Indian Premier League 2024: ಇಂದಿನಿಂದ ಐಪಿಎಲ್ ಹಬ್ಬ ಆರಂಭವಾಗಲಿದೆ. ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ದೇಶದ ಕೋಟ್ಯಂತರ ಜನರು ಐಪಿಎಲ್ ವೀಕ್ಷಿಸಲು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಈ ನಡುವೆ ಐದು ಬಾರಿ ಚಾಂಪಿಯನ್ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡಕ್ಕೆ 2nd PUC ಓದುತ್ತಿರುವ ಹುಡುಗನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಇದು ಕೋಟ್ಯಂತರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದು, ಈ ಯುವಕನ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಹೌದು, ಗಾಯದ ಸಮಸ್ಯೆಯಿಂದ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿರುವ ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕ ಬದಲಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ದಕ್ಷಿಣ ಆಫ್ರಿಕಾದ ವೇಗಿ ಕ್ವೆನಾ ಮಪಾಕಾ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ ಈತನಿಗೆ ಕೇವಲ 17 ವರ್ಷ ವಯಸ್ಸಷ್ಟೇ. ಇನ್ನೂ ಅಚ್ಚರಿಯ ಸಂಗತಿ ಅಂದ್ರೆ ಈತ ಪ್ರಸ್ತುತ 12ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.
ಇದನ್ನೂ ಓದಿ: IPL 2024: CSK ಅಭಿಮಾನಿಗಳಿಗೆ ಬಿಗ್ ಶಾಕ್.. ಧೋನಿ ಕ್ಯಾಪ್ಟನ್ಸಿ ಅಂತ್ಯ.. ಈ ಯುವ ಆಟಗಾರನೇ ನಾಯಕ!!
17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗುತ್ತಿದ್ದಂತೆ ಕೆಲ ತಂಡಗಳಲ್ಲಿ ದೊಡ್ಡ ಬದಲಾವಣೆಗಳು ಆಗುತ್ತಿವೆ. ಫ್ರಾಂಚೈಸಿಗಳು ಈ ವರ್ಷ ಗಾಯ ಅಥವಾ ಇತರ ಕಾರಣಗಳಿಂದ ಲೀಗ್ನಿಂದ ಹೊರಗುಳಿದ ಆಟಗಾರರ ಬದಲು ಹೊಸ ಮುಖಗಳಿಗೆ ಅವಕಾಶ ನೀಡುತ್ತಿವೆ. ಅದರಂತೆ ಇದೀಗ ಮುಂಬೈ ಇಂಡಿಯನ್ಸ್ ತನ್ನ ತಂಡಕ್ಕೆ ಹೊಸ ಆಟಗಾರನನ್ನು ಆಯ್ಕೆ ಮಾಡಿಕೊಂಡಿದೆ.
ಇತ್ತೀಚೆಗಷ್ಟೇ ನಡೆದ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಕ್ವೆನಾ ಮಪಾಕಾ ಅದ್ಭುತ ಪ್ರದರ್ಶನ ನೀಡಿದ್ದರು. ಕೇವಲ 6 ಪಂದ್ಯಗಳಲ್ಲಿ ಆತ 21 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಜಸ್ಪ್ರಿತ್ ಬುಮ್ರಾ ರೀತಿ ಮಪಾಕಾ ಸಹ ಅತ್ಯುತ್ತಮ ಯಾರ್ಕರ್ ಎಸೆಯುತ್ತಾನೆ. ಚೆಂಡನ್ನು ಉತ್ತಮ ವೇಗದಲ್ಲಿ ಸ್ವಿಂಗ್ ಮಾಡುವ ಕಲೆ ಹೊಂದಿರುವ ಮಪಾಕಾ ಮೊದಲ ಪಂದ್ಯದಲ್ಲಿಯೇ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ: IPL 2024: CSK ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್, ಆರಂಭಿಕ ಪಂದ್ಯಗಳಲ್ಲಿ ಈ ಪ್ರಮುಖ ವೇಗಿ ಆಡುವುದಿಲ್ಲ!
ಮಪಾಕ ದಕ್ಷಿಣ ಆಫ್ರಿಕಾ A ಮತ್ತು ದಕ್ಷಿಣ ಆಫ್ರಿಕಾ ಯುವ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ನಲ್ಲಿ ಆಡುತ್ತಿರುವ ಅತ್ಯಂತ ಕಿರಿಯ ಆಟಗಾರರ ಪೈಕಿ ಮಪಾಕಾ ಪ್ರಮುಖರಾಗಿದ್ದಾರೆ. 2006ರ ಏಪ್ರಿಲ್ 8ರಂದು ಜೊಹಾನ್ಸ್ಬರ್ಗ್ನಲ್ಲಿ ಜನಿಸಿದ ಮಪಾಕಾ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದರು. ಆದರೆ ಯಾರೂ ಸಹ ಅವರನ್ನು ಖರೀದಿಸಿರಲಿಲ್ಲ. ಇದೀಗ ಮುಂಬೈ ತಂಡದ ಪರ ಕಣಕ್ಕಿಳಿಯುವ ಅವಕಾಶವನ್ನು ಅವರು ಪಡೆಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ