ನವದೆಹಲಿ: ಕ್ರಿಕೆಟ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದಲ್ಲಿ ಕೊಹ್ಲಿಗೆ ನಾಯಕತ್ವವನ್ನು ನಿಭಾಯಿಸುವುದು ಸುಲಭ ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿಗೆ ಆಸ್ಟ್ರೇಲಿಯಾದ ವಿರುದ್ಧ ಏಕದಿನ ಸರಣಿ ಸೋತ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಕುಂಬ್ಳೆ ಧೋನಿಯವರ ಅನುಪಸ್ಥಿತಿಯಿಂದಲೇ ಭಾರತ ಸೋಲನ್ನು ಅನುಭವಿಸಿತು ಎಂದು ಹೇಳಿದರು.ಧೋನಿ ಸುತ್ತ ಇದ್ದಾಗ ಕೊಹ್ಲಿ ಉತ್ತಮ ನಾಯಕ ಎಂದು ಹೇಳುವುದಕ್ಕಿಂತ,ಸ್ಟಂಪ್ ನ ಹಿಂದುಗಡೆ ಧೋನಿ ಇದ್ದಾಗ ಕೊಹ್ಲಿಗೆ ನಾಯಕತ್ವ ನಿಭಾಯಿಸುವುದು ಆರಾಮದಾಯಕ,ಅವರ ಜೊತೆಗಿನ ಮಾತುಕತೆ ಕೊಹ್ಲಿಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ ಎಂದು ಅನಿಲ್ ಕುಂಬ್ಳೆ ಹೇಳಿದರು.
"ತಂಡವನ್ನು ಮುನ್ನಡೆಸುವುದು ಧೋನಿಗೆ ಸಹಜವಾಗಿ ಬಂದಿದೆ, ಬಹಳ ಧೀರ್ಘ ಸಮಯದವರೆಗೆ ಅವರು ನಾಯಕರಾಗಿದ್ದವರು, ಅಲ್ಲದೆ ಸ್ಟಂಪ್ ಹಿಂದುಗಡೆ ಇದ್ದಿದ್ದರಿಂದ ಅವರು ಆಟವನ್ನು ಚೆನ್ನಾಗಿ ಅರಿಯ ಬಲ್ಲವರಾಗಿದ್ದಾರೆ, ಬೌಲರ್ ಜೊತೆಗೆ ಮಾತುಕತೆ ನಡೆಸುವುದರ ಮೂಲಕ ಯಾವ ಭಾಗದಲ್ಲಿ ಬೌಲನ್ನು ಹಾಕಬೇಕು ಎಲ್ಲಿ ಹಾಕಬೇಕು ಎನ್ನುವ ವಿಚಾರದ ಕುರಿತಾಗಿ ಅವರು ಚರ್ಚಿಸಬಲ್ಲರು.ಈ ಹಿನ್ನಲೆಯಲ್ಲಿ ಕೊಹ್ಲಿ ಕ್ಷೇತ್ರ ರಕ್ಷಣೆ ಹೊಂದಾಣಿಕೆಯಲ್ಲಿ ಧೋನಿ ಮೇಲೆ ಅವಲಂಬಿತರಾಗಿದ್ದಾರೆ "ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.