ಮುಂಬೈ, 16 ಸೆಪ್ಟೆಂಬರ್ 2022: ದಕ್ಷಿಣ ಆಫ್ರಿಕಾದ ದಂತಕಥೆ, ಅಮೋಘ ದಾಖಲೆಯನ್ನು ಹೊಂದಿರುವ ಮಾರ್ಕ್ ಬೌಚರ್ ಅವರನ್ನು 2023 ಐಪಿಎಲ್ಗೆ ಮುಖ್ಯ ಕೋಚ್ ಆಗಿ ಮುಂಬೈ ಇಂಡಿಯನ್ಸ್ ನೇಮಕ ಮಾಡಿರುವುದಾಗಿ ಘೋಷಿಸಿದೆ.
ಮಾರ್ಕ್ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಗಿ ಯಶಸ್ವಿ ವೃತ್ತಿ ಜೀವನವನ್ನು ನಡೆಸಿದ್ದಾರೆ. ವಿಕೆಟ್ ಕೀಪರ್ ಆಗಿ ಅವರು ದಾಖಲೆಯನ್ನೂ ಹೊಂದಿದ್ದಾರೆ. ನಿವೃತ್ತಿಯ ನಂತರ ದಕ್ಷಿಣ ಆಫ್ರಿಕಾದಲ್ಲಿ ಉನ್ನತ ದರ್ಜೆಯ ಕ್ರಿಕೆಟ್ ಫ್ರಾಂಚೈಸಿ ಟೈಟನ್ಸ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಮಾರ್ಕ್ ಐದು ದೇಶೀಯ ಪಂದ್ಯಗಳಲ್ಲೂ ಯಶಸ್ವಿಯಾಗಿ ಆಡಿಸಿದ್ದಾರೆ. 2019 ರಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿತ್ತು. ಅವರು 11 ಟೆಸ್ಟ್ ಗೆಲುವುಗಳು, 12 ಏಕದಿನ ಪಂದ್ಯಗಳ ಗೆಲುವು ಮತ್ತು 23 ಟಿ20 ಗೆಲುವುಗಳನ್ನು ತಂಡಕ್ಕೆ ಒದಗಿಸಿದ್ದಾರೆ.
ಇದನ್ನೂ ಓದಿ : Video : ಈ ಗೋವಾ ಕಾಂಗ್ರೆಸ್ ನಾಯಕ ದೇವರು - ದೇವತೆಗಳನ್ನು ಕೇಳಿ ಬಿಜೆಪಿ ಸೇರಿದ್ದಾನಂತೆ!
ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಚೇರ್ಮನ್ ಆಕಾಶ್ ಎಂ ಅಂಬಾನಿ ಮಾತನಾಡಿ "ಮುಂಬೈ ಇಂಡಿಯನ್ಸ್ಗೆ ಮಾರ್ಕ್ ಅವರನ್ನು ಸ್ವಾಗತಿಸುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ಅಪಾರ ಅನುಭವ ಮತ್ತು ಪರಿಣಿತಿಯಿಂದ ಹಲವು ತಂಡಗಳನ್ನು ಯಶಸ್ಸಿನ ಕಡೆಗೆ ಸಾಗಿಸಿದ್ದಾರೆ. ಎಂಐಗೆ ಅವರು ಅಪಾರ ಮೌಲ್ಯವನ್ನು ಒದಗಿಸುತ್ತಾರೆ ಮತ್ತು ಮುಂಬೈ ಇಂಡಿಯನ್ಸ್ನ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ" ಎಂದಿದ್ದಾರೆ.
ಇದನ್ನೂ ಓದಿ : 2024 ರ ಲೋಕಸಭೆ ಚುನಾವಣೆಗೆ ಮುನ್ನ ಸಿಎಂ ನಿತೀಶ್ ಕುಮಾರ್ ಭರ್ಜರಿ ಘೋಷಣೆ
ಮುಂಬೈ ಇಂಡಿಯನ್ಸ್ನ ಮುಖ್ಯ ಕೋಚ್ ಆಗಿ ನೇಮಕವಾದ ಮಾರ್ಕ್ ಬೌಚರ್ ಮಾತನಾಡಿ "ಮುಂಬೈ ಇಂಡಿಯನ್ಸ್ನ ಮುಖ್ಯ ಕೋಚ್ ಆಗಿ ನೇಮಕವಾಗಿರುವುದು ಖುಷಿಯ ಸಂಗತಿ. ಈ ಫ್ರಾಂಚೈಸಿಯ ಇತಿಹಾಸ ಮತ್ತು ಸಾಧನೆಗಳನ್ನು ಗಮನಿಸಿದರೆ ವಿಶ್ವ ಕ್ರೀಡಾ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿ ಕ್ರೀಡಾ ತಂಡ ಇದಾಗಿದೆ. ಈ ಫಲಿತಾಂಶಗಳನ್ನು ಕಾಯ್ದುಕೊಳ್ಳುವ ಸವಾಲು ನನ್ನ ಮೇಲಿದೆ. ಉತ್ತಮ ನಾಯಕತ್ವ ಮತ್ತು ಆಟಗಾರರನ್ನು ಹೊಂದಿರುವ ಬಲಿಷ್ಠ ತಂಡ ಇದು. ಈ ತಂಡಕ್ಕೆ ಇನ್ನಷ್ಟು ಮೌಲ್ಯ ಒದಗಿಸುವ ಪ್ರಯತ್ನವನ್ನು ನಾನು ಮಾಡುತ್ತೇನೆ" ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.