/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅನೇಕ ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಬಾರಿಯ ಆಟಗಾರರು ಶತಕದ ಮೇಲೆ ಶತಕ ಬಾರಿಸುವ ಮೂಲಕ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಇದೀಗ ಕಳೆದ ದಿನ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ ತಂಡದ ನಾಯಕ ಕೆ.ಎಲ್ ರಾಹುಲ್ ಎರಡನೇ ಶತಕ ದಾಖಲಿಸಿ ಸಾಧನೆ ಮಾಡಿದ್ದಾರೆ. 

ಇದನ್ನು ಓದಿ: iPhone 12 ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಐಪಿಎಲ್‌ನಲ್ಲಿ ಅನೇಕ ಘಟಾನುಘಟಿಗಳು ಆಟವಾಡಿ ಹೋಗಿದ್ದಾರೆ. ಇನ್ನು ಆದರೆ ಅವರ ಹೆಸರಲ್ಲಿರುವ ದಾಖಲೆಗಳು ಶಾಶ್ವತವಾಗಿ ಉಳಿದುಕೊಂಡಿದೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಅನೇಕ ದಿಗ್ಗಜ ಆಟಗಾರರು ಶತಕ ದಾಖಲಿಸಿದ್ದು, ಆ ಪಟ್ಟಿಯಲ್ಲಿ ವೆಸ್ಟ್‌ ಇಂಡೀಸ್‌ ತಂಡ ಕ್ರಿಸ್‌ಗೇಲ್‌ ಅಗ್ರಸ್ಥಾನದಲ್ಲಿದ್ದಾರೆ. 

ಅನೇಕ ಸೀಸನ್‌ಗಳನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಕಳೆದಿರುವ ಕ್ರಿಸ್‌ಗೇಲ್‌ ವೆಸ್ಟ್‌ ಇಂಡೀಸ್‌ ದೈತ್ಯ ಎಂದೇ ಖ್ಯಾತಿ ಪಡೆದವರು. ಐಪಿಎಲ್ ಇತಿಹಾಸದಲ್ಲಿ ಒಟ್ಟು 141 ಇನ್ನಿಂಗ್ಸ್‌ಗಳಲ್ಲಿ 6 ಶತಕ ಸಿಡಿಸಿದ ದಾಖಲೆ ಕ್ರಿಸ್‌ಗೇಪ್‌ ಪರವಾಗಿದೆ. ಇನ್ನು ಯಾವೆಲ್ಲಾ ಆಟಗಾರರು ಎಷ್ಟು ಶತಕ ಬಾರಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ. 

ಕ್ರಿಸ್‌ಗೇಲ್ 6 ಶತಕ (141 ಇನ್ನಿಂಗ್ಸ್‌)
ವಿರಾಟ್ ಕೊಹ್ಲಿ 5 ಶತಕ (207 ಇನ್ನಿಂಗ್ಸ್‌)
ಜಾಸ್ ಬಟ್ಲರ್ 4 ಶತಕ (71 ಇನ್ನಿಂಗ್ಸ್‌)
ಕೆ.ಎಲ್. ರಾಹುಲ್ 4 ಶತಕ (93 ಇನ್ನಿಂಗ್ಸ್‌)
ಶೇನ್ ವ್ಯಾಟ್ಸನ್ 4 ಶತಕ (141 ಇನ್ನಿಂಗ್ಸ್‌)
ಡೇವಿಡ್ ವಾರ್ನರ್ 4 ಶತಕ (155 ಇನ್ನಿಂಗ್ಸ್‌)

ಇದನ್ನು ಓದಿ: IPL : ಇಂದು ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಚೆನ್ನೈ!

ವಿರಾಟ್‌ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಭಾರತೀಯ ಬ್ಯಾಟ್ಸ್‌ಮನ್. ಇನ್ನು ವಿರಾಟ್‌ ಬಳಿಕ ಕನ್ನಡಿಗ ಕೆಎಲ್‌ ರಾಹುಲ್‌ ಅವರು ನಾಲ್ಕು ಶತಕ ಕಲೆಹಾಕಿದ್ದಾರೆ. ಈ ಮೂಲಕ ಇಬ್ಬರು ಭಾರತೀಯ ಆಟಗಾರರು ಶತಕವೀರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Most Century holders in IPL History
News Source: 
Home Title: 

ಐಪಿಎಲ್‌ ಇತಿಹಾಸದ ಶತಕವೀರರು: ಸಾಧಕರ ಪಟ್ಟಿ ಸೇರಿದ ಕನ್ನಡಿಗ ರಾಹುಲ್‌

ಐಪಿಎಲ್‌ ಇತಿಹಾಸದ ಶತಕವೀರರು: ಸಾಧಕರ ಪಟ್ಟಿ ಸೇರಿದ ಕನ್ನಡಿಗ ರಾಹುಲ್‌
Caption: 
IPL Century List
Yes
Is Blog?: 
No
Tags: 
Facebook Instant Article: 
Yes
Highlights: 

ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ ಐಪಿಎಲ್‌ 

ಅತೀ ಹೆಚ್ಚು ಶತಕ ಬಾರಿಸಿ ಅಗ್ರಸ್ಥಾನದಲ್ಲಿರುವ ಕ್ರಿಸ್‌ಗೇಲ್‌ 

ಕನ್ನಡಿಗ ಕೆಎಲ್‌ ರಾಹುಲ್‌ಗೆ ಸ್ಥಾನ

Mobile Title: 
ಐಪಿಎಲ್‌ ಇತಿಹಾಸದ ಶತಕವೀರರು: ಸಾಧಕರ ಪಟ್ಟಿ ಸೇರಿದ ಕನ್ನಡಿಗ ರಾಹುಲ್‌
Bhavishya Shetty
Publish Later: 
No
Publish At: 
Monday, April 25, 2022 - 10:02
Created By: 
Surendra Naik
Updated By: 
Bhavishya Shetty
Published By: 
Surendra Naik
Request Count: 
1
Is Breaking News: 
No