ಸಂಕಷ್ಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್…! 500ಕ್ಕೂ ಅಧಿಕ ರನ್ ಗಳಿಸಿದ ಆರಂಭಿಕ ಆಟಗಾರನಿಗೆ ಗಾಯ, ತಂಡದಿಂದ ಹೊರಕ್ಕೆ!

Devon Conway, IPL season 17: ಗಾಯದ ಸಮಸ್ಯೆಯಿಂದಾಗಿ ಕಾನ್ವೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಟಿ20 ಸರಣಿಯ ವೇಳೆ ಕಾನ್ವೇ ಗಾಯಗೊಂಡಿದ್ದು, ಗಾಯ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.

Written by - Bhavishya Shetty | Last Updated : Feb 28, 2024, 05:58 PM IST
    • ಇಂಡಿಯನ್ ಪ್ರೀಮಿಯರ್ ಲೀಗ್‌’ನ 17ನೇ ಸೀಸನ್‌
    • ನ್ಯೂಜಿಲೆಂಡ್‌ನ ಸ್ಟಾರ್ ಕ್ರಿಕೆಟಿಗ ಡೆವೊನ್ ಕಾನ್ವೇ
    • ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಕಾನ್ವೇ ಔಟ್
ಸಂಕಷ್ಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್…! 500ಕ್ಕೂ ಅಧಿಕ ರನ್ ಗಳಿಸಿದ ಆರಂಭಿಕ ಆಟಗಾರನಿಗೆ ಗಾಯ, ತಂಡದಿಂದ ಹೊರಕ್ಕೆ! title=
Devon Conway

Devon Conway, IPL season 17: ಇಂಡಿಯನ್ ಪ್ರೀಮಿಯರ್ ಲೀಗ್‌’ನ 17ನೇ ಸೀಸನ್‌’ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಭಾರೀ ಹಿನ್ನಡೆ ಅನುಭವಿಸಿದೆ. ನ್ಯೂಜಿಲೆಂಡ್‌ನ ಸ್ಟಾರ್ ಕ್ರಿಕೆಟಿಗ ಡೆವೊನ್ ಕಾನ್ವೇ ಐಪಿಎಲ್ 17ನೇ ಸೀಸನ್‌’ನಲ್ಲಿ ಆಡುವುದು ಅನುಮಾನವಿದೆ.

ಇದನ್ನೂ ಓದಿ: ಸಖತ್‌ ವೈರಲ್‌ ಆಗ್ತಿವೆ ʼವಿರಾಟ್‌ ಕೊಹ್ಲಿʼ ಮಾವನ ಮಗಳ ಫೋಟೋಸ್‌..! ನೋಡಿ

ಗಾಯದ ಸಮಸ್ಯೆಯಿಂದಾಗಿ ಕಾನ್ವೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಟಿ20 ಸರಣಿಯ ವೇಳೆ ಕಾನ್ವೇ ಗಾಯಗೊಂಡಿದ್ದು, ಗಾಯ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.

ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಟೆಸ್ಟ್ ಸರಣಿಗೆ ಕಾನ್ವೆ ಅವರ ಬದಲಿ ಆಟಗಾರನನ್ನು ಘೋಷಿಸಿದೆ. ಬದಲಿ ಆಟಗಾರನಾಗಿ ಹೆನ್ರಿ ನಿಕೋಲ್ಸ್‌’ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಗಾಯದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್’ಗೆ ಸಂಕಷ್ಟ ಹೆಚ್ಚುವುದು ಖಚಿತ.

ನ್ಯೂಜಿಲೆಂಡ್‌ ಕೋಚ್ ಮಾಹಿತಿ ನೀಡಿರುವಂತೆ, “ಪ್ರಮುಖ ಪಂದ್ಯವೊಂದರ ಮೊದಲು ಡೆವೊನ್ ಗಾಯಗೊಂಡಿರುವುದು ನಮಗೆ ದೊಡ್ಡ ಹೊಡೆತ ನೀಡಿದಂತಿದೆ. ಅಗ್ರ ಕ್ರಮಾಂಕದಲ್ಲಿ ಕಾನ್ವೇಯನ್ನು ಮಿಸ್ ಮಾಡಿಕೊಳ್ಳಲಿದ್ದೇಚೆ. ಈ ಸರಣಿಗೂ ಮುನ್ನ ಕಾನ್ವೇ ಉತ್ತಮ ಫಾರ್ಮ್‌;ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಅವರು ಗಾಯಗೊಂಡಿದ್ದಾರೆ” ಎಂದಿದ್ದಾರೆ.

ಇದನ್ನೂ ಓದಿ:  Video: ಪ್ರಮಾಣಿಸುವ ಸೈಕಲ್‌ನಲ್ಲೇ ಬಿಸಿ ಕಾಫಿ ಮಾಡಿ ಮಾರುತ್ತಿರುವ ಈ ಭೂಪ ! ಗ್ರಾಹಕರು ಫುಲ್‌ ಖುಷ್

ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಕಾನ್ವೇ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಸೀಸನ್’ನಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದ ಕಾನ್ವೆ, ಈ ಬಾರಿ ಆಡುವುದು ಅನುಮಾನ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News