ನವದೆಹಲಿ: ಭಾರತದ ಮಾಜಿ ಕ್ಯಾಪ್ಟನ್ ಕೂಲ್ ಧೋನಿ ಈ ದಾಖಲೆ ಮಾಡಲು ಕೇವಲ ಒಂದೇ ರನ್ನಿನ ಅವಶ್ಯಕತೆ ಇದೆ. ಅಷ್ಟಕ್ಕೂ ಈ ದಾಖಲೆ ಯಾವುದು ಅಂತಿರಾ?
ಹೌದು, ಈ ಮೈಲುಗಲ್ಲು ಮತ್ತ್ಯಾವುದು ಅಲ್ಲ ಅದು 10 ಸಾವಿರ ರನ್ ಗಳ ದಾಖಲೆ!.ಈಗ ಈ ದಾಖಲೆಯನ್ನು ತಲುಪುವದಕ್ಕೆ ಕೇವಲ ಒಂದು ರನ್ನಿನ ಅವಶ್ಯಕತೆ ಇದೆ.ಇದುವರೆಗೂ ಧೋನಿ ಏಕದಿನ ಪಂದ್ಯದಲ್ಲಿ 9999 ರನ್ ಗಳಿಸಿದ್ದಾರೆ. ಒಂದು ವೇಳೆ ಈ ದಾಖಲೆಯನ್ನು ಧೋನಿ ಮಾಡಿದರೆ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ ಐದನೇ ಆಟಗಾರ ಮತ್ತು ವಿಶ್ವದ ೧೩ ನೆ ಆಟಗಾರ ಎನ್ನುವ ಖ್ಯಾತಿಗೆ ಒಳಗಾಗಲಿದ್ದಾರೆ.
ಇತ್ತೀಚಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ಸಾಧನೆಯನ್ನು ಕೇವಲ 205 ಇನ್ನಿಂಗ್ಸ್ ಗಳಲ್ಲಿ ಮಾಡುವ ಮೂಲಕ ಸಚಿನ್ ದಾಖಲೆಯನ್ನು ಅಳಿಸಿಹಾಕಿದ್ದರು.ಧೋನಿ ಇದುವರೆಗೆ 50 ಓವರ್ ಪಂದ್ಯಗಳಲ್ಲಿ 10.173 ರನ್ ಗಳಿಸಿದ್ದಾರೆ. ಆದರೆ ಇದರಲ್ಲಿ ಆಫ್ರಿಕಾ XI ಮತ್ತು ಏಷ್ಯಾ XI ನಲ್ಲಿಯ 174 ರನ್ ಗಳು ಸೇರಿವೆ. ಆದ್ದರಿಂದ ಸಧ್ಯ ಅವರು ಈಗ ಒಂದು ರನ್ ಗಳ ಕೊರತೆಯನ್ನು ಮಾತ್ರ ಎದುರಿಸಿದ್ದಾರೆ.
ಇನ್ನೊಂದು ವಿಶೇಷವೇನೆಂದರೆ ಈ ದಾಖಲೆಯನ್ನು ಮಾಡಿದರೆ ಏಕೈಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ನೊಬ್ಬ 10,000 ರನ್ ಗಳ ದಾಖಲೆಯನ್ನು ಮಾಡಿದ ಹಾಗೆ ಆಗುತ್ತದೆ.