ಮಂಗಳೂರಿಗೆ ಎಂ.ಎಸ್.ಧೋನಿ ಭೇಟಿ; ಕೂಲ್ ಕ್ಯಾಪ್ಟನ್ ನೋಡಲು ಮುಗಿಬಿದ್ದ ಫ್ಯಾನ್ಸ್!

MS Dhoni in Mangaluru: ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಧೋನಿ ತಮ್ಮ ಆಪ್ತ ಸ್ನೇಹಿತ ಕಾಸರಗೋಡಿನ ಡಾ.ಶಾಜೀರ್ ಗಫಾರ್ ಅವರ ತಂದೆ ಪ್ರೊ ಕೆ.ಕೆ.ಅಬ್ದುಲ್‌ ಗಫಾರ್ ಜೀವನಾಧಾರಿತ ಆತ್ಮಕಥನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದರು.  

Written by - Puttaraj K Alur | Last Updated : Jan 7, 2023, 06:04 PM IST
  • ಬಂದರು ನಗರಿ ಮಂಗಳೂರಿಗೆ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ಭೇಟಿ
  • ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಲ್‌ ಕ್ಯಾಪ್ಟನ್‍ಗೆ ಅದ್ದೂರಿ ಸ್ವಾಗತ
  • ಕಾಸರಗೋಡಿನಲ್ಲಿ ನಡೆದ ಸ್ನೇಹಿತನ ತಂದೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಹಿ ಭಾಗಿ
ಮಂಗಳೂರಿಗೆ ಎಂ.ಎಸ್.ಧೋನಿ ಭೇಟಿ; ಕೂಲ್ ಕ್ಯಾಪ್ಟನ್ ನೋಡಲು ಮುಗಿಬಿದ್ದ ಫ್ಯಾನ್ಸ್! title=
ಮಂಗಳೂರಿಗೆ ಎಂ.ಎಸ್.ಧೋನಿ ಭೇಟಿ

ಮಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಶನಿವಾರ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಲ್‌ ಕ್ಯಾಪ್ಟನ್‍ಗೆ ಅದ್ದೂರಿ ಸ್ವಾಗತ ಕೋರಲಾಯಿತು. ಬಳಿಕ ಮಾಹಿ ಕಾಸರಗೋಡಿನಲ್ಲಿ ನಡೆದ ಸ್ನೇಹಿತನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮುಂಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎಂ.ಎಸ್.ಧೋನಿಯನ್ನು ಶಾಸಕ ಯು.ಟಿ.ಖಾದರ್ ಸಹೋದರ ಯು.ಟಿ.ಇಫ್ತಿಕಾರ್ ಆತ್ಮೀಯವಾಗಿ ಬರಮಾಡಿಕೊಂಡರು. ಕೂಲ್ ಕ್ಯಾಪ್ಟನ್ ಬರುವ ಸುದ್ದಿ ತಿಳಿಸಿದ್ದ ನೂರಾರು ಅಭಿಮಾನಿಗಳು ಏರ್‍ಪೋರ್ಟ್‍ನಲ್ಲಿ ಜಮಾಯಿಸಿದ್ದರು. ಧೋನಿ ಬರುತ್ತಿದ್ದಂತೆಯೇ ಫ್ಯಾನ್ಸ್ ಸೆಲ್ಫಿಗಾಗಿ ಮುಗಿಬಿದ್ದರು.

ಇದನ್ನೂ ಓದಿ: IND vs SL : ಟೀಂ ಇಂಡಿಯಾ ಪ್ಲೇಯಿಂಗ್ 11 ನಿಂದ ಅರ್ಷದೀಪ್, ಶುಭಮನ್ ಔಟ್!

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಧೋನಿ ಶನಿವಾರ ಸಂಜೆ ಆಯೋಜಿಸಿದ್ದ ತಮ್ಮ ಆಪ್ತ ಸ್ನೇಹಿತ ಕಾಸರಗೋಡಿನ ಡಾ.ಶಾಜೀರ್ ಗಫಾರ್ ಅವರ ತಂದೆ ಪ್ರೊ ಕೆ.ಕೆ.ಅಬ್ದುಲ್‌ ಗಫಾರ್ ಜೀವನಾಧಾರಿತ ಆತ್ಮಕಥನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದರು.  

ಕಾಸರಗೋಡಿ‌ನ ಬೇಕಲ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು ಎಂದು ಮೂಲಗಳಿಂದ ತಿಳಿದುಬಂದಿದೆ. ಏರ್‍ಫೋರ್ಟ್‍ನಲ್ಲಿ ಸಾಕಷ್ಟು ಸಂಖ್ಯೆ ಅಭಿಮಾನಿಗಳು ಜಮಾಯಿಸಿದ್ದರಿಂದ ಭಾರೀ ಭದ್ರತೆಯಲ್ಲಿ ಮಾಹಿಯನ್ನು ಕಾಸರಗೋಡಿಗೆ ಕರೆದುಕೊಂಡು ಹೋಗಲಾಯಿತು.

ಇದನ್ನೂ ಓದಿ: ರಿಷಬ್ ಪಂತ್ ಗೆ ಯಶಸ್ವಿ ಮೊಣಕಾಲಿನ ಶಸ್ತ್ರಚಿಕಿತ್ಸೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News