ಖೇಲೋ ಇಂಡಿಯಾ ಮಹಿಳಾ ವಾಲಿಬಾಲ್ ಲೀಗ್ ಪಂದ್ಯಾವಳಿಗೆ ಅ. 27 ರಂದು ರಾಜ್ಯದ ಮಹಿಳಾ ತಂಡದ ಆಯ್ಕೆ

ಮಹಿಳಾ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆಯನ್ನು ಅಕ್ಟೊಬರ್ 27 ರಂದು ಬೆಳಿಗ್ಗೆ 09 ಗಂಟೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದ ವಾಲಿಬಾಲ್ ಅಂಕಣದಲ್ಲಿ ಆಯೋಜಿಸಲಾಗಿದೆ.

Written by - Zee Kannada News Desk | Last Updated : Oct 23, 2022, 11:54 PM IST
  • ಆಯ್ಕೆ ಪ್ರಕ್ರೀಯೆಯಲ್ಲಿ ವಿವಿಧ ಜಿಲ್ಲೆಯ ಮಹಿಳಾ ವಾಲಿಬಾಲ್ ಕ್ರೀಡಾಪಟುಗಳು ಹಾಗೂ ಸ್ಥಳೀಯ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸಬಹುದಾಗಿದೆ.
  • ಜನೆವರಿ 01, 2004 ಅಥವಾ ನಂತರ ಜನಿಸಿದ ಕ್ರೀಡಾಪಟುಗಳು ಆಯ್ಕೆ ಪ್ರಕ್ರೀಯೆಯಲ್ಲಿ ಭಾಗವಹಿಸಬಹುದು.
  • ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಊಟೋಪಹಾರ, ಪ್ರಯಾಣ ಭತ್ಯೆ ಹಾಗೂ ದಿನಭತ್ಯೆಯನ್ನು ಇಲಾಖೆಯಿಂದ ಭರಿಸಲಾಗುವುದಿಲ್ಲ.
ಖೇಲೋ ಇಂಡಿಯಾ ಮಹಿಳಾ ವಾಲಿಬಾಲ್ ಲೀಗ್ ಪಂದ್ಯಾವಳಿಗೆ ಅ. 27 ರಂದು ರಾಜ್ಯದ ಮಹಿಳಾ ತಂಡದ ಆಯ್ಕೆ title=

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಶಾಖೆಯಾದ ಕ್ರೀಡಾ ಕಲ್ಯಾಣದ ವತಿಯಿಂದ ನವೆಂಬರ್ 02, 2022 ರಿಂದ 06 ರವರೆಗೆ ಹಿಮಾಚಲ ಪ್ರದೇಶ ಸಿಮ್ಲಾದಲ್ಲಿ ನಡೆಯುವ 19 ವರ್ಷದೊಳಗಿನ ಖೇಲೋ ಇಂಡಿಯಾ ಮಹಿಳಾ ವಾಲಿಬಾಲ್ ಲೀಗ್ ಪಂದ್ಯಾವಳಿಗೆ ಕರ್ನಾಟಕ ರಾಜ್ಯದಿಂದ ಮಹಿಳಾ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆಯನ್ನು ಅಕ್ಟೊಬರ್ 27 ರಂದು ಬೆಳಿಗ್ಗೆ 09 ಗಂಟೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದ ವಾಲಿಬಾಲ್ ಅಂಕಣದಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ: Rohit Sharma: ಎಂಟು T20 ವಿಶ್ವಕಪ್ ನಲ್ಲಿ ಆಡಿದ ಟೀಂ ಇಂಡಿಯಾದ ಮೊದಲ ಸ್ಟಾರ್ ಆಟಗಾರ ಈತ!

ಆಯ್ಕೆ ಪ್ರಕ್ರೀಯೆಯಲ್ಲಿ ವಿವಿಧ ಜಿಲ್ಲೆಯ ಮಹಿಳಾ ವಾಲಿಬಾಲ್ ಕ್ರೀಡಾಪಟುಗಳು ಹಾಗೂ ಸ್ಥಳೀಯ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸಬಹುದಾಗಿದೆ. ಜನೆವರಿ 01, 2004 ಅಥವಾ ನಂತರ ಜನಿಸಿದ ಕ್ರೀಡಾಪಟುಗಳು ಆಯ್ಕೆ ಪ್ರಕ್ರೀಯೆಯಲ್ಲಿ ಭಾಗವಹಿಸಬಹುದು.ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಊಟೋಪಹಾರ, ಪ್ರಯಾಣ ಭತ್ಯೆ ಹಾಗೂ ದಿನಭತ್ಯೆಯನ್ನು ಇಲಾಖೆಯಿಂದ ಭರಿಸಲಾಗುವುದಿಲ್ಲ.ಆಯ್ಕೆಯಾದ ಕ್ರೀಡಾಪಟುಗಳು ತರಬೇತಿ ಶಿಬಿರ ಹಾಗೂ ಪಂದ್ಯಾವಳಿಗೆ ತೆರಳಲು ಪೂರ್ವ ಸಿದ್ದತೆಯೊಂದಿಗೆ ಹಾಗೂ ಆಧಾರ ಕಾರ್ಡ್ ಮತ್ತು ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯೊಂದಿಗೆ ಬರಬೇಕು.

ಇದನ್ನೂ ಓದಿ: Rohit Sharma Emotional Expression: ರಾಷ್ಟ್ರಗೀತೆ ಕೇಳುತ್ತಿದ್ದಂತೆ ಮೈದಾನದಲ್ಲೇ ಕಣ್ಣೀರು ಹಾಕಿದ ರೋಹಿತ್ ಶರ್ಮಾ! ವಿಡಿಯೋ ನೋಡಿ

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಧಾರವಾಡ. ದೂರವಾಣಿ 0836-2447424 ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News