KKR vs LSG : ಡಿ ಕಾಕ್-ರಾಹುಲ್ ಬ್ಯಾಟಿಂಗ್ ಅಬ್ಬರ : ಲಕ್ನೋಗೆ ಭರ್ಜರಿ ಗೆಲವು!

ತಂಡದ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಡಿ ಕಾಕ್ ಮತ್ತೆ ರಾಹುಲ್ ಪಾರ್ಟ್ನರ್ ಶಿಪ್ ನಲ್ಲಿ 210 ಗಳಿಸಿದರು.

Written by - Channabasava A Kashinakunti | Last Updated : May 18, 2022, 11:34 PM IST
  • ಇದು ಐಪಿಎಲ್ 2022 ರ ಬಿಗ್ ಇನ್ನಿಂಗ್ಸ್
  • ಗೆದ್ದು ಬಿಗಿದ ಲಕ್ನೋ ಸೂಪರ್ ಜೈಂಟ್ಸ್
  • ಕೆಎಲ್ ರಾಹುಲ್ ನಾಯಕತ್ವದ ಇನ್ನಿಂಗ್ಸ್
KKR vs LSG : ಡಿ ಕಾಕ್-ರಾಹುಲ್ ಬ್ಯಾಟಿಂಗ್ ಅಬ್ಬರ : ಲಕ್ನೋಗೆ ಭರ್ಜರಿ ಗೆಲವು! title=

Quinton de Kock 140 Runs : ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು ಬಿಗಿದೆ. ಈ ಪಂದ್ಯದಲ್ಲಿ, ತಂಡದ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಡಿ ಕಾಕ್ ಮತ್ತೆ ರಾಹುಲ್ ಪಾರ್ಟ್ನರ್ ಶಿಪ್ ನಲ್ಲಿ 210 ಗಳಿಸಿದರು.

ಇದು ಐಪಿಎಲ್ 2022 ರ ಬಿಗ್ ಇನ್ನಿಂಗ್ಸ್

ಕೆಎಲ್ ರಾಹುಲ್ ಅವರೊಂದಿಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಇನ್ನಿಂಗ್ಸ್ ಆರಂಭಿಸಿದ್ದರು. ಕ್ವಿಂಟನ್ ಡಿ ಕಾಕ್ ಈ ಪಂದ್ಯದಲ್ಲಿ ದಾಖಲೆಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ 70 ಎಸೆತಗಳಲ್ಲಿ ಅಜೇಯ 140 ರನ್ ಗಳಿಸಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರ ಬಿಸಿದ ಬ್ಯಾಟ್‌ಗೆ 10 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸುರಿ ಮಳೆಯಾಯಿತು. ಈ ಇನ್ನಿಂಗ್ಸ್‌ನ ನಂತರ, ಅವರು ವಿಕೆಟ್‌ಕೀಪರ್ ಆಗಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ಬ್ಯಾಟ್ಸ್‌ಮನ್ ಆದರು. ಇದು ಈ ಸೀಸನ್ ನ ಅತಿದೊಡ್ಡ ಇನ್ನಿಂಗ್ಸ್ ಆಗಿದ್ದು, ಅದಕ್ಕೂ ಮೊದಲು ಬಟ್ಲರ್ 116 ರನ್ ಗಳಿಸಿದ್ದರು.

ಇದನ್ನೂ ಓದಿ : LSG vs KKR: ಲಕ್ನೋ-ಕೊಲ್ಕತ್ತಾ‌ ಫೈಟ್‌: ಪ್ಲೇ ಆಫ್‌ ಪ್ರವೇಶಿಸುತ್ತಾ ʼಕನ್ನಡಿಗʼನ ತಂಡ!

ವಿಕೆಟ್‌ಗಾಗಿ ಹಾತೊರೆದೆ ಕೆಕೆಆರ್

ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಇಬ್ಬರೂನಾಟ್ ಔಟ್ ಉಳಿದರು. ಕೆಕೆಆರ್ ಬೌಲರ್‌ಗಳು ಒಂದೇ ಒಂದು ವಿಕೆಟ್ ಪಡೆಯಲು ಆಗಲಿಲ್ಲ. ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವೆ 20 ಓವರ್‌ಗಳಲ್ಲಿ 210 ರನ್‌ಗಳ ಜೊತೆಯಾಟವಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಆರಂಭಿಕ ಪಾರ್ಟ್ನರ್ ಶಿಪ್ ಆಗಿದೆ. ಐಪಿಎಲ್ ಇತಿಹಾಸದಲ್ಲಿ ಓಪನರ್ ಪಾರ್ಟ್ನರ್ ಶಿಪ್ ನಲ್ಲಿ 20 ಓವರ್‌ಗಳನ್ನು ಆಡಿದ್ದು ಇದೇ ಮೊದಲು. ಕ್ವಿಂಟನ್ ಡಿ ಕಾಕ್ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಕೆಎಲ್ ರಾಹುಲ್ ನಾಯಕತ್ವದ ಇನ್ನಿಂಗ್ಸ್

ಕ್ವಿಂಟನ್ ಡಿ ಕಾಕ್ ಹೊರತಾಗಿ ನಾಯಕ ಕೆಎಲ್ ರಾಹುಲ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಕೆಎಲ್ ರಾಹುಲ್ 51 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟ್‌ನಿಂದ 3 ಬೌಂಡರಿ ಮತ್ತು 4 ಸಿಕ್ಸರ್‌ಗಳು ಬಂದವು. ಕೆಎಲ್ ರಾಹುಲ್ ಐಪಿಎಲ್ 2022 ರಲ್ಲಿ 500 ರನ್ ಗಡಿ ದಾಟಿದ್ದಾರೆ. ಐಪಿಎಲ್‌ನಲ್ಲಿ 9ನೇ ಬಾರಿಗೆ ಕೆಎಲ್ ರಾಹುಲ್ 500ರ ಗಡಿ ದಾಟಿದ್ದಾರೆ.

ಇದನ್ನೂ ಓದಿ : MI vs SRH, IPL 2022: ಮುಂಬೈಗೆ ನಿರಾಸೆ, ಹೈದರಾಬಾದ್‌ಗೆ ರೋಚಕ ಗೆಲುವು

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News