಕಡಿಮೆ ಮಾಡಿಲ್ಲ. ಅಂದಹಾಗೆ ಇವೆಲ್ಲದರ ಹೊರತಾಗಿ, ಪಾಕಿಸ್ತಾನ ಕೆಲವು ವಿಷಯಗಳಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ.

ಇದನ್ನೂ ಓದಿ: Viral Video: ನೀರೆಯರು ನಾಚುವಂತ ಮೇಕಪ್… ಬ್ಯೂಟಿಶಿಯನ್ ಕಪಿಯ ವಿಡಿಯೋ ಇಲ್ಲಿದೆ

ವಿಶ್ವದ ಎರಡನೇ ಅತಿ ಎತ್ತರದ ಶಿಖರವನ್ನು ಹೊಂದಿರುವ ಏಕೈಕ ದೇಶ ಪಾಕಿಸ್ತಾನ. ಅದರ ಹೆಸರು K2. ಇದಲ್ಲದೆ, ಮೂರು ಅತಿ ಎತ್ತರದ ಪರ್ವತ ಶ್ರೇಣಿಗಳಾದ ಹಿಂದೂಕುಶ್, ಕಾರಕೋರಂ ಮತ್ತು ಹಿಮಾಲಯಗಳು ಸಹ ಈ ದೇಶದಲ್ಲಿವೆ.

ಪಾಕಿಸ್ತಾನವು ವಿಶ್ವದ ಅತಿದೊಡ್ಡ ಬಂದರನ್ನು ಹೊಂದಿದೆ. ಇದನ್ನು ಗ್ವಾದರ್ ಬಂದರು ಎಂದು ಕರೆಯಲಾಗುತ್ತದೆ. ಈ ಬಂದರನ್ನು ಪಾಕಿಸ್ತಾನ ಮತ್ತು ಚೀನಾ ಬಳಸುತ್ತದೆ.

ವಿಶ್ವದಲ್ಲೇ ಅತಿ ಎತ್ತರದಲ್ಲಿರುವ ಸುಸಜ್ಜಿತ ರಸ್ತೆ ಪಾಕಿಸ್ತಾನದಲ್ಲೂ ಇದೆ. ಈ ರಸ್ತೆಯನ್ನು ಚೀನಾ-ಪಾಕಿಸ್ತಾನ ಸ್ನೇಹ ಹೆದ್ದಾರಿ ಅಥವಾ ಕಾರಕೋರಂ ಹೆದ್ದಾರಿ ಎಂದೂ ಕರೆಯುತ್ತದೆ.

ವಿಶ್ವದ ಅತಿದೊಡ್ಡ ಸ್ವಯಂಸೇವಕ ಆಂಬ್ಯುಲೆನ್ಸ್ ಸೇವೆಯನ್ನು ಪಾಕಿಸ್ತಾನದಲ್ಲಿ ನಡೆಸಲಾಗುತ್ತಿದೆ. ಇದನ್ನು ಈಧಿ ಫೌಂಡೇಶನ್ ನಡೆಸುತ್ತಿದೆ.

ಪ್ರಪಂಚದಾದ್ಯಂತ ಮಾರಾಟವಾಗುವ ಅರ್ಧದಷ್ಟು ಫುಟ್‌ಬಾಲ್‌’ಗಳನ್ನು ಪಾಕಿಸ್ತಾನದ ಸಿಯಾಲ್‌’ಕೋಟ್‌’ನಲ್ಲಿ ತಯಾರಿಸಲಾಗುತ್ತದೆ. ಕೈಯಿಂದ ಹೊಲಿದ ಫುಟ್‌ಬಾಲ್‌’ಗಳನ್ನು ಮಾರಾಟ ಮಾಡುವಲ್ಲಿ ಪಾಕಿಸ್ತಾನವು ವಿಶ್ವದಲ್ಲಿ ನಂಬರ್ 1 ಸ್ಥಾನದಲ್ಲಿದೆ.

ವಿಶ್ವದ ಅತಿ ಎತ್ತರದ ಪೋಲೋ ಮೈದಾನವನ್ನು ಹೊಂದಿರುವ ಏಕೈಕ ದೇಶ ಪಾಕಿಸ್ತಾನ. ಇದು ಪಾಕಿಸ್ತಾನದ ಶಾಂಡೂರ್‌ನಲ್ಲಿದೆ.

ಪರಮಾಣು ಶಕ್ತಿ ಹೊಂದಿರುವ ವಿಶ್ವದ ಏಕೈಕ ಮುಸ್ಲಿಂ ರಾಷ್ಟ್ರ ಪಾಕಿಸ್ತಾನ.

ವಿಶ್ವದ ಅತ್ಯಂತ ಕಿರಿಯ ನೊಬೆಲ್ ಪ್ರಶಸ್ತಿ ವಿಜೇತ ಯೂಸುಫ್‌ಜಾಯ್ ಕೂಡ ಪಾಕಿಸ್ತಾನದ ನಿವಾಸಿ. ಅವರ ಮನೆ ಪಾಕಿಸ್ತಾನದಲ್ಲಿದೆ.

ಸಿಂಧೂ ಕಣಿವೆ ನಾಗರೀಕತೆ ಎಂದು ಕರೆಯಲ್ಪಡುವ ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ನಾಗರಿಕತೆಯು ಪಾಕಿಸ್ತಾನವು ಇಂದು ಇರುವ ಅದೇ ಪ್ರದೇಶದಲ್ಲಿ ಅಭಿವೃದ್ಧಿಗೊಂಡಿದೆ.

ವಿಶ್ವದ ಅತಿ ದೊಡ್ಡ ಮಣ್ಣಿನ ಅಣೆಕಟ್ಟು "ತರ್ಬೆಲಾ ಅಣೆಕಟ್ಟು" ಕೂಡ ಪಾಕಿಸ್ತಾನದಲ್ಲಿದೆ.

ಇದನ್ನೂ ಓದಿ: ಬಿಗ್ ಬಾಸ್ ಶೋನಿಂದ ದೊರೆತ ಸಂಭಾವನೆ ಎಷ್ಟು?- ಬಹಿರಂಗಪಡಿಸಿದ ನೀತು ವನಜಾಕ್ಷಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News