Pakistan Cricketer Shadab Khan: ಪಾಕಿಸ್ತಾನದ ಪ್ರತಿಭಾನ್ವಿತ ಆಲ್ ರೌಂಡರ್ ಶಾದಾಬ್ ಖಾನ್, ಯುನೈಟೆಡ್ ಸ್ಟೇಟ್ಸ್’ನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ನಲ್ಲಿ (ಎಂಎಲ್‌ಸಿ) ಆಡುವ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯಾವಳಿಯ ಇತಿಹಾಸದಲ್ಲಿ ಮಹತ್ವದ ಕ್ಷಣವನ್ನು ಗುರುತಿಸುವ ಮೂಲಕ ಭಾರತೀಯ ಆಟಗಾರರೊಂದಿಗೆ ತರಬೇತಿ ಪಡೆಯುವ ಅವಕಾಶದ ಬಗ್ಗೆ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: “ಒಂದು ವರ್ಷದಿಂದ ಭಾರತ ತಂಡ ಈ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿದೆ”: Team India ಕೋಚ್ ಹೇಳಿಕೆ
ಶಾದಾಬ್ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಾಕಿಸ್ತಾನದ ಮತ್ತೊಬ್ಬ ಆಟಗಾರ ಹ್ಯಾರಿಸ್ ರೌಫ್ ಕೂಡ ಇದೇ ತಂಡದಲ್ಲಿದ್ದಾರೆ. ಭಾರತದ ದೇಶೀಯ ಕ್ರಿಕೆಟ್ ನಲ್ಲಿ ತಮ್ಮ ಛಾಪು ಮೂಡಿಸಿದ ಆಟಗಾರರಾದ ತಜೀಂದರ್ ಸಿಂಗ್ ಮತ್ತು ಚೈತನ್ಯ ಬಿಷ್ಣೋಯ್ ಸಹ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ನ್ನು ಪ್ರತಿನಿಧಿಸಲಿದ್ದಾರೆ.
ಈ ಸಂದರ್ಭದಲ್ಲಿ ಭಾರತ ಪಾಕ್ ಬಗ್ಗೆ ಮಾತನಾಡಿದ ಶಾದಾಬ್ ಖಾನ್ “ವಿಭಜನೆಯ ಮೊದಲು ಪಾಕಿಸ್ತಾನ ಮತ್ತು ಭಾರತದ ಆಟಗಾರರು ಮೈದಾನವನ್ನು ಒಟ್ಟಾಗಿ ಹಂಚಿಕೊಂಡಿದ್ದರು. MLC ಮೂಲಕ ಭಾರತೀಯ ಆಟಗಾರರ ಜೊತೆ ಆಡುವುದು ನನಗೆ ಖುಷಿಯ ಸಂಗತಿಯಾಗಿದೆ” ಎಂದು ಹೇಳಿದ್ದಾರೆ.
“ಭಾರತ ಮತ್ತು ಪಾಕಿಸ್ತಾನ ಎರಡೂ ಪ್ರತ್ಯೇಕಗೊಳ್ಳುವ ಮೊದಲು, ಎಲ್ಲಾ ಆಟಗಾರರು ಒಟ್ಟಿಗೆ ಆಡುತ್ತಿದ್ದರು. ಈ ಪಂದ್ಯಾವಳಿಯಲ್ಲಿ ನಮ್ಮ ಭಾರತೀಯ ಸಹೋದರರೊಂದಿಗೆ ಮತ್ತೆ ಒಂದಾಗುತ್ತಿರುವುದು ಅದ್ಭುತ ಎನಿಸುತ್ತಿದೆ. ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಇದೊಂದು ಉತ್ತಮ ಅವಕಾಶವಾಗಿದೆ, ಮತ್ತೆ ಒಂದಾಗೋಣ” ಎಂದು ಶಾದಾಬ್ ಹೇಳಿದ್ದಾರೆ.
I hope this love grows between 2 nations 💕#pakistan#Indian #Cricket pic.twitter.com/hhUtOL7bRv
— Hassam Shah🇵🇰❤️ (@sherazi_hassam) July 14, 2023
ಇದನ್ನೂ ಓದಿ: ಮೊದಲ ಟೆಸ್ಟ್’ನಲ್ಲಿ ಗೆದ್ದರೂ Team India ಪ್ಲೇಯಿಂಗ್ 11ನಲ್ಲಿ ಆಗಲಿದೆ ಬದಲಾವಣೆ: ಇವರು ಇನ್… ಅವರು ಔಟ್!
“ನಾವು ಭೇಟಿಯಾದಾಗ ನಮ್ಮ ಭಾವನೆ ಸಮಾನವಾಗಿವೆ ಎಂದನಿಸುತ್ತದೆ. ನಮ್ಮ ಸಂಸ್ಕೃತಿ, ಭಾಷೆಗಳು ಒಂದಕ್ಕೊಂದು ತೀರಾ ಹೋಲಿಕೆಯಾಗುತ್ತವೆ” ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡುತ್ತಾ ಕೊಂಚ ಭಾವುಕರಾದದ್ದು ಕಂಡುಬಂತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.