ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ 10,000 ರನ್ ಪೋರೈಸಿದ ಧೋನಿ

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರದಂದು ಆಸ್ಟ್ರೇಲಿಯಾದ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 10,000 ರನ್ ಗಳ ಕ್ಲಬ್ ಗೆ ಸೇರಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಆಟಗಾರರಾಗಿದ್ದಾರೆ.

Last Updated : Jan 12, 2019, 03:16 PM IST
ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ 10,000 ರನ್ ಪೋರೈಸಿದ ಧೋನಿ  title=

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರದಂದು ಆಸ್ಟ್ರೇಲಿಯಾದ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 10,000 ರನ್ ಗಳ ಕ್ಲಬ್ ಗೆ ಸೇರಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಆಟಗಾರರಾಗಿದ್ದಾರೆ.

ಈ ಹಿಂದೆ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರು 10 ಸಾವಿರಕ್ಕೂ ಅಧಿಕ ರನ್ ಗಳಿಸಿದ ಆಟಗಾರರಾಗಿದ್ದಾರೆ.330 ಏಕದಿನ ಪಂದ್ಯಗಳಲ್ಲಿ 49.75 ಸರಾಸರಿಯೊಂದಿಗೆ ಧೋನಿ  10,000 ರನ್ಗಳನ್ನು ಗಳಿಸಿದ್ದಾರೆ, ಇದರಲ್ಲಿ 9 ಶತಕಗಳು ಮತ್ತು 67 ಅರ್ಧಶತಕಗಳಿವೆ. ಒಟ್ಟಾರೆಯಾಗಿ ಏಕದಿನದಲ್ಲಿ , 10,000 ರನ್ ಕ್ಲಬ್ ಸೇರಿದ  12 ನೇ ಆಟಗಾರ ಎನ್ನುವ ಸಾಧನೆಗೆ ಧೋನಿ ಪಾತ್ರರಾಗಿದ್ದಾರೆ.

ಧೋನಿ 2018 ರಲ್ಲಿ ಸೀಮಿತ ಕ್ರಿಕೆಟ್ ಓವರ್ ಗಳಲ್ಲಿ ವೈಫಲ್ಯ ಅನುಭವಿಸಿದ್ದಕ್ಕೆ ಸಾಕಷ್ಟು ಟೀಕೆಯನ್ನು ಎದುರಿಸಿದ್ದರು. 2018ರಲ್ಲಿ  ಧೋನಿ 20 ಏಕದಿನ ಪಂದ್ಯದಲ್ಲಿ ಅರ್ಧಶತಕವಿಲ್ಲದೆ 25 ರ ಸರಾಸರಿಯಲ್ಲಿ 275 ರನ್ ಗಳಿಸಿದ್ದರು. 

Trending News