MIW vs RCBW, WPL 2024: ಎಲಿಸ್‌ ಪೆರಿ ಏಕಾಂಗಿ ಹೋರಾಟ, ಮೊದಲ ಬಾರಿ ಫೈನಲ್‌ ಪ್ರವೇಶಿಸಿದ RCB!

Womens Premier League 2024: ಅಲ್ಪಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸುಲಭ ಗೆಲುವು ಲಭಿಸುತ್ತಿತ್ತು. ಆದರೆ ಆರ್‌ಸಿಬಿ ಬೌಲಿಂಗ್‌ ದಾಳಿಗೆ ಸಿಲುಕಿದ ಮುಂಬೈ ಅಂತಿಮವಾಗಿ ಸೋಲು ಕಾಣಬೇಕಾಯಿತು. ​

Written by - Puttaraj K Alur | Last Updated : Mar 16, 2024, 12:18 AM IST
  • ಬಲಿಷ್ಠ ಮುಂಬೈ ಇಂಡಿಯನ್ಸ್‌ ವಿರುದ್ಧ ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ
  • ಎಲಿಸ್‌ ಪೆರಿ ಏಕಾಂಗಿ ಹೋರಾಟ, ಆರ್‌ಸಿಬಿ ಬೌಲರ್‌ಗ ಕೈಚಳಕ್ಕೆ ಸೋತ ಮುಂಬೈ
  • ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ ಆರ್‌ಸಿಬಿ
MIW vs RCBW, WPL 2024: ಎಲಿಸ್‌ ಪೆರಿ ಏಕಾಂಗಿ ಹೋರಾಟ, ಮೊದಲ ಬಾರಿ ಫೈನಲ್‌ ಪ್ರವೇಶಿಸಿದ RCB! title=
ಮುಂಬೈ ಮಣಿಸಿದ RCB ಫೈನಲ್‌ಗೆ!

Womens Premier League 2024: ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡವು ಮೊದಲ ಬಾರಿಗೆ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಟಿ-20 ಟೂರ್ನಿಯ ಮಹತ್ವದ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ವಿರುದ್ಧ 5 ರನ್‌ ಅಂತರದ ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 

ಎಲಿಸ್‌ ಪೆರಿ ಏಕಾಂಗಿ ಹೋರಾಟ!

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 135 ರನ್‌ ಗಳಿಸಿತು. ಆರ್‌ಸಿಬಿ ಪರ ಎಲಿಸ್‌ ಪೆರಿ ಏಕಾಂಗಿ ಹೋರಾಟ ನಡೆಸಿ ಆಕರ್ಷಕ ಅರ್ಧಶತಕ(66) ಬಾರಿಸಿದರು. ಇನ್ನುಳಿದಂತೆ ಯಾವೊಬ್ಬ ಆಟಗಾರ್ತಿಯೂ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನಿಂತು ಆಟವಾಡಲಿಲ್ಲ. ರಿಚಾ ಘೋಷ್(‌14), ನಾಯಕಿ ಸ್ಮೃತಿ ಮಂದಾನ(10), ಸೋಫಿ ಡಿವೈನ್(‌10), ಜಾರ್ಜಿಯಾ ವೇರ್ಹ್ಯಾಮ್(ಅಜೇಯ 18) ಮತ್ತು ಸೋಫಿ ಮೊಲಿನೆಕ್ಸ್(ಅಜೇಯ 11) ರನ್‌ ಗಳಿಸಿದರು.

ಇದನ್ನೂ ಓದಿ: MIW vs RCBW: ರಿಚಾ ಘೋಷ್, ಎಲ್ಸೆ ಪೆರಿ ಅಬ್ಬರಕ್ಕೆ ಬೆಚ್ಚಿದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ...! 

ನಾಯಕಿಯ ಹೋರಾಟ ವ್ಯರ್ಥ

ಅಲ್ಪಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸುಲಭ ಗೆಲುವು ಲಭಿಸುತ್ತಿತ್ತು. ಆದರೆ ಆರ್‌ಸಿಬಿ ಬೌಲಿಂಗ್‌ ದಾಳಿಗೆ ಸಿಲುಕಿದ ಮುಂಬೈ ಅಂತಿಮವಾಗಿ ಸೋಲು ಕಾಣಬೇಕಾಯಿತು. ಗೆಲುವಿನ ಗುರಿ ಬೆನ್ನತ್ತಿದ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡ ಕೇವಲ 130 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಪರ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌(33) ಹೋರಾಟ ವ್ಯರ್ಥವಾಯಿತು. ಇನ್ನುಳಿದಂತೆ ಅಮೆಲಿಯಾ ಕೆರ್(ಅಜೇಯ 27), ನ್ಯಾಟ್ ಸ್ಕಿವರ್-ಬ್ರಂಟ್(23), ಯಾಸ್ತಿಕಾ ಭಾಟಿಯಾ(19) ಮತ್ತು ಹೇಲಿ ಮ್ಯಾಥ್ಯೂಸ್(15) ರನ್‌ ಗಳಿಸಿದರು. 

ಆರ್‌ಸಿಬಿ ಪರ ಅತ್ಯುತ್ತಮ ಬೌಲಿಂಗ್‌ ಮಾಡಿದ ಶ್ರೇಯಾಂಕಾ ಪಾಟೀಲ್ 2 ವಿಕೆಟ್‌ ಕಬಳಿಸಿ ಮಿಂಚಿದರು. ಎಲ್ಲಿಸ್ ಪೆರ್ರಿ, ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್ ಮತ್ತು ಆಶಾ ಸೋಭಾನ ತಲಾ ಒಂದೊಂದು ವಿಕೆಟ್‌ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: WPL 2024, RCBW vs DCW: RCB ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್..!

ಮೊದಲ ಬಾರಿ ಫೈನಲ್‌ ಪ್ರವೇಶ

ಮಹಿಳಾ ಪ್ರೀಮಿಯರ್‌ ಲೀಗ್‌ 2ನೇ ಆವೃತ್ತಿಯಲ್ಲಿ ಆರ್‌ಸಿಬಿ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಕಳೆದ ಬಾರಿ ಪ್ಲೇ-ಅಫ್‌ಗೆ ತಲುಪುವಲ್ಲಿ ವಿಫಲವಾಗಿತ್ತು. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸ್ಮೃತಿ ಮಂದಾನ ಪಡೆಯು ಪ್ರಶಸ್ತಿಗಾಗಿ ದೆಹಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಾಡಲಿದೆ. ಈ ಪಂದ್ಯವನ್ನು ಗೆದ್ದರೆ ಆರ್‌ಸಿಬಿ ತಂಡ ಪುರುಷರ ತಂಡವೇ ಮಾಡಲಾಗದ ಮಹತ್ತರ ಸಾಧನೆಯನ್ನು ಮಾಡಲಿದೆ. ಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ʼಹೆಣ್ಮಕ್ಳೆ ಸ್ಟ್ರಾಂಗು ಗುರು!ʼ ಅನ್ನೋದನ್ನು ಸ್ಮೃತಿ ಮಂದಾನ ಬಳಗವು ಸಾಬೀತುಪಡಿಸಲಿ ಅಂತಾ ಅಭಿಮಾನಿಗಳು ಆರ್‌ಸಿಬಿ ತಂಡಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News